Web News: ನಾವು ನೀವೆಲ್ಲ ದಿನಸಿ, ಮನೆಗೆ ಬೇಕಾದ ಬೇರೆ ಬೇರೆ ವಸ್ತುಗಳನ್ನು ಖರೀದಿಸಬೇಕು ಅಂತಾ ಮಾರುಕಟ್ಟೆಗೆ ಹೋದಾಗ, ಅಲ್ಲಿ ನಮಗೆ ದೊಡ್ಡದಾದ ಟ್ರಾಲಿ ಕೊಡಲಾಗುತ್ತದೆ. ಆದರೆ ನಾವು ತೆಗೆದುಕೊಂಡು ಹೋದ ಬ್ಯಾಗನ್ನು ಮಾತ್ರ ಮಾರ್ಟ್ ಒಳಗೆ ತೆಗೆದುಕೊಂಡು ಹೋಗಲು ಬಿಡೋದಿಲ್ಲ. ಈ ರೀತಿ ನಿಯಮ ಇರೋದಾದ್ರೂ ಯಾಕೆ..? ಯಾಕೆ ನಮಗೆ ಟ್ರಾಲಿಗಳನ್ನೇ ಕೊಡ್ತಾರೆ ಅಂತಾ ತಿಳಿಯೋಣ ಬನ್ನಿ.
ದೊಡ್ಡ ದೊಡ್ಡ ಮಾರ್ಟ್‌ಗೆ ಹೋದಾಗ ನಿಮಗೆ ಟ್ರಾಲಿ ಕೊಡುತ್ತಾರೆ, ನೀವು ಅದನ್ನು ತೆಗೆದುಕೊಂಡು, ನಮಗೆ ನಾವು ತೆಗೆದುಕೊಂಡ ವಸ್ತುಗಳನ್ನು ಕೈಯಲ್ಲಿ ಹಿಡಿದುಕೊಳ್ಳಲು ಭಾರವಾಗುತ್ತದೆ ಎಂದು ಟ್ರಾಲಿ ಕೊಟ್ಟಿದ್ದಾರೆ ಅಂತಾ ತಿಳಿದುಕೊಳ್ಳುತ್ತೀರಿ. ಆದರೆ ನಿಮ್ಮ ಲೆಕ್ಕಾಚಾರ ತಪ್ಪು. ಇಷ್ಟು ದೊಡ್ಡ ಟ್ರಾಲಿ ತೆಗೆದುಕೊಂಡ ಬಳಿಕ, ನೀವು ಸಣ್ಣ ಪುಟ್ಟ ನಾಾಲ್ಕೈದು ವಸ್ತುಗಳನ್ನು ಖರೀದಿಸಿದರೆ, ಸಾಕೇ. ಇದನ್ನು ನೋಡಿದವರು, ಛೇ ಇಷ್ಟೇ ಖರೀದಿಸಿದ್ದಾರೆ ಎಂದಾಗ, ನಿಮಗೆ ಅವಮಾನವಾಗಬಹುದು. ಅದಕ್ಕೆ ಕೆಲವರು ಒಂದಷ್ಟು ಸಾಮಾನು ಖರೀದಿಸಿ, ಟ್ರಾಲಿ ತುಂಬಿಸುತ್ತಾರೆ. ಅಲ್ಲಿಗೆ ಮಾರ್ಟ್‌ಗೆ ಒಂದಷ್ಟು ಲಾಭವಾಗುತ್ತದೆ.
ಎರಡನೇಯದಾಗಿ ನೀವು ದಿನಸಿ ಖರೀದಿಸಲೆಂದೇ ಮಾರ್ಟ್‌ಗೆ ಹೋಗಿದ್ದರೂ ಕೂಡ, ದಿನಸಿಯನ್ನು ಮೂಲೆಗೆ ಇಟ್ಟಿರುತ್ತಾರೆ. ಆ ಮೂಲೆಗೆ ತಲುಪುವವರೆಗೆ ನೀವು ಹಲವು ವಸ್ತುಗಳನ್ನು ದಾಟಿ ಹೋಗಿರುತ್ತೀರಿ. ಆಗ ನಿಮಗೆ ಅದು ಬೇಕು, ಇದು ಬೇಕು ಎನ್ನಿಸಿ, ಕಂಡದ್ದನ್ನೆಲ್ಲ ಖರೀದಿಸುತ್ತೀರಿ. ಬಳಿಕ ದಿನಸಿ ಖರೀದಿಸುತ್ತೀರಿ. ಅಲ್ಲಿಗೆ 2 ಸಾವಿರವಾಗಬೇಕಿದ್ದ ಬಿಲ್ 4 ಸಾವಿರವಾಗಿರುತ್ತದೆ.
ಮೂರನೇಯದಾಗಿ ಬಿಸ್ಕೇಟ್ಸ್, ಚಾಕೋಲೇಟ್ಸ್, ಚಿಪ್ಸ್‌ನಂಥ ತಿಂಡಿಗಳು ಕೆಳಗಡೆ ಮಕ್ಕಳ ಕೈಗೆಟಕುವಂತೆ, ಕಣ್ಣಿಗೆ ಕಾಣುವಂತೆ ಜೋಡಿಸಿರುತ್ತಾರೆ. ಮಕ್ಕಳು ಅದನ್ನು ಕಂಡ ತಕ್ಷಣ ಚಾಕ್ಲೇಟ್, ಚಿಪ್ಸ್ ಬೇಕು ಅಂತಾ ಹಠ ಮಾಡುತ್ತಾರೆ. ಅವರ ಹಠಕ್ಕೆ ಪೋಷಕರು ಮಣಿಯುತ್ತಾರೆ. ಇಲ್ಲಿಗೆ ಮಾರ್ಟ್‌ಗೆ ಸಣ್ಣ ಲಾಭ ಸಿಕ್ಕ ಹಾಗೆ.
ನಾಲ್ಕನೇಯದಾಗಿ ಬಿಲ್ ಕೌಂಟರ್ ಬಳಿಯೂ ಕೆಲವು ವಸ್ತುಗಳನ್ನಿಟ್ಟು, ನಿಮ್ಮನ್ನು ಅಟ್ರ್ಯಾಕ್ಟ್ ಮಾಡಲು ಬಯಸುತ್ತಾರೆ. ಅಂದಕ್ಕೆ ಅಟ್ರ್ಯಾಕ್ಟ್ ಆಗಿ ಅದನ್ನು ಕೆಲವರು ಖರೀದಿಸುತ್ತಾರೆ. ಇಲ್ಲಿಗೆ ನಾವು ಯಾವ ಕಾರಣಕ್ಕೆ ಮಾರ್ಟ್‌ಗೆ ಹೋಗಿರುತ್ತೇವೋ, ಆ ಖರೀದಿಯನ್ನು ಬಿಟ್ಟು ಎಕ್ಸ್‌ಟ್ರಾ ಖರೀದಿ ಮಾಡಿ, ಬಿಲ್ ಹೆಚ್ಚಿಸಿಕೊಂಡಿರುತ್ತೇವೆ.