Friday, November 22, 2024

Latest Posts

ಸೂರಜ್ ರೇವಣ್ಣ ಕೇಸ್ ಬಗ್ಗೆ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿದ್ದಿಷ್ಟು..

- Advertisement -

Hubli News: ಹುಬ್ಬಳ್ಳಿ: ಸೂರಜ್ ರೇವಣ್ಣ ಸಲಿಂಗ ಕಾಮ ಪ್ರಕರಣಕ್ಕೆ ಸಂಬಂಧಿಸಿದಂತೆ, ಹುಬ್ಬಳ್ಳಿಯಲ್ಲಿ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಮಾತನಾಡಿದ್ದಾರೆ.

ಸೂರಜ್ ರೇವಣ್ಣ ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖೆಯ ನಂತರ ಸತ್ಯಾಸತ್ಯತೆ ಹೊರಬರುತ್ತೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೆಬೇಕು, ರಕ್ಷಣೆಯ ಮಾತಿಲ್ಲ. ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಯಾರೇ ತಪ್ಪು ಮಾಡಲಿ ಶಿಕ್ಷೆಯಾಗಬೇಕು. ತನಿಖೆಯಲ್ಲಿ ರಾಜಕೀಯ ಬೇರೆಸುವ ಪ್ರಯತ್ನ ಆಗಬಾರದು ಎಂದು ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ.

ಸಚಿವ ಕೆ ಎನ್ ರಾಜಣ್ಣ ಡಿಸಿಎಂ ಪಟ್ಟು ವಿಚಾರದ ಬಗ್ಗೆ ಮಾತನಾಡಿದ ಮಹೇಶ್, ಕಾಂಗ್ರೆಸ್ ಪಕ್ಷದಲ್ಲೀಗ ಮನೆಯೊಂದು ಮೂರು ಬಾಗಿಲ ಸ್ಥಿತಿ ಇದೆ. ಕಳೆದೊಂದು ವರ್ಷದಿಂದ ಅವರ ಪಕ್ಷದಲ್ಲಿನ‌ ಬೆಳವಣಿಗೆಗಳೇ ಇದಕ್ಕೆ ನಿದರ್ಶನ. ಸಿದ್ದರಾಮಯ್ಯ ಅವರನ್ನು ಸಿಎಂ ಕುರ್ಚಿಯಿಂದ ಇಳಿಸೋ ಡಿಕೆಶಿ ಟೀಂ ಪ್ರಯತ್ನಿಸುತ್ತಿದೆ. ಇನ್ನೊಂದು ಕಡೆ ಡಿಕೆಶಿ ಶಕ್ತಿ ಕುಂದಿಸಲು ಸಿದ್ದರಾಮಯ್ಯ ಬೆಂಬಲಿತ ಜಾರಕಿಹೊಳಿ ಬಣ ನಿಂತಿದೆ. ಕಾಂಗ್ರೆಸ್‌ನ ಒಳ ಬೇಗುದಿಯಿಂದ ಹಲವು ಸಮಸ್ಯೆಗಳು ಅವರಲ್ಲಿಯೇ ಸೃಷ್ಟಿಯಾಗುತ್ತವೆ ಎಂದು ಟೆಂಗಿನಕಾಯಿ ಹೇಳಿದ್ದಾರೆ.

ಲೋಕಸಭಾ ಚುನಾವಣೆ ನಂತರ ರಾಜ್ಯ ಸರ್ಕಾರ ಬಿದ್ದು ಹೊಗುತ್ತೆ ಎಂಬ ಬಿಜೆಪಿಗರ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಮಹೇಶ್, ಹೌದು ಈ ಹಿಂದಿನಿಂದಲೂ ನಾವು ರಾಜ್ಯ ಸರ್ಕಾರ ಬಿದ್ದು ಹೋಗುತ್ತೆ ಎಂದಿದ್ವಿ. ಅದಕ್ಕೆ ಪೂರಕವಾದ ಬೆಳವಣಿಗೆ ಈಗ ನಡಿಯುತ್ತಿವೆ. ಮೂರು ಸಮುದಾಯವಾರು ಡಿಸಿಎಂ ಸೃಷ್ಟಿಗೆ ಅವರ ಪಕ್ಷದವರೇ ಒತ್ತಾಯ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ವರ್ಷ ಆಯಿತು ಈಗ ಏಕೆ ಡಿಸಿಎಂ ಮಾತು..?ಡಿಸಿಎಂ ಒತ್ತಾಯದೊಂದಿಗೆ ಕಾಂಗ್ರೆಸ್ ಸರ್ಕಾರ ಬಿಳುವ ಅಧ್ಯಾಯ ಒಂದು ಆರಂಭವಾಗಿದೆ. ಎರಡನೇ ಅಧ್ಯಾಯ  ಆರಂಭಗೊಳ್ಳುವ ಮುನ್ನ ಕ್ಲಿಯರ್ ರಿಸಲ್ಟ್ ಸಿಗುತ್ತೆ. ಕಾಂಗ್ರೆಸ್ ಸರ್ಕಾರ ತನ್ನಷ್ಟಕ್ಕೆ ತಾನೆ ಬಿಳುತ್ತೆ, ನಾವು ಅದಕ್ಕೆ ಜವಾಬ್ದಾರರಲ್ಲ ಎಂದು ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ.

ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಬಿಜೆಪಿಗೆ ಮರಳುವ ವಿಚಾರದ ಬಗ್ಗೆ ಮಾತನಾಡಿದ ಮಹೇಶ್ ಟೆಂಗಿನಕಾಯಿ,  ಪಕ್ಷ ಕಟ್ಟಿ ಬೆಳೆಸುವಲ್ಲಿ ಕೆ ಎಸ್ ಈಶ್ವರಪ್ಪನವರ ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ನಮ್ಮ ಪಕ್ಷದ ಹಿರಿಯ ನಾಯಕರಾಗಿದ್ದರು. ಕೆಲವಂದಿಷ್ಟು ಸಮಸ್ಯೆಗಳಿಂದ ಪಕ್ಷದಿಂದ ಈಗ ಹೊರಗೆ ಇದ್ದಾರೆ. ಬರುವ ದಿನಗಳಲ್ಲಿ ಪಕ್ಷ ಇದರ ಬಗ್ಗೆ ಒಳ್ಳೆಯ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಕಳೆದ ದಿನ ಉತ್ತರ ಕರ್ನಾಟಕ ಅಟೋ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಪುತ್ರ ಹತ್ಯೆ ವಿಚಾರದ ಬಗ್ಗೆ ಮಾತನಾಡಿದ ಮಹೇಶ್, ಹುಬ್ಬಳ್ಳಿ ಸೇರಿ ರಾಜ್ಯವ್ಯಾಪಿ ಕ್ರೈಂ ಮಿತಿಮಿರುತ್ತಿದೆ. ಇದರ ಬಗ್ಗೆ ಇತ್ತಿಚಿನ ಸುದ್ದಿಗೋಷ್ಟಡಿಯಲ್ಲೂ ನಾವು ಹೇಳಿದ್ವಿ. ಈ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಾಗೂ ಅಂಜಲಿ ಹತ್ಯೆ ನಡೆದಿತ್ತು. ಕಳೆದ ದಿನ ಉತ್ತರ ಕರ್ನಾಟಕ ಅಟೋ ಚಾಲಕರ ಸಂಘದ ಅಧ್ಯಕ್ಷನ ಪುತ್ರನ‌ಹತ್ಯೆ ನಡೆದಿದೆ. ರಾಜ್ಯದಲ್ಲಿಯೇ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಬೇರೆ ಬೇರೆ ವಿಷಯ ತಂದು ಕಾನೂನು ಸುವ್ಯವಸ್ಥೆ ಹದಗೆಟ್ಟಿ ವಿಚಾರ ಮರೆಮಾಚುವ ಕೆಲಸ ಸರ್ಕಾರ ಮಾಡುತ್ತಿದೆ. ರಾಜ್ಯದಲ್ಲಿ ಪೊಲೀಸ್ ಇಲಾಖೆ ಇದೇಯೋ ಇಲ್ವೋ ಅನ್ನೋ ಸ್ಥಿತಿ ಬಂದಿದೆ ಎಂದು ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ.

ರಾಜ್ಯ ಸರ್ಕಾರದಿಂದ ಪೆಟ್ರೋಲ್ ಡಿಸೇಲ್ ಮಾರಾಟ ತೆರೆಗೆ ಏರಿಕೆ ಬಗ್ಗೆ ಪ್ರತಿಕ್ರಿಯಿಸಿದ ಮಹೇಶ್,  ಪೆಟ್ರೋಲ್ ಡಿಸೇಲ್ ಏರಿಕೆ ವಿಚಾರದಲ್ಲಿ ಪ್ರತಿಲ್ಷ ಜನತೆಯ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಇದಷ್ಟೇಯಲ್ಲದೆ ವಾಲ್ಮಕೀ ನಿಗಮ ಮಂಮಡಳಿ ಹಗರಣ ಕುರಿತು ಹೋರಾಟ ಮಾಡುತ್ತಿದ್ದೆವೆ. ವಾಲ್ಮೀಕಿ ನಿಗಮ ಹಗರಣ ಬಹುದೊಡ್ಡ ಮಟ್ಟಿಗೆ ನಡೆದಿದೆ. ವಾಲ್ಮೀಕಿ ಹಗರಣ ಮುಚ್ಚಿ ಹಾಕುವ ಕೆಲಸ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಮಾಡುತ್ತಿದೆ. ಹಗರಣ ಮುಚ್ಚಿ ಹಾಕುವ ನಿಟ್ಟಿನಲ್ಲಿ ಬೇರೆ ಬೇರೆ ವಿಷಯ ಸೃಷ್ಟಿ ಮಾಡುವ ಕೆಲಸ ಸರ್ಕಾರ ಮಾಡುತ್ತಿದೆ. ಈ ವಿಚಾರ ಜನತೆಗೂ ಕೂಡಾ ಅರ್ಥವಾಗುತ್ತಿದೆ. ವಾಲ್ಮೀಕಿ ಹಗರಣ, ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಕುರಿತು ಸದನದಲ್ಕಿಯು ಧ್ವನಿ ಎತುತ್ತೇವೆ ಎಂದಿದ್ದಾರೆ.

Political News: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ: ಸೂರಜ್ ರೇವಣ್ಣ ಅರೆಸ್ಟ್‌..

Political News: ಹಾಸನ ಪೊಲೀಸ್ ಠಾಣೆಗೆ ಬಂದ ಸೂರಜ್ ರೇವಣ್ಣ

ಲೈಂಗಿಕ ದೌರ್ಜನ್ಯ ಆರೋಪ: ಸೂರಜ್ ರೇವಣ್ಣ ವಿರುದ್ಧ FIR ದಾಖಲು

- Advertisement -

Latest Posts

Don't Miss