ಸೃಷ್ಟಿಕರ್ತ ಬ್ರಹ್ಮ ಈ ಭೂಮಿಯಲ್ಲಿ ಹಲವು ಜೀವಿಗಳನ್ನು ಸೃಷ್ಟಿಸಿದ್ದಾನೆ. ಅಂತೆಯೇ ಮನುಷ್ಯನನ್ನು ಸೃಷ್ಟಿಸಿದ್ದೂ ಬ್ರಹ್ಮನೇ. ಒಬ್ಬೊಬ್ಬರನ್ನ ಒಂದೊಂದು ರೀತಿ ಸೃಷ್ಟಿಸಿರುವ ಬ್ರಹ್ಮ, ಹೆಣ್ಣನ್ನು ಸೃಷ್ಟಿಸಬೇಕಾದರೆ, ಹಲವು ಸಮಯ ತೆಗೆದುಕೊಂಡಿದ್ದನಂತೆ. ಆ ಸಮಯದಲ್ಲಿ ಒಂದು ಘಟನೆ ನಡೆಯಿತು. ಯಾವುದು ಆ ಘಟನೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಬ್ರಹ್ಮ 6 ದಿನ ತೆಗೆದುಕೊಂಡು ಹೆಣ್ಣಿನ ಸೃಷ್ಟಿ ಮಾಡಿದನಂತೆ. ಆದರೂ ಅವನ ಸೃಷ್ಟಿ ಸಂಪೂರ್ಣವಾಗಲಿಲ್ಲ. ಈ ಬಗ್ಗೆ ದೇವತೆಗಳು ಪ್ರಶ್ನಿಸಿದರಂತೆ. 6 ದಿನವಾದರೂ ಯಾಕೆ ಈ ಜೀವ ಸಂಪೂರ್ಣವಾಗಿ ಸೃಷ್ಟಿಯಾಗಲಿಲ್ಲ. ಅಂಥಾದ್ದೇನಿದೆ ಇದರಲ್ಲಿ ಎಂದು ಕೇಳದರಂತೆ. ಅದಕ್ಕೆ ಬ್ರಹ್ಮ, ಇವಳು ನಾರಿ. ಇವಳು ಶಕ್ತಿಶಾಲಿಯಾಗಿರುವಳು ಎಂದರಂತೆ. ಅದಕ್ಕೆ ದೇವತೆಗಳು ಇವಳ ದೇಹವನ್ನು ಸ್ಪರ್ಷಿಸಿ, ಈಕೆಯಂತೂ ನಾಜೂಕಾಗಿರುವಳಲ್ಲ..? ಎಂದು ಮರು ಪ್ರಶ್ನಿಸಿದರಂತೆ.
ಅದಕ್ಕೆ ಬ್ರಹ್ಮ, ಇವಳು ಹೊರಗಿನಿಂದ ನಾಜೂಕಾಗಿಯೇ ಕಾಣುವಳು. ಆದರೆ ಆಂತರ್ಯದಿಂದ ಗಟ್ಟಿಮುಟ್ಟಾಗಿರುವಳು. ಎಂಥ ಸಂದರ್ಭವನ್ನೂ ನಿಭಾಯಿಸಬಲ್ಲ ಶಕ್ತಿ ಸಾಮರ್ಥ್ಯವನ್ನ ಹೊಂದಿರುವಳು. ಅನಾರೋಗ್ಯ ಪೀಡಿತಳಾಗಿದ್ದರೂ, ಈಕೆ ಕೆಲಸವನ್ನು ಮಾಡಬಲ್ಲಳು. ಪುರುಷರಿಗಿಂತ ಜಾಣೆಯಾಗಿರುವಳು. ಪುರುಷರಿಗಿಂತ ಚೆನ್ನಾಗಿ ಯೋಚಿಸಿ, ಕೆಲಸ ಮಾಡಬಲ್ಲಳು ಎಂದರಂತೆ.
ನಂತರ ದೇವತೆಗಳು ಆಕೆಯ ಕೆನ್ನೆಯನ್ನು ಮುಟ್ಟಿದರಂತೆ. ಅದು ತೇವವಾಗಿತ್ತು. ಆ ಬಗ್ಗೆ ಕೇಳಿದಾಗ, ಅವಳು ತನಗೆ ಬೇಸರವಾದಾಗ ಈ ರೀತಿ ಕಣ್ಣೀರಾಗುತ್ತಾಳೆ. ನಂತರ ಮತ್ತೆ ಎಲ್ಲವನ್ನೂ ಮರೆತು, ಮುನ್ನಡೆಯುತ್ತಾಳೆ ಎನ್ನುತ್ತಾರೆ ಬ್ರಹ್ಮ. ಆಗ ದೇವತೆಗಳು, ಈಕೆ ಸಂಪೂರ್ಣಳಲ್ಲ ಎಂದು ಹೇಳಿದಿರಲ್ಲ. ಹಾಗಾದರೆ, ಏಕೆಯಲ್ಲಿ ಯಾವ ಗುಣವಿಲ್ಲ..? ಎಂದು ಕೇಳುತ್ತಾರೆ. ಆಗ ಬ್ರಹ್ಮ, ಈಕೆಗೆ ತನ್ನ ಮಹತ್ವವೇ ಗೊತ್ತಿರುವುದಿಲ್ಲ. ಈಕೆ ಮನೆ ಜನರ, ಮನೆ ಕೆಲಸದ ಕಾಳಜಿ ಮಾಡುವುದರಲ್ಲಿ, ತಮ್ಮವರ ಕಾಳಜಿ ಮಾಡುವುದರಲ್ಲಿ, ಸಮಾಜದ ಕಾಳಜಿ ಮಾಡುವುದರಲ್ಲಿ, ಸಮಯ ಕಳೆಯುತ್ತಾಳೆ ಹೊರತು. ತನ್ನ ಮಹತ್ವವನ್ನು ತಾನು ಅರಿಯುವುದಿಲ್ಲ ಎಂದು ಬ್ರಹ್ಮ ದೇವರು ಹೇಳುತ್‌ತಾರೆ.