ದಪ್ಪಗಿರುವವರು ಸಣ್ಣಗಾಗೋಕ್ಕೆ ಹಲವು ಟಿಪ್ಸ್‌ಗಳು ಸಿಗುತ್ತದೆ. ಆದರೆ ಸಣ್ಣಗಿರುವವರು ದಪ್ಪಗಾಗೋಕ್ಕೆ ಇರೋದು ಕೆಲವೇ ಕೆಲವು ಟಿಪ್ಸ್. ಹಾಗಾಗಿ ಇವತ್ತು ನಾವು ದಪ್ಪಗಾಗೋಕ್ಕೆ ಯಾವ ಆಹಾರ ಸೇವಿಸಬೇಕು ಅನ್ನೋದನ್ನ ನೋಡೋಣ ಬನ್ನಿ..

ದಪ್ಪಗಾಗೋದೇನು ಕಷ್ಟವಲ್ಲ. ಆದ್ರೆ ಆರೋಗ್ಯಕರವಾಗಿ ದಪ್ಪವಾಗೋದು ಸ್ವಲ್ಪ ಕಷ್ಟ. ನಾವಿವತ್ತು ಕೊಡುವ ಟಿಪ್ಸ್ ಅನುಸರಿಸಿದರೆ, ಆರೋಗ್ಯಕರವಾಗಿ ಫಿಟ್ ಆಗಿರಬಹುದು.
ಮೊದಲನೇಯದಾಗಿ ಬೆಳಿಗ್ಗೆ ಎದ್ದ ತಕ್ಷಣ ಒಂದು ಕಡೆ ಕೂತು ಉಗುರು ಬೆಚ್ಚಿನ ನೀರು ಕುಡಿಯಿರಿ. ನೀವು ಯಾವಾಗ ನೀರು ಕುಡಿಯುವುದಿದ್ದರೂ ಕುಳಿತುಕೊಂಡೇ ಕುಡಿಯಿರಿ. ನಿಂತು ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.
ಇನ್ನು ಇದಾದ ಬಳಿಕ ನೀರಿನಲ್ಲಿ ನೆನೆಸಿದ 6 ಬಾದಾಮಿ ಬೀಜ ಮತ್ತು ವಾಲ್ನಟ್ ಬೀಜವನ್ನ ಸೇವಿಸಿ. ಬಾದಾಮಿ ತಿನ್ನುವಾಗ ಸಿಪ್ಪೆ ತೆಗೆದು ತಿನ್ನಬೇಕು. ಇಲ್ಲದಿದ್ದರೆ ದೇಹಕ್ಕೆ ಅವಶ್ಯಕವಾದ ಪೋಶಕಾಂಶ ಪೂರ್ತಿಯಾಗಿ ಸಿಗುವುದಿಲ್ಲ.
ಇದಾದ ಬಳಿಕ ವ್ಯಾಯಾಮ ಮಾಡಿ. ದೇಹದ ತೂಕ ಇಳಿಸಲು ವ್ಯಾಯಾಮ ಎಷ್ಟು ಅಗತ್ಯವೋ ಅಷ್ಟೇ ದೇಹದ ತೂಕ ಹೆಚ್ಚಿಸಿಕೊಳ್ಳಲು ವ್ಯಾಯಾಮ ಅಗತ್ಯ. ವ್ಯಾಯಾಮದ ಬಳಿಕ ಉತ್ತಮ ಆಹಾರ ಸೇವನೆ ಅತ್ಯಗತ್ಯ. ಅದರಲ್ಲೂ ತೂಕ ಹೆಚ್ಚಿಸಿಕೊಳ್ಳಲು ಬನಾನಾ, ಡ್ರೈಫ್ರೂಟ್ಸ್ ಮಿಕ್ಸ್ ಮಾಡಿದ ಮಿಲ್ಕ್ ಶೇಕ್ ಕುಡಿದರೆ ಇನ್ನೂ ಉತ್ತಮ. ಇದರಿಂದ ಆರೋಗ್ಯಕರವಾಗಿ ದೇಹದ ತೂಕ ಹೆಚ್ಚುವುದಲ್ಲದೇ, ಶಕ್ತಿಯುತವಾಗಿರಲು ಸಹಕಾರಿಯಾಗಿದೆ. ಈ ಮಿಲ್ಕ್ ಶೇಕ್ ಮಾಡುವಾಗ ಸಕ್ಕರೆ ಬಳಸುವಂತಿಲ್ಲ. ಬದಲಾಗಿ ಜೇನುತುಪ್ಪ ಅಥವಾ ಬೆಲ್ಲ ಬಳಸಿ.
ಬೆಳಗ್ಗಿನ ತಿಂಡಿಯನ್ನ ಸರಿಯಾದ ಟೈಮಿನಲ್ಲಿ ಸರಿಯಾದ ರೀತಿಯಲ್ಲಿ ತಿನ್ನಬೇಕು. ತಿಂಡಿ ತಿನ್ನುವ ವೇಳೆ ಟೀ ಕಾಫಿ ಬಳಸಬೇಡಿ. ತಿಂಡಿ ತಿಂದ ಬಳಿಕ ಏನಾದರೂ ಕುಡಿಯಲೇಬೇಕು ಎನ್ನಿಸಿದಲ್ಲಿ ಕಶಾಯ ಅಥವಾ ಸಕ್ಕರೆ ಇಲ್ಲದೇ ಜ್ಯೂಸ್ ಮಾಡಿ ಕುಡಿಯಿರಿ. ಆದ್ರೆ ಯಾವುದೇ ಕಾರಣಕ್ಕೂ ಬೆಳಗ್ಗಿನ ತಿಂಡಿ ಮಿಸ್ ಮಾಡಲೇಬೇಡಿ.
ಮಧ್ಯಾಹ್ನದ ಊಟದಲ್ಲಿ ಮೊಸರನ್ನ ಮತ್ತು ರಾತ್ರಿ ಊಟದಲ್ಲಿ ಸೂಪ್ ಮತ್ತು ತುಪ್ಪವನ್ನ ತಪ್ಪದೇ ಬಳಸಿ. ಆದ್ರೆ ಬೆಣ್ಣೆ ಬಳಸುವುದು ಆರೋಗ್ಯಕ್ಕೆ ಅಷ್ಟು ಉತ್ತಮವಲ್ಲ. ರಾತ್ರಿ ಮಲಗುವಾಗ ಹಾಲು ಕುಡಿದು ಮಲಗಿ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

