Dharwad News: ಧಾರವಾಡ: ಧಾರವಾಡದಲ್ಲಿ ಸತತ 5ನೇ ಬಾರಿಗೆ ಗೆಲ್ಲುವ ನಿರೀಕ್ಷೆಯಲ್ಲಿರುವ ಪ್ರಹ್ಲಾದ್ ಜೋಶಿ ಮಾತನಾಡಿದ್ದು, ನನ್ನ ಕ್ಷೇತ್ರದ ಫಲಿತಾಂಶ ಇಂದು ಪ್ರಕಟವಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ ನನಗೆ 1ಲಕ್ಷ ಮುನ್ನಡೆ ಮತದಾರ ಪ್ರಭುಗಳ ನೀಡಿದ್ದಾರೆ. ಧಾರವಾಡ ಲೋಕ ಸಭಾ ಕ್ಷೇತ್ರದಲ್ಲಿ ಜನಾ ಬಿಜೆಪಿ ಕೈ ಹಿಡಿದಿದ್ದಾರೆ. ಜನತೆ ಸೇರಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.
ಓವರಾಲ್ ಫಲಿತಾಂಶ ನೋಡಿದಾಗ ನಮ್ಮ ಅಪೇಕ್ಷಿಗಿಂತ ಕಮ್ಮಿ ಆಗಿದೆ. ಉತ್ತರ ಪ್ರದೇಶಗಳಲ್ಲಿ ಇನ್ನೂ ಫಲಿತಾಂಶ ಪ್ರಕಟ ಬಾಕಿ ಇದೆ. ಅವುಗಳ ಅಂತಿಮ ಫಲಿತಾಂಶ ಬಂದ ನಂತರ ಮಾತಾಡೋದು ಒಳ್ಳೆಯದು. ರಾಜ್ಯದಲ್ಲಿ 18-19 ಸ್ಥಾನಗಳಲ್ಲಿ ಹಿಂದೆ ಮುಂದೆ ಲೀಡ್ ಬರುತ್ತಿದೆ. ಕಡಿಮೆ ಅಂದ್ರೂ ರಾಜ್ಯದಲ್ಲಿ 18 ಸ್ಥಾನದಲ್ಲಿ ನಾವು ಗೆಲ್ಲುತ್ತೇವೆ. ಅಂತಿಮ ಫಲಿತಾಂಶದ ಬಳಿಕ ಗ್ಯಾರಂಟಿ ಪ್ರಭಾ ಆಗಿದೇಯೋ ಇಲ್ವೋ ನೋಡೋಣ. ಚಾರ್ಸೋ ಬಾರ್ ಎನ್‌ಡಿಎ ನಾವು ಹೇಳಿದ್ದು ಸತ್ಯ. ಆ ಫೀಗರ್‌ಗೆ ನಾವು ರೀಚ್ ಆಗಿಲ್ಲ. ನಮ್ಮ ಎನ್‌ಡಿಎ ಮೈತ್ರಿಕೂಟ ಈಗಾಗಲೇ ಮೇಜಾರಿಟಿ ಕ್ರಾಸ್ ಮಾಡಿದೆ ಎಂದು ಜೋಶಿ ಹೇಳಿದ್ದಾರೆ.
ಯುಪಿಯಲ್ಲಿ ಕಡಿಮೆ ಸ್ಥಾನ ವಿಚಾರದ ಬಗ್ಗೆ ಮಾತನಾಡಿರುವ ಜೋಶಿ, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಯುಪಿಯಲ್ಲಿ ನಮ್ಮ ಸ್ಥಾನ ಕಡಿಮೆ ಬಂದಿವೆ. ಅಲ್ಲಿಯ ಸ್ಥಾನ ಕಡಿಮೆ ಆಗಲು ಕಾರಣ ನೋಡಬೇಕು. ಇನ್ನೂ ಕೆಲವು ಕ್ಷೇತ್ರಗಳ ಅಂತಿಮ ಫಲಿತಾಂಶ ಬರೋದಿದೆ. ಅಯೋದ್ಯಯಲ್ಲಿ ಬಿಜೆಪಿಗೆ ಮುನ್ನಡೆ ಇದೆ. ಓವರಾಲ್ ಉತ್ತರ ಪ್ರದೇಶದಲ್ಲಿ ಸ್ಥಾನ ಕಡಿಮೆ ಆಗಿರುವುದು ಸ್ವಲ್ಪ ಆತಂಕ ಹುಟ್ಟಿಸಿದೆ. ಪಶ್ಚಿಮ ಬಂಗಾಳದಲ್ಲಿ ದೊಡ್ಡ ಮಟ್ಟದ ದೊಂಬೆ ಗಲಭೆಗಳು ನಡೆದವು. ಎಲ್ಲರಿಗೂ ಈ ವಿಚಾರ ಗೊತ್ತು. ಸ್ಥಳೀಯ ರಾಜ್ಯ ಸರ್ಕಾರದ ವೈಫಲ್ಯದಿಂದ ಮತದಾನದಿನ ಗಲಭೆಗಳು ನಡೆದವು. ಆದರೂ ನಾವು ಹತ್ತು ಸ್ಥಾನ ಗೆದಿದ್ದೇವೆ. ಇನ್ನೂ ಹೆಚ್ಚಿನ ಸ್ಥಾನ ಗೆಲ್ಲುವ ಅಪೇಕ್ಷೆ ಇತ್ತು. ಪಶ್ಚಿಮ ಬಂಗಾಳದಲ್ಲಿ ನಮ್ಮ ಹೋರಾಟ ಮುಂದುವರೆಯುತ್ತದೆ. ಪಶ್ಚಿಮ ಬಂಗಳದಲ್ಲಿ ಪ್ರಜಾಪ್ರಭುತ್ವ ಸಂಪೂರ್ಣ ನೆಲ್ಲಕಚ್ಚಿದೆ, ಎಲ್ಲರು ಇದನ್ನು ಗಮನಿಸಿದ್ದಾರೆ. ಅಂತಿಮ ಫಲಿತಾಂಶದ ಬಳಿಕ ವಿವರವಾದ ಪ್ರತಿಕ್ರಿಯೆ ನೀಡುತ್ತೇನೆ ಎಂದು ಜೋಶಿ ಹೇಳಿದ್ದಾರೆ.
Lok Sabha Election 2024: ಪ್ರಧಾನ ಮಂತ್ರಿ ಪ್ರಮಾಣವಚನ ಸ್ವೀಕಾರಕ್ಕೆ ಸಿದ್ಧತೆ ಶುರು
ಫಲಿತಾಂಶಕ್ಕೂ ಮುನ್ನವೇ ರಾಶಿ ರಾಶಿ ಲಡ್ಡು ತಯಾರಿಸಿ, ಹಂಚಲು ಬಿಜೆಪಿಗರು ರೆಡಿ
ಕಾಂಗ್ರೆಸ್ ಗೆದ್ದರೆ 1 ಲಕ್ಷ ರೂಪಾಯಿ ಬರುತ್ತದೆ ಎಂದು ಬರೀ 10 ದಿನಗಳಲ್ಲಿ 12 ಸಾವಿರ ಅಕೌಂಟ್ ಓಪೆನ್

