Political News: ಜನವರಿ21 ರಂದು ಬೆಳಗಾವಿಯಲ್ಲಿ, ಜೈ ಬಾಪು, ಜೈಭೀಮ, ಜೈ ಸಂವಿಧಾನ ಸಮಾವೇಶ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ, ಪೂರ್ವ ಸಿದ್ಧತಾ ಸಭೆ ನಡೆಯಿತು.
ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ,ಧಾರವಾಡ, ಗದಗ, ಹಾವೇರಿ, ಕಾರವಾರ ಮುಖಂಡರ ಮತ್ತು ಜನಪ್ರತಿನಿಧಿಗಳ ಸಭೆ ಭಾಗವಹಿಸಿದ್ದರು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಇದು ರಾಷ್ಟ್ರೀಯ ಕಾಂಗ್ರೆಸ್ ಕಾರ್ಯಕ್ರಮ. ಗಾಂಧಿಜಿ ಎಲ್ಲರಿಗೂ ಬೇಕು. ಹೀಗಾಗಿ ಎಲ್ಲಾ ಜನರು ಭಾಗವಹಿಸಬೇಕು. ಕಾರ್ಯಕ್ರಮದ ಮೂಲಕ ದೊಡ್ಡ ಸಂದೇಶ ನೀಡಲಾಗುತ್ತೆ.
ಗಾಂಧಿ ಸ್ಮರಣೆ ಮತ್ತು ಸಂವಿಧಾನ ರಕ್ಷಣೆಗಾಗಿ ಈ ಕಾರ್ಯಕ್ರಮ ಆಯೋಜನೆ. ಕಾರವಾರ ಮತ್ತು ಗದಗ, ಹಾವೇರಿ, ಧಾರವಾಡ ಜಿಲ್ಲೆಯಿಂದ 75 ಸಾವಿರ ಜನ ಬರ್ತಾರೆ. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ. ನಾವೆಲ್ಲರೂ ಅಸಲಿ ಗಾಂಧಿಗಳು ಅವರು ಅವರ ಗೊಡ್ಸೆ ಸಂತತಿ ಅವರು ಹಾಗೇ ಮಾತನಾಡುತ್ತಾರೆ. ಅಂತ ಬಿಜೆಪಿ ನಾಯಕರ ನಕಲಿ ಗಾಂಧಿ ಹೇಳಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದರು.