Sunday, April 20, 2025

Latest Posts

ಅಯೋಧ್ಯೆಯಲ್ಲಿ ವಿರಾಜಮಾನನಾಗಿರುವ ಬಾಲರಾಮನ ವಿಶೇಷತೆಗಳೇನು..?

- Advertisement -

National News: ಇಷ್ಟು ದಿನ ನಾವು ಬಾಲರಾಮನ ಅಪೂರ್ಣ ಮೂರ್ತಿಯನ್ನು ನೋಡಿದ್ದೇವು.. ಏಕೆಂದರೆ ರಾಮನ ಮುಖವನ್ನು ಮುಚ್ಚಿ, ರಾಮಲಲ್ಲಾನ ಮೂರ್ತಿಯನ್ನು ತಂದಿರಿಸಲಾಗಿತ್ತು. ಆದರೆ ಇದೀಗ, ರಾಮಲಲ್ಲಾನ ಪೂರ್ತಿ ಮುಖವನ್ನು ತೋರ್ಪಡಿಸಿದ್ದು, ಅದ್ಭುತ ತೇಜಸ್ವಿ ಮುಖ ಹೊಂದಿರುವ ಬಾಲ ರಾಮನನ್ನು ನೋಡುವ ಮೂಲಕ,  ಅರುಣ್ ಯೋಗಿರಾಜ್ ಕೈಚಳಕವನ್ನು ಎಲ್ಲರೂ ಕಣ್ತುಂಬಿಕೊಂಡಿದ್ದಾರೆ.

ಮಂದಸ್ಮಿತನಾಗಿರುವ ರಾಮಲಲ್ಲಾ, ಅದೆಷ್ಟು ಮುದ್ದಾಗಿದ್ದಾನೆ ಎಂದರೆ, ಅವನನ್ನು ಕಂಡಕೂಡಲೇ ರಾಮಭಕ್ತರು, ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ, ರಾಮಲಲ್ಲಾನ ಫೋಟೋ ಶೇರ್ ಮಾಡಿಕೊಳ್ಳುತ್ತಿದ್ದಾರೆ.

51ಇಂಚು ಎತ್ತರವಿರುವ ಶ್ರೀರಾಮಲಲ್ಲಾ, ಬಲಗೈಯಲ್ಲಿ ಬಾಣ ಮತ್ತು ಎಡಗೈಯಲ್ಲಿ ಬಿಲ್ಲು ಹಿಡಿದುಕೊಂಡಿದ್ದಾನೆ. ತಲೆಯ ಮೇಲ್ಭಾಗದಲ್ಲಿ ಸೂರ್ಯನ ಮೂರ್ತಿ ಕೆತ್ತನೆ ಇದೆ. ಕಿರೀಟದಲ್ಲಿ ನರಸಿಂಹನ ಕೆತ್ತನೆ ಇದೆ. ಇಷ್ಟೇ ಅಲ್ಲದೇ, ಇದರ ಇನ್ನೊಂದು ವಿಶೇಷತೆ ಅಂದ್ರೆ, ಈ ಮೂರ್ತಿಯಲ್ಲಿ ದಶಾವತಾರ ಬಿಂಬಿಸುವ ಹತ್ತು ಅವತಾರಗಳನ್ನು ಕೆತ್ತನೆ ಮಾಡಲಾಗಿದೆ. ಮತ್ಸ್ಯ, ಕೂರ್ಮ, ವರಾಹ, ವಾಮನ, ಕಲ್ಕಿ, ಕೃಷ್ಣ, ಪರಶುರಾಮ, ಬುದ್ಧ, ಆದಿಶೇಷ ಸೇರಿ ಹಲವು ಕೆತ್ತನೆಗಳು ರಾಮನ ಬಲಭಾಗದಲ್ಲಿದೆ. ರಾಮಲಲ್ಲಾನ ಎಡಭಾಗದಲ್ಲಿ, ಶಂಖ, ಗದೆ, ಸ್ವಸ್ತಿಕ, ವಿಷ್ಣು, ಪರಶುರಾಮ ಸೇರಿ ಹಲವು ದೇವರ ಕೆತ್ತನೆ ಎಡಭಾಗದಲ್ಲಿದೆ.

“ನಿರೀಕ್ಷೆ ಎಂಬಂತೆ ರಾಮ ಹನುಮರ ಬಾಂಧವ್ಯಕ್ಕೆ ಕನ್ನಡದ ನಂಟಿದೆ, ಕರುನಾಡ ಕಂಪಿದೆ”

ಅಯೋಧ್ಯೆ ಗರ್ಭಗುಡಿಯಲ್ಲಿ ಆಸೀನನಾದ ರಾಮಲಲ್ಲಾ: ಪಟ ವೈರಲ್

ಪೂಜಿಸಲೆಂದೇ ಹೂಗಳ ತಂದೆ ಹಾಡು ಮತ್ತು ಹಾಡುಗಾರ್ತಿಯನ್ನು ಮೆಚ್ಚಿ ಹೊಗಳಿದ ಮೋದಿ..

- Advertisement -

Latest Posts

Don't Miss