Sunday, October 27, 2024

Latest Posts

ಹೊಟೇಲ್ ಉದ್ಯಮದಲ್ಲಿ ನಷ್ಟವಾಗಲು ಕಾರಣಗಳೇನು..? ಭಾಗ 2

- Advertisement -

ಈ ವಿಷಯಕ್ಕೆ ಸಂಬಂಧಿಸಿದಂತೆ, ನಾವು ಮೊದಲ ಭಾಗದಲ್ಲಿ 2 ವಿಷಯದ ಬಗ್ಗೆ ಹೇಳಿದ್ದೆವು. ಈಗ ಮುಂದುವರಿದ ಭಾಗವಾಗಿ, ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..

ಮೂರನೇಯ ಕಾರಣ, ಸರಿಯಾದ ಅಡುಗೆಯವರನ್ನ ಇಡದಿರುವುದು. ನೀವು ಸಣ್ಣ ಕ್ಯಾಂಟೀನ್ ಇಟ್ಟರೂ, ದೊಡ್ಡ ಹೊಟೇಲ್ ಇಟ್ಟರೂ, ಜನ ನೀವು ಮಾಡುವ ಅಡುಗೆ ರುಚಿ ನೋಡಿಯೇ, ನಿಮ್ಮ ಹೊಟೇಲಿಗೆ ಬರುತ್ತಾರೆ. ಹಾಗಾಗಿ ಹಲವು ವರ್ಷ ಅನುಭವವಿರುವ ಅಥವಾ ಚೆನ್ನಾಗಿ ಅಡುಗೆ ಮಾಡಲು ಬರುವವರಿಗೆ ಕೆಲಸಕ್ಕೆ ತೆಗೆದುಕೊಳ್ಳಿ. ಅಥವಾ ನೀವೇ ಅಡುಗೆ ಮಾಡುವವರಾಗಿದ್ದರೆ, ಮೊದಲು ಚೆನ್ನಾಗಿ ಅಡುಗೆ ಮಾಡುವುದನ್ನ ಕಲಿತು, ನಂತರ ಹೊಟೇಲ್ ಓಪೆನ್ ಮಾಡಿ. ಯಾಕಂದ್ರೆ ಒಮ್ಮೆ ಜನ ನಿಮ್ಮ ಹೊಟೇಲ್‌ನಲ್ಲಿ ಸಿಗುವ ಆಹಾರವನ್ನು ತೆಗಳಿದರೆ, ಅದು ಬಾಯಿಂದ ಬಾಯಿಗೆ ಪಸರಿಸಿ, ನಿಮ್ಮ ಹೊಟೇಲ್‌ ಬಗ್ಗೆ ಕೆಟ್ಟ ಅಭಿಪ್ರಾಯ ಹೋಗುತ್ತದೆ. ಆಮೇಲೆ ನಿಮ್ಮ ಹೊಟೇಲ್‌ಗೆ ಯಾರೂ ಬರುವುದಿಲ್ಲ. ಹಾಗಾಗಿ ಎಲ್ಲಕ್ಕಿಂತ ಮುಖ್ಯ ಅಂದ್ರೆ, ರುಚಿಯಾದ ಅಡುಗೆ ಉಣಬಡಿಸೋದು.

ನಾಲ್ಕನೇಯ ಕಾರಣ, ಅಗತ್ಯಕ್ಕಿಂತ ಹೆಚ್ಚು ರೇಟ್ ಗೆ ತಿಂಡಿ ಮಾರೋದು. ಉದಾಹರಣೆಗೆ ಎಲ್ಲ ಕಡೆ 20 ರೂಪಾಯಿಗೆ ಸಮೋಸಾ, ಕಚೋರಿ ಸಿಕ್ಕರೆ, ನಿಮ್ಮಲ್ಲಿ ಮಾತ್ರ 30 ರೂಪಾಯಿಗೆ ಈ ತಿಂಡಿ ಸಿಗುತ್ತದೆ. ಆಗ ಜನ ನಿಮ್ಮ ಬಳಿ ಯಾಕೆ ಬರ್‌ತಾರೆ..? ಅವರು ಕಡಿಮೆ ರೇಟ್‌ಗೆ ಸಮೋಸಾ, ಕಚೋರಿ ಸಿಗುವ ಜಾಗಕ್ಕೆ ಹೋಗುತ್ತಾರೆ. ಹಾಗಾಗಿ ನೀವು ಸರಿಯಾದ ರೇಟಿಗೆ ನಿಮ್ಮ ಹೊಟೇಲ್ ಆಹಾರವನ್ನ ಸೇಲ್ ಮಾಡಬೇಕು.

ಐದನೇಯ ಕಾರಣ, ನಿಮ್ಮ ಹೊಟೇಲ್‌ನಲ್ಲಿ ಶುದ್ಧತೆ ಮೆಂಟೇನ್ ಮಾಡಿ. ಗಲೀಜಾಗಿರುವ ಹೊಟೇಲ್‌ಗೆ ಯಾರೂ ಬರಲು ಇಚ್ಛಿಸುವುದಿಲ್ಲ. ಹಾಗಾಗಿ ನಿಮ್ಮ ಹೊಟೇಲ್ ಶುದ್ಧವಾಗಿ, ಸ್ವಚ್ಛವಾಗಿರಲಿ. ಆಗಾಗ ನೆಲ ಒರೆಸಲು, ಕಿಚನ್ ಕ್ಲೀನ್ ಮಾಡಲು ಓರ್ವ ಹೆಲ್ಪರ್ ಇಟ್ಟುಕೊಳ್ಳಿ. ಇನ್ನು ಕೊನೆಯದಾಗಿ, ನಿಮ್ಮ ಹೊಟೇಲ್‌ನಲ್ಲಿ ಚೆನ್ನಾಗಿ ಲಾಭವಾಗಲು, ಸ್ವಚ್ಛತೆ, ಸರಿಯಾದದ ಬೆಲೆ, ರುಚಿಯಾದ ಅಡುಗೆ ಕೊಡುವುದರ ಜೊತೆಗೆ, ಉತ್ತಮವಾಗಿ ಅವರೊಂದಿಗೆ ಮಾತನಾಡುವುದು ಕೂಡ ಇಂಪಾರ್ಟೆಂಟ್ ಆಗಿರತ್ತೆ.

ಯಾಕಂದ್ರೆ ನೀವು ಎಷ್ಟು ರುಚಿಯಾದ ಆಹಾರ ಕೊಟ್‌ಟರೂ, ಕಡಿಮೆ ರೇಟ್ ಇಟ್ಟರೂ, ಸ್ವಚ್ಛತೆ ಕಾಪಾಡಿದರೂ, ನೀವು ಬಿಹೇವ್ ಮಾಡುವ ರೀತಿ, ಮತ್ತು ನೀವು ಮಾತನಾಡುವ ರೀತಿ, ಸರಿಯಾಗಿ ಇಲ್ಲವೆಂದಲ್ಲಿ, ಯಾರೂ ನಿಮ್ಮ ಹೊಟೇಲ್‌ಗೆ ಬರುವುದಿಲ್ಲ. ಹಾಗಾಗಿ ಓನರ್ ಆಗಿರುವ ನೀವು ಗ್ರಾಹಕರೊಂದಿಗೆ ಸಿಹಿಯಾಗಿ ಮಾತನಾಡುವುದಲ್ಲದೇ, ನಿಮ್ಮಲ್ಲಿ ಕೆಲಸ ಮಾಡುವವರಿಗೂ ಕೂಡ ಗ್ರಾಹಕರೊಂದಿಗೆ ಉತ್ತಮವಾಗಿ ಮಾತನಾಡಬೇಕೆಂದು ಹೇಳಿಕೊಡಿ. ಇಷ್ಟು ಗಮನದಲ್ಲಿಟ್ಟುಕೊಂಡ್ರೆ, ನೀವು ಹೊಟೇಲ್ ಓನರ್ ಆಗಲು ರೆಡಿಯಾದ್ರಿ ಎಂದರ್ಥ.

ರಿಬ್ಬನ್ ಪಕೋಡಾ ಮಾಡೋದು ಹೇಗೆ ಗೊತ್ತಾ..?

ಹಲ್ಲಿನ ಆರೋಗ್ಯಕ್ಕಾಗಿ ಈ ಟಿಪ್ಸ್ ಫಾಲೋ ಮಾಡಿ..

ಖರ್ಜೂರ ತಿನ್ನುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳೇನು..?

- Advertisement -

Latest Posts

Don't Miss