Web Story: ಇತ್ತೀಚಿನ ದಿನಗಳಲ್ಲಿ ಹಲವು ಮಹಿಳೆಯರು, ಗಂಡನಿಂದ ಡಿವೋರ್ಸ್ ಪಡೆದು, ಜೀವನಾಂಶ ಪಡೆಯಬೇಕು ಅನ್ನೋ ಕಾರಣಕ್ಕೆ ಮದುವೆಯಾಗಿರುವಂತೆ ನಡೆದುಕೊಳ್ಳುತ್ತಿದ್ದಾರೆ. ಅದರಂತೆ ಅತುಲ್ ಎಂಬ ಟೆಕ್ಕಿ ಸಾವನ್ನಪ್ಪಿದ್ದೇ ಇದಕ್ಕೆ ಸ್ಪಷ್ಟ ಉದಾಹರಣೆ, ಹಲವು ಬಾರಿ ಕೋರ್ಟ್‌ನಲ್ಲಿ ವಿಚಾರಣೆ ನಡೆಯುವಂತೆ ಮಾಡಿ, ಆತ ಬೆಂಗಳೂರಿನಿಂದ ಪದೇ ಪದೇ ತನ್ನೂರಿಗೆ ಹೋಗಲೇಬೇಕಾದ ಸಂದರ್ಭ ಅನಿವಾರ್ಯವಾಗುವಂತೆ ಮಾಡಿ, ಕೊನೆಗೂ ಆತ ಸಾವಿಗೆ ಶರಣಾಗುವಂತೆ ಮಾಡಿಯಾಗಿದೆ. ಕರ್ನಾಟಕದಲ್ಲೇ ಕೆಲವು ಪುರುಷರು ಪತ್ನಿ ಕಾಟಕ್ಕೆ ಬೇಸತ್ತು ಇತ್ತೀಚಿನ ದಿನಗಳಲ್ಲಿ ಜವ ಕಳೆದುಕೊಂಡಿದ್ದಾರೆ.
ಹಾಗಾಗಿ ಖ್ಯಾತ ವಕೀಲರಾದ ವಿ.ಮಂಜುನಾಥ್ ಮಹಿಳಿಗಿರುವ ಕಾನೂನು ಅನುಕೂಲಗಳಿಂದ, ಗಂಡಸರಿಗೆ ಏನೇನು ತೊಂದರೆಯೊಗುತ್ತದೆ ಎಂದು ವಿವರಿಸಿದ್ದಾರೆ. ಓರ್ವ ಮಹಿಳೆ, ತನ್ನ ಪತಿ ಮತ್ತು ಪತಿಯ ಮನೆಯವರ ವಿರುದ್ಧ ದೂರು ನೀಡಿದಳು ಎಂದರೆ, ಆ ದೂರಿನ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಳ್ಳುತ್ತಾರೆ. ಏಕೆಂದರೆ, ಕೆಲ ವರ್ಷಗಳ ಹಿಂದೆ ನಿಜವಾಗಿಯೂ ಪತಿಯ ಮನೆಯವರು ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು.
ಈಗಲೂ ಹಲವು ಕಡೆ ಕಿರುಕುಳ ನೀಡಲಾಗುತ್ತಿದೆ. ಈ ಕಾರಣಕ್ಕೆ ಓರ್ವ ಮಹಿಳೆ ಬಂದು ಪತಿ ಮತ್ತು ಪತಿಯ ವಿರುದ್ಧ ದೂರು ನೀಡಿದರೆ, ಆ ದೂರು ತೆಗೆದುಕೊಂಡು ಎಫ್‌ಐಆರ್ ಹಾಕಲಾಾಗುತ್ತದೆ. ಆದರೆ ಕೆಲ ಮಹಿಳೆಯರು ಇದನ್ನೇ ಬಂಡವಾಳವನ್ನಾಗಿ ಇಟ್ಟುಕೊಂಡು, ಪತಿಯ ವಿರುದ್ಧ ಎಫ್‌ಐಆರ್ ದಾಖಲಿಸಿ, ಹಣ ಸುಲಿಗೆಗೆ ಇಳಿದಿದ್ದಾರೆ. ಮದುವೆಯಾಗುವುದೇ ಡಿವೋರ್ಸ್ ಪಡೆದು ಹಣ ಮಾಡಲು ಅನ್ನುವಂತೆ ಮಾಡುತ್ತಿದ್ದಾರೆ. ಈ ಬಗ್ಗೆ ಮತ್ತಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.
ಡಾ.ವಿ.ಮಂಜುನಾಥ್ ಅವರನ್ನು ಸಂಪರ್ಕಿಸಲು ಈ ನಂಬರ್ಗೆ ಕರೆ ಮಾಡಿ: 8792368759, 9243059248