Hassan News: ಹಾಸನ: ಹಾಸನದಲ್ಲಿ ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಪ್ರಜ್ವಲ್ ಲೋಕಸಭೆ ಎಲೆಕ್ಷನ್‌ನಲ್ಲಿ ಸ್ಪರ್ಧಿಸುವ ಬಗ್ಗೆ ಹೇಳಿಕೆ ನೀಡಿದ್ದಾರೆ.
ಸೀಟ್ ಎಷ್ಟು ಅಂತ ನಿರ್ಣಯ ಆಗಿಲ್ಲ. ಪ್ರಜ್ವಲ್ ಸಿಟ್ಟಿಂಗ್ ಮೆಂಬರ್ ಇದ್ದಾನೆ ಗೊಂದಲಗಳು ಇರಬಾರದು. ದೇವೇಗೌಡರು ನಿಲ್ಲಬೇಕು, ನಿಲ್ತಾರೆ ಅಂತಾರೆ. ಅದಕ್ಕೋಸ್ಕರ ನಾನೇ ನಿರ್ಣಯ ಮಾಡಿದ್ದೇನೆ. ಮುಂದಿನ ತಿಂಗಳು ಮತ್ತೆ ಪ್ರವಾಸ ಮಾಡುತ್ತೇನೆ. ಆನಂತರ ಹೋಬಳಿಗಳಿಗೆ ಹೋಗುತ್ತೇನೆ. ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇನೆ ಎಂದು ದೇವೇಗೌಡರು ಹೇಳಿದ್ದಾರೆ.
ವಿಜಯೇಂದ್ರ ಅವರು ನಮ್ಮ ಮನೆಗೆ ಬಂದಾಗ ಪ್ರಜ್ವಲ್‌ರೇವಣ್ಣ ಸ್ವಾಗತ ಮಾಡಿದ್ದಾರೆ. ಯಡಿಯೂರಪ್ಪ ಅವರ ಜೊತೆಯೂ ಮಾತನಾಡಿದ್ದೇನೆ. ಒಂದುಗೂಡಿ ಕೆಲಸ ಮಾಡುವ ಬಗ್ಗೆ ಸೂಕ್ಷ್ಮವಾಗಿ ನಿಮ್ಮ ಗಮನಕ್ಕೆ ತಂದಿದ್ದೇನೆ. ಸೀಟ್ ಎಲ್ಲಿಲ್ಲಿ, ಯಾರ್ಯಾರಿಗೆ ಇನ್ನೂ ತೀರ್ಮಾನ ಆಗಿಲ್ಲ. ಮುಂದಿನ ವಾರ ದೆಹಲಿಯಲ್ಲಿ ಕುಮಾರಸ್ವಾಮಿ, ಮೋದಿ, ಶಾ, ನಡ್ಡಾ ಕುಳಿತು ತೀರ್ಮಾನ ಮಾಡಬಹುದು. ಆಗ ನಾನು ದೆಹಲಿಯಲ್ಲಿ ಇರ್ತೇನೆ ಎಂದು ದೇವೇಗೌಡರು ಹೇಳಿದ್ದಾರೆ.
ಕುಮಾರಸ್ವಾಮಿ, ಯಡಿಯೂರಪ್ಪ, ವಿಜಯೇಂದ್ರ, ಬೊಮ್ಮಯಿ ಜೊತೆ ಕುರಿತು ಮೊದಲನೇ ಸುತ್ತಿನ ಮಾತುಕತೆ ನಡೆಸಿದ್ದಾರೆ. ಸೀಟ್ ಹಂಚಿಕೆ ವಿಷಯದಲ್ಲಿ ಅವರ ತೀರ್ಮಾನಕ್ಕೆ ಬರ್ತಾರೆ ನಾನು ಮಧ್ಯ ಪ್ರವೇಶ ಮಾಡಲ್ಲ. ನಮಗೆ ಎಷ್ಟು ಸೀಟ್, ಎಲ್ಲೆಲ್ಲಿ ಕೊಡ್ತಾರೆ ನಾನು ಚರ್ಚೆ ಮಾಡಿಲ್ಲ. ಸುಮ್ಮನೆ ಊಹಾಪೋಹ ನಡಿತಿದೆ, ಆದರೆ ತೀರ್ಮಾನ ಮಾಡಿಲ್ಲ. ಕೊನೆಯ ಚುನಾವಣೆ ನಾನು ನಿಲ್ತೇನೆ ಎನ್ನುವ ಭಾವನೆ ಮೂಡಿಸಲು ಪ್ರಯತ್ನ ಮಾಡಿದ್ರು. ನನಗೆ 91 ವಯಸ್ಸು, ನಾನು ನಿಲ್ಲುವುದಿಲ್ಲ. ಪ್ರಜ್ವಲ್ ರೇವಣ್ಣ ಅವರಿಗೆ ಸಂಪೂರ್ಣವಾಗಿ ಜನಗಳ ಮತವನ್ನು ನಾನಗಿಯೇ ಹೋಗಿ ಜನಗಳ ಮುಂದೆ ಕೈಚಾಚಿ ಕೇಳುತ್ತೇನೆ. ಈ ಜಿಲ್ಲೆಯ ಪ್ರಾತಿನಿದ್ಯ ಪ್ರಜ್ವಲ್‌ರೇವಣ್ಣ ಅವರಿಗೆ ಸಿಗಬೇಕು ಎಂದು ದೇವೇಗೌಡರು ಹೇಳಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಸ್ಪರ್ಧೆ ವಿಚಾರದ ಬಗ್ಗೆ ದೇವೇಗೌಡರು ಮಾತನಾಡಿದ್ದು, ಮೋದಿಯವರು ಹೇಳಿದ್ರೆ ಕುಮಾರಸ್ವಾಮಿ ಅವರು ಎಲ್ಲಿ ಬೇಕಾದರೂ ನಿಲ್ಲಬಹುದು. ಅವರಿಗೆ ಯಾವುದೇ ಸಮಸ್ಯೆ ಇಲ್ಲ. ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ ಎಲ್ಲಿ ಬೇಕಾದರೂ ನಿಲ್ಲಬಹುದು. ತೀರ್ಮಾನ ಮಾಡೋದು ಮೋದಿ, ಶಾ ಅವರಿಗೆ ಸೇರಿದ್ದು ಎಂದು ದೇವೇಗೌಡರು ಹೇಳಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ವಿಚಾರಕ್ಕೆ ಮಾತನಾಡಿದ ಗೌಡರು, ನಿಖಿಲ್ ಬೇಡ ಎನ್ನುವ ಅಭಿಪ್ರಾಯ ಕುಮಾರಸ್ವಾಮಿಯಲ್ಲಿ ಇದೆ. ಆದರೆ ನಿಖಿಲ್ ಅಥವಾ ಕುಮಾರಸ್ವಾಮಿ ನಿಲ್ಲಬೇಕೆಂದು ಮಂಡ್ಯದ ಜನ ಸರ್ವಾನುಮತದಿಂದ ರೆಸ್ಯೂಲೂಷನ್ ಮಾಡಿ ಕಳುಹಿಸಿದ್ದಾರೆ. ಅವರು ಸಿನಿಮಾ ಫೀಲ್ಡ್‌ನಲ್ಲಿದ್ದಾರೆ. ಎಲ್ಲಾ ಜಿಲ್ಲೆಯ ಕಾರ್ಯಕ್ರಮಗಳನ್ನು ತಪ್ಪದೇ ಮಾಡುತ್ತಿದ್ದಾರೆ. ದೆಹಲಿಯಲ್ಲಿ ನಿಖಿಲ್ ಕುಮಾರಸ್ವಾಮಿ ಇದ್ದಿದ್ದು ಸತ್ಯ. ಉತ್ತರಪ್ರದೇಶದ ಸಿಎಂ ಜೊತೆ ನೇರವಾಗಿ ಚರ್ಚೆ ಮಾಡಿರುವುದು ಸತ್ಯ. ನಿಖಿಲ್ ಬೇಡ ಅಂತ ಕುಮಾರಸ್ವಾಮಿ ಮನಸ್ಸಿನಲ್ಲಿದೆ. ಕುಮಾರಸ್ವಾಮಿ ಅವರೇ ಲೀಡ್ ಮಾಡಬೇಕಿದೆ. ಮಗನು, ನಾನು ಇಬ್ಬರು ಬೇಡ ಎನ್ನುವುದು ಅವರ ಮನಸ್ಸಿನಲ್ಲಿದೆ ಎಂದು ದೇವೇಗೌಡರು ಹೇಳಿದ್ದಾರೆ.
ನಮ್ಮ ಪಕ್ಷಕ್ಕೆ ಕೆಲ ಶಾಸಕರು ಬರುವವರಿದ್ದಾರೆ ಕಾದು ನೋಡಿ: ಸಚಿವ ಸಂತೋಷ್ ಲಾಡ್
ಮೋದಿಯವರನ್ನು ಪ್ರಧಾನಮಂತ್ರಿ ಮಾಡಬೇಕು. ಈ ದೇಶ ಉಳಿಯಬೇಕೆಂದರೆ ಮೋದಿ ಬೇಕು: ಹೆಚ್.ಡಿ.ರೇವಣ್ಣ

