ಹಲವರಿಗೆ ಮೊಬೈಲ್, ಲ್ಯಾಪ್‌ಟಾಪ್ ಚಾರ್ಜ್ ಆಗುತ್ತಿರುವಾಗಲೇ ಬಳಸುವ ಅಭ್ಯಾಸವಿರುತ್ತದೆ. ಆದ್ರೆ ಹೀಗೆ ಮಾಡುವುದರಿಂದ ನಮಗೆ ಗೊತ್ತಿಲ್ಲದೇ, ನಮ್ಮ ದೇಹದಲ್ಲಿ ಕ್ಯಾನ್ಸರ್ ಕಣಗಳು ಉತ್ಪತ್ತಿಯಾಗುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. ಮೊಬೈಲ್ ಮಮತ್ತು ಲ್ಯಾಪ್‌ಟಾಪ್ ರೇಡಿಯೇಶನ್‌ನಿಂದ ಈ ಕ್ಯಾನ್ಸರ್ ಕಣಗಳು ಉತ್ಪತ್ತಿಯಾಗುವ ಸಂಭವವಿರುತ್ತದೆ. ಹಾಗಾಗಿ ಲ್ಯಾಪ್‌ಟಾಪ್ ಮತ್ತು ಮೊಬೈಲನ್ನ ಚಾರ್ಜ್ ಆಗುವ ಸಮಯದಲ್ಲಿ ಬಳಸಬಾರದು. ಈ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ ಬನ್ನಿ..
ಮೊಬೈಲ್ ಅಥವಾ ಲ್ಯಾಪ್‌ಟಾಪ್ ಚಾರ್ಜ್‌ಗೆ ಹಾಕಿ ಬಳಕೆ ಮಾಡಿದರೆ, ಅದರಲ್ಲಿರುವ ಕೆಟ್ಟ ವಿಕಿರಣಗಳು ನಮ್ಮ ದೇಹ ಸೇರುವ ಸಾಧ್ಯತೆ ಇರುತ್ತದೆ. ಅಲ್ಲದೇ ನಿಮ್ಮ ಬಳಿ ಇದನ್ನು ಚೆಕ್ ಮಾಡುವ ಮೀಟರ್ ಇದ್ರೆ ನೀವು ಅದರಿಂದ ಚೆಕ್ ಮಾಡಬಹುದು. ಹಾಗೆ ಚೆಕ್ ಮಾಡುವಾಗ ನೀವು ನಿಮ್ಮ ಕೈಯನ್ನು ಆ ಮೀಟರ್‌ಗೆ ಟಚ್ ಮಾಡಿದ್ರೆ, 0,1,2 ಹೀಗೆ ಚಿಕ್ಕ ಚಿಕ್ಕ ಅಂಕಿಗಳನ್ನು ತೋರಿಸುತ್ತದೆ. ಅದೇ ನೀವು ಚಾರ್ಜ್ ಆಗುತ್ತಿರುವ ಲ್ಯಾಪ್‌ಟಾಪ್ ಅಥವಾ ಮೊಬೈಲ್ ಮುಟ್ಟಿ, ಈ ಮೀಟರ್ ಟಚ್ ಮಾಡಿದ್ರೆ, 300ರ ಮೇಲೆ ಅಂಕಿ ತೋರಿಸುತ್ತದೆ. ಅಷ್ಟು ವಿಕಿರಣ ನಿಮ್ಮ ದೇಹಕ್ಕೆ ತಾಕಿದೆ ಎಂದರ್ಥ.
ಇನ್ನು ಮೊಬೈಲ್ ಚಾರ್ಜ್ ಮಾಡುವಾಗ, ಬಳಕೆ ಮಾಡಿ, ಎಷ್ಟೋ ಕಡೆ ಮೊಬೈಲ್ ಸ್ಫೋಟವಾಗಿರುವ ಘಟನೆಯನ್ನ ನಾವು ನೋಡಿರ್ತೀವಿ. ಇನ್ನು ನೀವು ಚಾರ್ಜ್ ಆಗುತ್ತಿರುವ ಗ್ಯಾಜೆಟ್ಸ್ ಬಳಕೆ ಮಾಡಿದ್ರೆ, ನಿಮ್ಮ ದೇಹಕ್ಕೆ ಕೆಟ್ಟ ವಿಕಿರಣಗಳು ತಾಗಿ, ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ಚಾರ್ಜ್ ಹಾಕಿ, ಯಾವ ವಸ್ತುವನ್ನೂ ಬಳಸಬೇಡಿ.