Political News: ಬಿಜೆಪಿಯಿಂದ ಕಾಂಗ್ರೆಸ್‌ಗೆ ಹೋಗಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮತ್ತೆ ಮರಳಿ ಬಿಜೆಪಿ ಸೇರಿದ್ದಾರೆ. ಈ ಬಗ್ಗೆ ಶೆಟ್ಟರ್ ಜೊತೆ ಕರ್ನಾಟಕ ಟಿವಿ ಸಂದರ್ಶನ ನಡೆಸಿದ್ದು, ಇದರಲ್ಲಿ ಶೆಟ್ಟರ್ ಕೆಲವೊಂದು ರಾಜಕೀಯ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಎರಡು ದಿನದ ಹಿಂದೆ ಶೆಟ್ಟರ್, ಅಮಿತ್ ಶಾ ಅವರನ್ನು ಭೇಟಿಯಾದ ಬಳಿಕ, ಬಿಜೆಪಿ ಸೇರ್ಪಡೆಯಾಗಿದ್ದಾರೆ. ಹಾಗಾದ್‌ರೆ ಅಮಿತ್ ಶಾ ಶೆಟ್ಟರ್‌ಗೆ ಹೇಳಿದ್ದೇನು ಅನ್ನೋ ಬಗ್ಗೆ ಮಾಜಿ ಸಿಎಂ ಮಾತನಾಡಿದ್ದಾರೆ.
ಶೆಟ್ಟರ್ ದೆಹಲಿಗೆ ಹೋದಾಗ, ನೀವು ಸಿನೀಯರ್ ಲೀಡರ್ ಇದ್ದೀರಿ. ನಿಮಗೆ ಯಾವ ಗೌರವ ಸಿಗಬೇಕೋ, ಆ ಗೌರವವನ್ನು ಕಾಪಾಡುವಂಥ ಕೆಲಸ ನಾವು ಮಾಡುತ್ತೇವೆ. ನಿಮ್ಮ ಸಿನಿಯಾರಿಟಿಗೆ ನಾವು ಪ್ರಾಮುಖ್ಯತೆ ಕೊಡುತ್ತೇವೆ. ನೀವು ನಮ್ಮ ಜೊತೆ ಬನ್ನಿ, ಕೈಜೋಡಿಸಿ. ಮತ್ತೆ ಮೋದಿಯವರನ್ನು ಪ್ರಧಾನಿ ಮಂತ್ರಿಯನ್ನಾಗಿ ಮಾಡೋಣ. ನಿಮಗೇನು ಗೌರವ ಸಿಗಬೇಕೋ ನಾವು ಕೊಡುತ್ತೇವೆ ಎಂದು ಅಮಿತ್ ಶಾ ಹೇಳಿದ್ದರು. ಅವರು ನನ್ನನ್ನು ಪ್ರೀತಿಯಿಂದ ಕರೆದು ಮಾತನಾಡಿಸಿದ್ದು, ನನಗೆ ಇಂಪ್ರೆಶನ್ ಆಯಿತು ಎಂದು ಶೆಟ್ಟರ್ ಹೇಳಿದ್ದಾರೆ.
ಅಲ್ಲದೇ ನನಗೆ ಯಾವ ರೀತಿಯ ಗೌರವ ಕೊಡುತ್ತೀರಿ. ಯಾವ ಸ್ಥಾನ ಕೊಡುತ್ತೀರಿ ಅಂತಲೂ ನಾನು ಕೇಳಲು ಹೋಗಲಿಲ್ಲ. ಆ ಬಗ್ಗೆ ವಿವರಣೆಯೂ ಕೇಳಲಿಲ್ಲ. ಅವರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು, ಅವರ ಮಾತಿನ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಂಡು ನಾನು ಬಿಜೆಪಿಗೆ ಸೇರಿದ್ದೇನೆ. ಆದಷ್ಟು ಬೇಗ ಮೋದಿಜಿಯವರನ್ನು ಭೇಟಿಯಾಗುವ ಪ್ರಯತ್ನ ಮಾಡುತ್ತೇನೆ ಎಂದು ಶೆಟ್ಟರ್ ಹೇಳಿದ್ದಾರೆ.
ಶೆಟ್ಟರ್ ವಿಷಯದಲ್ಲಿ ಡಿಕೆಶಿ- ಸಿದ್ದರಾಮಯ್ಯ ಮಾಡಿದ ತಪ್ಪೇನು..? ಶೆಟ್ಟರ್ ಹೇಳಿದ್ದೇನು..?
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಚೇರಿಯಲ್ಲಿ ಪೌರ ಕಾರ್ಮಿಕ ಮಹಿಳೆಯಿಂದ ಧ್ವಜಾರೋಹಣ