ಬೆಂಗಳೂರು: ಬೆಂಗಳೂರಿನಲ್ಲಿ ಭಾರಿ ಮಳೆಯಿಂದ ಯಲಹಂಕ ಬಳಿ ಇರುವ ಸಿಂಗಾಪುರದ 66 ಎಕರೆ ವಿಸ್ತೀರ್ಣದ ಕೆರೆ ಕೋಡಿ ಹರಿದು ಕೇಂದ್ರೀಯ ವಿಹಾರ ಅಪಾರ್ಟ್ ಮೆಂಟ್ ಗೆ ನೀರು ನುಗ್ಗಿದೆ. ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ನಾಲ್ಕು ದಿನದಿಂದ ರಾಜ್ಯದಲ್ಲಿ ಮಳೆ ಹೆಚ್ಚಾಗಿದ್ದು ಇದರಿಂದ ಅನೇಕ ಅವಾಂತರಗಳು ಸೃಷ್ಟಿಯಾಗಿವೆ. ಅದೇ ರೀತಿ ಕೇಂದ್ರೀಯ ವಿಹಾರಕ್ಕೆ ನೀರು ನುಗ್ಗಿದ್ದು ಮೂರ್ನಾಲ್ಕು ಅಡಿ ನೀರು ನಿಂತುಕೊಂಡಿದೆ. ಇದರಿಂದ ಅಲ್ಲಿನ ನಿವಾಸಿಗಳು ಹೊರಬರಲಾಗದೆ ಹಾಗೆಯೇ ಒಳಗಡೆ ಹೋಗಲು ಆಗದೆ ತುಂಬಾ ಅವಸ್ಥೆಯನ್ನು ಪಡೆಯುತ್ತಿದ್ದಾರೆ. ಇಲ್ಲಿಗೆ NDRF, SDRF ತಂಡಗಳು ಆಗಮಿಸಿದ್ದು ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಹಾಗೂ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಹಾಲು ,ನೀರು ,ಬಿಸ್ಕತ್ ಅನ್ನು ಆರೋಗ್ಯ ಸಿಬ್ಬಂದಿ ನೀಡುತ್ತಿದ್ದು, ರಕ್ಷಣಾ ಸಿಬ್ಬಂದಿ ಮೋಟರ್ ಬೋಟ್ ಗಳಿಂದ ಕಾರ್ಯಾಚರಣೆ ಮಾಡುತ್ತಿದ್ದಾರೆ. ಅಪಾರ್ಟ್ಮೆಂಟ್ ನಿವಾಸಿಗಳಿಗೆ ತುರ್ತು ಚಿಕಿತ್ಸೆಯನ್ನು ಸಹ ನೀಡಲಾಗುತ್ತಿದೆ.