Web News: ಮುಂಬೈನಲ್ಲಿ ಫೇಮಸ್ ತಿಂಡಿ ಅಂದ್ರೆ ವಡಾಪಾವ್. ಹಾಾಗಾಗಿ ಮುಂಬೈಗೆ ಯಾರಾದ್ರೂ ಪ್ರವಾಸಕ್ಕೆ ಹೋದಾಗ, ತಪ್ಪದೇ ವಡಾಪಾವ್ ತಿಂದೇ ಬರ್ತಾರೆ. ಆದ್ರೆ ಈ ವಡಾ ಪಾವ್ ಅನ್ನೋ ತಿಂಡಿ ಹುಟ್ಟಿದ್ದಾದರೂ ಹೇಗೆ..? ಈ ಬಗ್ಗೆ ಪುಟ್ಟ ಮಾಹಿತಿ ಇಲ್ಲಿದೆ ನೋಡಿ.
ವಡಾ ಪಾವ್, ವಿದೇಶಿ ಬರ್ಗರ್‌ಗೂ ಟಕ್ಕರ್ ಕೊಡೋ ಪವರ್ ಹೊಂದಿರುವ ತಿಂಡಿ. ವಿದೇಶಿಗರು ಕೂಡ ಇಷ್ಟಪಟ್ಟು ತಿನ್ನೋ ತಿಂಡಿ. ಬನ್ ಅದರೊಳಗೆ ಬಟಾಟೆ ವಡಾ, ಹಸಿರು ಚಟ್ನಿ, ಬೆಳ್ಳುಳ್ಳಿ ಚಟ್ನಿ ಪುಡಿ, ಹಸಿಮೆಣಸಿನಕಾಯಿ ಹಾಕಿ ಕೊಡ್ತಾರೆ. ಮುಂಬೈನಲ್ಲಂತೂ ಎಷ್ಟೋ ಜನ, ಹಸಿವಾದಾಗ, ವಡಾಪಾವ್ ತಿಂದು, ಹೊಟ್ಟೆ ತುಂಬಿಸಿಕೊಂಡು, ದಿನ ಕಳೆದವರೂ ಇದ್ದಾರೆ.
ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳು ಕೂಡ, ಎಷ್ಟೋ ಬಾರಿ ನಾನು ಊಟಕ್ಕೆ ದುಡ್ಡಿಲ್ಲದೇ, ವಡಾಪಾವ್ ತಿಂದು ನೀರು ಕುಡಿದು ಮಲಗಿದ್ದೇನೆ. ಆ ದಿನಗಳು ಮರೆಯಲಾಗದ ದಿನಗಳು. ಹಾಗಾಗಿ ವಡಾಪಾವ್ ಬರಿ ತಿಂಡಿ ಅಲ್ಲ. ಅದೊಂದು ಎಮೋಷನ್ ನನಗೆ ಅಂತಾ ಹೇಳುವವರಿದ್ದಾರೆ. ನಿಜಕ್ಕೂ ಹಲವರ ಜೀವನದಲ್ಲಿ ವಡಾಪಾವ್ ಬರೀ ತಿಂಡಿ ಅಲ್ಲ. ಅದು ಹಲವರಿಗೆ ಎಮೋಷನ್.
ವಡಾಪಾವ್ ಮೊದಲು ತಯಾರಿಸಿದ್ದು ಯಾರು..?
ಮುಂಬೈನಲ್ಲಿ ಟೆಕ್ಸ್‌ಟೈಲ್ ವರ್ಕರ್‌ಗಳಿಗೆ ಮಧ್ಯಾಹ್ನ ಊಟ ಮಾಡಲು ಕೂಡ ಪುರುಸೊತ್ತಿಲ್ಲದಿರುವಷ್ಟು ಕೆಲಸವಿರುತ್ತಿತ್ತು. ಹಾಗಾಗಿ ಎಷ್ಟೋ ಜನ ಮಧ್ಯಾಹ್ನದ ಊಟವನ್ನೇ ಮರೆತಿದ್ದರು. ಅದಕ್ಕೆ ತಕ್ಕಂತೆ, ಜೇಬಲ್ಲಿ ಹಣವೂ ಕಡಿಮೆ ಇರುತ್ತಿತ್ತು. ಇಂಥವರ ಕಷ್ಟವನ್ನು ಕಂಡ ಅಶೋಕ್ ವೈದ್ಯ ಎಂಬುವವರು ಮುಂಬೈನ ದಾದರ್ ಸ್ಟೇಶನ್‌ನಲ್ಲಿ ವಡಾಪಾವ್ ಅಂಗಡಿ ಇಟ್ಟರು.
ಬನ್ ಒಳಗೆ ಬಟಾಟೆ ವಡೆ ಇಟ್ಟು, ಚಟ್ನಿ ಹಾಕಿ ಜನರಿಗೆ ಸವಿಯಲು ಕೊಟ್ಟರು. ಊಟ ಮಾಡಲಾಗದವರು ಕಡಿಮೆ ಹಣದಲ್ಲಿ ವಡಾಾಪಾವ್ ಖರೀದಿಸಿ ತಿಂದು, ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಮೊದಲು ಬರೀ ವಡಾಪಾವ್ ಇತ್ತು. ಈಗ ಮಾರುಕಟ್ಟೆಯಲ್ಲಿ ತರಹೇವಾರಿ ವಡಾಪಾವ್. ಪನೀರ್ ವಡಾವಾರ್, ಚೀಸ್ ವಡಾಪಾವ್ ಹೀಗೆ ಹಲವು ವೆರೈಟಿ ವಡಾಪಾವ್ ತಿನ್ನಲು ಸಿಗತ್ತೆ.