Hubli Political News: ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗಿನಿಂದ 70 ವರ್ಷ ಕಾಂಗ್ರೆಸ್ ಆಡಳಿತ ಮಾಡಿದೆ. ಅವರು ಏನು ಮಾಡಿದ್ದಾರೆ. ಇದೆಲ್ಲ ಜನಕ್ಕೆ ಗೊತ್ತು. ಗರಿಬಿ ಹಠಾವೋ ಎಂದು ಹೇಳಿ ಇಂದಿರಾಗಾಂಧಿ 10-15 ವರ್ಷ ಅಧಿಕಾರ ಮಾಡಿದ್ದಾರೆ. ಅಷ್ಟೇ ಅಲ್ದೇ ಬ್ರಿಟಿಷ್ ರಿಂದ ಸ್ವಾತಂತ್ರ್ಯ ತಂದು ಕೊಟ್ಟಿದ್ದೆವೆ ಎಂದು ಹೇಳಿ 70 ವರ್ಷ ಅಧಿಕಾರ ಮಾಡಿದ್ದಾರೆ. ದೇಶಕ್ಕೆ ಏನು ಮಾಡಿದ್ದಾರೆ ಎಂದು ತಾವು ಹೇಳಬೇಕೆಂದು ಸಚಿವ ಸಂತೋಷ ಲಾಡ್ ಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟಾಂಗ್ ಕೊಟ್ಟಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ರಾಮ ಮಂದಿರ ವಿಚಾರ ಬಿಟ್ಟು ಕಾಂಗ್ರೆಸ್ ನವರಿಗೆ ಬೇರೆ ಇಲ್ಲ. ಪದೇ ಪದೇ ರಾಮಮಂದಿರ ಬಗ್ಗೆ ಮಾತನಾಡುವುದನ್ನು ಬಿಟ್ಟು ಉಳಿದ ಇಮೇಜ್ ಉಳಿಸಿಕೊಳ್ಳಲಿ. ಅವರಿಗೆ ರಾಮ ಮಂದಿರ ಕಟ್ಟಲು ಯೋಗ್ಯತೆ ಇಲ್ಲಾ. ಮಾತಾಡುದನ್ನು ಬಿಡುದಿಲ್ಲ. ಕಾಂಗ್ರೆಸ್ ನವರು ಗರಿಬಿ ಹಠಾವೋ ದಿಂದ ಎಷ್ಟು ಜನಾ ಬಡತನದಿಂದ ಹೊರಗೆ ಬಂದ್ರು. ನಮ್ಮ ಜೊತೆ ಸ್ವಾತಂತ್ರ್ಯ ಪಡೆದ ಜಪಾನ, ಚೀನಾ ಎಷ್ಟು ಮುಂದುವರೆದಿದೆ. ನಾಶವಾದ ದೇಶಗಳು 30 ವರ್ಷಗಳಲ್ಲಿ ಮತ್ತೆ ಎದ್ದು ನಿಂತಿವೆ. ಆದ್ರೆ ಕಾಂಗ್ರೆಸ್ 70 ವರ್ಷ ಏನು ಮಾಡಿದೆ. ನಾವು ಬಂದಾಗಿಂದ ರಾಷ್ಟ್ರೀಯ ರಸ್ತೆಗಳು ಮಾಡಿದ್ದೇವೆ. ವಾಜಪೇಯಿ ಅವರು ಇದ್ದಾಗ ಉತ್ತಮವಾದ ರಸ್ತೆ ನಿರ್ಮಾಣ ಮಾಡಿದೆ. ಆದ್ರೆ ಇವರು ಏನು ಮಾಡಿದ್ದಾರೆ. ಈಗ ಲೋಕಸಭೆಯಲ್ಲಿ 46 ಸೀಟ್ ಬಂದಿವೆ ಅದನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡಿಕೊಳ್ಳಲಿ ಮೊದಲು. ಇಂದಿರಾಗಾಂಧಿ ಅವರು ಗರಿಬಿ ಹಠಾವೋದಿಂದ ಎಷ್ಟು ಜನಾ ಬಡತನದಿಂದ ನಿರ್ಮೂಲನೆಗೊಂಡಿದ್ದಾರೆ ಅದನ್ನ ಮೊದಲ ಹೇಳಿ ಎಂದರು.
ರಾಜ್ಯ ಸರ್ಕಾರದಲ್ಲಿ ತಾಳ ಮೇಳವಿಲ್ಲ. ಅಧಿಕಾರಿಗಳು-ಸಚಿವರ ನಡುವೆ ಸಂವಹನದ ಕೊರತೆ ಎದ್ದು ಕಾಣುತ್ತಿದೆ. ಅದರಿಂದಾಗಿಯೇ ಘೋಷವಾಕ್ಯ ವಿವಾದ ಸೃಷ್ಟಿಯಾಗಿದೆ. ಜ್ಞಾನ ದೇಗುಲವಿದು ಕೈ ಮಗಿದು ಒಳಗೆ ಬಾ ಘೋಷವಾಕ್ಯ ಬದಲಾವಣೆ ನೋಡಿದ್ರೆ ಸರ್ಕಾರ ಅತಂತ್ರ ಸ್ಥಿತಿಯಲ್ಲಿದೆ ಅನಿಸುತ್ತೆ.
ಕಾರ್ಯದರ್ಶಿಗಳು ಆದೇಶ ಮಾಡಿದಾರೆ ಅಂತಾರೆ. ಮಂತ್ರಿ ಮಂಡಲದಲ್ಲಿ ಚರ್ಚೆ ಮಾಡಿದ್ದಾರಾ..? ಮಂತ್ರಿಗಳು ಅಧಿಕಾರಿಗಳ ನಡುವೆ ಸಮನ್ವಯವೇ ಇಲ್ಲ. ಯಾಕೆ ಕುವೆಂಪು ಅವರ ಘೋಷವಾಕ್ಯ ಬದಾಲವಣೆ ಮಾಡಬೇಕು. ಅಕಸ್ಮಾತ್ ಬದಲಾವಣೆ ಮಾಡೋದ್ರೆ ಇದ್ರೆ ಚರ್ಚೆ ಮಾಡಿ ಎಂದರು.
ಬಿಜೆಪಿ ನೂರು ಸೀಟ್ ಗೆಲ್ಲಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೇ ನೀಡಿದ ಅವರು, ಇಂಡಿಯಾ ಒಕ್ಕೂಟವನ್ನು ಕಾಂಗ್ರೆಸ್ ನಾಯಕತ್ವ ತಗೆದುಕೊಂಡಿದೆ. ಮಲ್ಲಿಕಾರ್ಜುನ ಅವರ ಮಾತಿಗೆ ಇಂಡಿಯಾ ಒಕ್ಕೂಟದಲ್ಲಿ ಕಿಮ್ಮತ್ತಿಲ್ಲ. ನೀವು ನೂರು ಸೀಟು ಗೆಲ್ಲೋದು ಬಿಡಿ. ಕಳೆದ ಬಾರಿ ಎಷ್ಟು ಗೆದ್ದಿದೀರಿ ಅಷ್ಟು ಉಳಸಿಕೊಂಡು ಹೋಗಿ ಸಾಕು ಎಂದರು.
ರಾಮ ನಗರದಲ್ಲಿ ವಕೀಲರ ಪೊಲೋಸರ ಸಂಘರ್ಷ ವಿಚಾರಕ್ಕೆ ಪ್ರತಿಕ್ರಯಿಸಿ, ಇದನ್ನು ನೋಡಿದ್ರೆ ಎಲ್ಲೋ ಒಂದು ಕಡೆ ಸರ್ಕಾರ ಹಳಿ ತಪ್ಪಿದೆ ಅನಸತ್ತೆ. ಸರ್ಕಾರ ಕರೆದು ಎಲ್ಲವನ್ನೂ ಸರಿ ಮಾಡಬೇಕು.
ನಮ್ಮಲ್ಲಿ ಯಾವುದೇ ಮುಸುಕಿನ ಗುದ್ದಾಟ ಇಲ್ಲ ಎಲ್ಲವೂ ಸರಿಯಾಗುತ್ತದೆ. ಇನ್ನೂ ಐದಾರು ದಿವಸದಲ್ಲಿ ಎಲ್ಲವೂ ಸರಿಯಾಗುತ್ತದೆ. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಇತ್ತು ಅದಕ್ಕೆ ದೆಹಲಿಗೆ ಹೋಗಿದ್ದೆ.
ನಾನು ನಿಗದಿತ ಯಾವುದೇ ಕ್ಷೇತ್ರದಲ್ಲಿ ಚುನಾವಣೆ ನಿಲ್ಲುವ ನಿರ್ಧಾರ ಮಾಡಿಲ್ಲ. ಆದರೆ ನಮ್ಮ ಪಕ್ಷ ವರಿಷ್ಠರು ಎಲ್ಲಿ ನಿಲ್ಲು ಅಂದ್ರೆ ಅಲ್ಲಿ ನಿಲ್ಲುತ್ತೆನೆ. ಬೇಡ ಅಂದ್ರೆ ಸ್ಪರ್ಧೆ ಮಾಡಲ್ಲ, ಸ್ಪರ್ಧೆ ಬೇಡ ಅಂದ್ರೆ ಪಕ್ಷದ ಸೇವೆ ಮಾಡಿ ಅಂದ್ರೂ ಅದಕ್ಕೂ ಸಿದ್ಧ. ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆನ್ನುವುದು ಎಲ್ಲರ ಆಸೆ ಎಂದರು.
ಯುಗಾದಿ ನಂತರ ರಾಜ್ಯದಲ್ಲಿ ಒಳ್ಳೆ ಬೆಳೆ-ಮಳೆ, ಧಾರ್ಮಿಕ ಮುಖಂಡನ ಸಾವಾಗಲಿದೆ: ಕೋಡಿಶ್ರೀ ಸ್ಫೋಟಕ ಭವಿಷ್ಯ
ವಿದ್ಯಾರ್ಥಿನಿಯರ ರೀಲ್ಸ್‌ಗೆ ಕಾಮೆಂಟ್ ಮಾಡಿ ಅಚ್ಚರಿ ಮೂಡಿಸಿದ ನಟ ವಿಜಯ್ ದೇವರಕೊಂಡ
ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪತ್ನಿ ರಿವಾಬಾಗೆ ಅರ್ಪಿಸಿದ ರವೀಂದ್ರ ಜಡೇಜಾ..