Monday, December 23, 2024

Latest Posts

ಜೆಡಿಎಸ್ ಜೊತೆ ಮೈತ್ರಿ ಬಗ್ಗೆ ಮಾಜಿ ಸಿಎಂ ಬೊಮ್ಮಾಯಿ ಹೇಳಿದ್ದೇನು..?

- Advertisement -

Hubballi News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದು, ಪ್ರತಿ ಪಕ್ಷಗಳು ಇಡೀ ಭಾರತದಲ್ಲಿ ಶಕ್ತಿಯುತವಾಗಿಲ್ಲ ಎಂದು ಹೇಳಿದ್ದಾರೆ.

ಪ್ರತಿ ಪಕ್ಷಗಳಲ್ಲಿ ಪ್ರಾದೇಶಿಕ ಪಕ್ಷಗಳೇ ಹೆಚ್ಚಿವೆ‌. ಅವು ಆಯಾ ರಾಜ್ಯಗಳಲ್ಲಿ ಪ್ರತಿಪಕ್ಷಗಳಾಗಿ ಕೆಲಸ ಮಾಡುತ್ತಿವೆ. ಒಕ್ಕೂಟ ರಚನೆಯಿಂದ, ನಾಳೆ ನಡೆಯುವ ಪ್ರತಿಪಕ್ಷ ಸಭೆಯಿಂದ ಯಾವುದೇ ರಾಜಕೀಯ ಲಾಭ ಆಗುವುದಿಲ್ಲ. ಮೋದಿಯವರನ್ನ ಸೋಲಿಸಬೇಕೆಂದು ಒಗ್ಗಟ್ಟಾಗುತ್ತಿದ್ದಾರೆ, ಅದು ಆಗುವುದಿಲ್ಲ. ಪ್ರತಿ ಪಕ್ಷಗಳಿಗೆ ಯಾವುದೇ ಸ್ವಂತ ಬಲವಿಲ್ಲ, ನಿರ್ಧಿಷ್ಟವಾದ ಕಾರ್ಯಕ್ರಮವಿಲ್ಲ. ಭಾರತ ದೇಶ ಜಗತ್ತಿನಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಸದೃಢವಾಗಿದೆ. ರಾಷ್ಟ್ರೀಯ ಮಟ್ಟದ ಬೆಂಬಲ ನರೇಂದ್ರ ಮೋದಿಯವರಿಗೆ ಸಿಗುತ್ತಿದೆ ಎಂದು ಬೊಮ್ಮಾಯಿ ಹೇಳಿದರು.

ಜೆಡಿಎಸ್ ಜೊತೆ ಮೈತ್ರಿ ನಮ್ಮ ವರಿಷ್ಠರಿಗೆ ಬಿಟ್ಟಿದ್ದು. ನಮ್ಮ ಪಕ್ಷದ ವರಿಷ್ಠರು ಮತ್ತು ದೇವೇಗೌಡ್ರ ನಡುವೆ ಇರುವ ಮಾತುಕತೆ. ಈಗಾಗಲೇ ಕುಮಾರಸ್ವಾಮಿಯವರು ಕೆಲವೊಂದಿಷ್ಟು ಭಾವನೆಗಳನ್ನ ವ್ಯಕ್ತಪಡಿಸಿದ್ದಾರೆ. ಮಾತುಕತೆ ಫಲಶೃತಿ ಆಧಾರದ ಮೇಲೆ ಮುಂದಿನ ರಾಜಕೀಯ ಬೆಳವಣಿಗೆ ನಡೆಯುತ್ತದೆ. ವಿಪಕ್ಷ ಸ್ಥಾನ 18ರ ನಂತರ ಘೋಷಣೆ ಆಗಬಹುದು ಎಂಬ ಮಾಹಿತಿ ಇದೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ಇನ್ನು ಸೋಮಣ್ಣ ಕಾಂಗ್ರೆಸ್ ಸೇರ್ಪಡೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಬೊಮ್ಮಾಯಿ,  ಇದು ಕೇವಲ ಉಹಾಪೋಹ ಎಂದಿದ್ದಾರೆ. ಗೃಹ ಲಕ್ಷ್ಮಿ ಈಗಾಗಲೇ ಯಡವಟ್ಟಾಗಿದೆ, ದಿನಾಂಕ ಮೇಲೆ ದಿನಾಂಕ ಮುಂದುಡುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಗಳಿಗೆ ಯಾವುದೇ ನಿರ್ಧಿಷ್ಟವಾದ ನಿಯಮಗಳನ್ನ ಮಾಡುತ್ತಿಲ್ಲ. ದೊಡ್ಡ ಭಾರ ಆಗುತ್ತಿರುವ ಗೃಹಲಕ್ಷ್ಮಿ ಯೋಜನೆಯನ್ನ ಸಂಪೂರ್ಣವಾಗಿ ಅನುಷ್ಠಾನ ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ. ದಿನಾಂಕ ಮುಂದಾಕಿ ಕೆಲವೇ ಸಮಯದಲ್ಲಿ, ಕೆಲವರಿಗೆ ಜನರಿಗೆ ಮಾತ್ರ ಪ್ರಾರಂಭ ಮಾಡುವ ಸರ್ಕಾರಕ್ಕಿದೆ. ತಾಯಂದಿರಿಗೆ, ರಾಜ್ಯದ ಹೆಣ್ಣುಮಕ್ಕಳಿಗೆ ಬ್ರಹ್ಮನಿರಸ ಮಾಡುವಂತ ಉದ್ದೇಶ ಈ ಯೋಜನೆ. ಅಧಿವೇಶನದಲ್ಲಿ ಎಲ್ಲ ವಿಷಯಗಳ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿವೆ ಎಂದು ಬೊಮ್ಮಾಯಿ ಹೇಳಿದರು.

ಅನಧಿಕೃತ ಜೀಪ್ ರೇಸ್‌ಗೆ ಬ್ರೇಕ್ ಹಾಕಿದ RFO: 20 ಮಂದಿ ವಿರುದ್ಧ ಕೇಸ್ ದಾಖಲು

Benjamin Netanyahu : ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆಸ್ಪತ್ರೆಗೆ ದಾಖಲು

H.D.Kumaraswami : ಹೆಚ್.ಡಿ.ಕೆ ದೆಹಲಿಗೆ ದೌಡು..?! NDA ಮೀಟಿಂಗ್ ನಲ್ಲಿ ಭಾಗಿ..?!

- Advertisement -

Latest Posts

Don't Miss