Saturday, December 21, 2024

Latest Posts

Health Tips: ಮೂಲವ್ಯಾದಿಯನ್ನ ನಿರ್ಲಕ್ಷಿಸಿದ್ರೆ ಏನಾಗುತ್ತೆ?

- Advertisement -

Health Tips: ಮೂಲವ್ಯಾಧಿ ಅನ್ನೋದು ಸಾಮಾನ್ಯ ಆರೋಗ್ಯ ಸಮಸ್ಯೆ ಆದರೂ, ಅದನ್ನು ಕಡೆಗಣಿಸಿದರೆ ಕ್ಯಾನ್ಸರ್‌ನಂಥ ದೊಡ್ಡ ಖಾಯಿಲೆಯಾಗಿ ಬದಲಾಗುವ ಎಲ್ಲ ಲಕ್ಷಣಗಳಿರುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಮೂಲವ್ಯಾಧಿಯನ್ನು ನಿರ್ಲಕ್ಷಿಸಬಾರದು. ಈ ಬಗ್ಗೆ ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು ವಿವರಿಸಿದ್ದಾರೆ.

ಮೂಲವ್ಯಾಧಿ ಲಕ್ಷಣ ಏನು ಅಂದ್ರೆ, ಮೊದಲ ಹಂತದಲ್ಲಿ ಮಲಬದ್ಧತೆ ಶುರುವಾಗುತ್ತದೆ. ಪ್ರತಿದಿನ ಹೊಟ್ಟೆ ಶುಚಿಯಾದರೆ, ಆ ವ್ಯಕ್ತಿ ಆರೋಗ್ಯಕರ ವ್ಯಕ್ತಿ ಎಂದರ್ಥ. ಎರಡು ದಿನಕ್ಕೊಮ್ಮೆ ಮಲ ವಿಸರ್ಜನೆ ಮಾಡುತ್ತಿದ್ದರೆ, ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಾಣಬೇಕು ಎಂದರ್ಥ. ಆದರೆ ಮೂರ್ನಾಲ್ಕು ದಿನಕ್ಕೊಮ್ಮೆ ಮಲ ವಿಸರ್ಜನೆ ಮಾಡುವುದು. ಅದು ಕೂಡ ಕಷ್ಟಪಡಬೇಕಾಗುತ್ತದೆ ಎಂದರೆ, ಅದು ಮಲಬದ್ಧತೆ ಸಮಸ್ಯೆ ಎಂದರ್ಥ. ಈ ಸಮಸ್ಯೆಯನ್ನು ಬುಡದಿಂದಲೇ ಕಿತ್ತು ಹಾಕಬೇಕು.

ಮಲಬದ್ಧತೆ ಸಮಸ್ಯೆ ಕಡೆಗಣಿಸಿದರೆ, ಎರಡನೇಯ ಹಂತದಲ್ಲಿ ಗುದದ್ವಾರದ ಬಳಿ ಗುಳ್ಳೆಗಳಾಗುತ್ತದೆ. ಈ ವೇಳೆ ನೀವು ನಿರ್ಲಕ್ಷ್ಯ ಮಾಡದೇ, ಆ ಸಮಸ್ಯೆಗೆ ಚಿಕಿತ್ಸೆ ಪಡೆಯಲೇಬೇಕಾಗುತ್ತದೆ. ಇಲ್ಲವಾದಲ್ಲಿ ಅದು ಮೂಲವ್ಯಾಧಿ ಸಮಸ್ಯೆಯಾಗಿ ಬದಲಾಗಿ, ಮಲದಲ್ಲಿ ರಕ್ತ ಬರುತ್ತದೆ. ಬಳಿಕ ಆ ಸಮಸ್ಯೆ ಕ್ಯಾನ್ಸರ್‌ಕಾರಕವಾಗಿ ಬದಲಾಗಬಹುದು.

ಇನ್ನು ಪ್ರತಿದಿನ ನೀವು ಮಲವಿಸರ್ಜನೆ ಮಾಡುವ ಕಷ್ಟಪಡುತ್ತಿದ್ದರೆ, ಗಟ್ಟಿ ಮಲವಿಸರ್ಜನೆ ಮಾಡುತ್ತಿದ್ದರೆ, ಅಥವಾ ಮಲವಿಸರ್ಜನೆ ಅಪಪೂರ್ಣವಾಗುತ್ತಿದ್ದರೆ, ನಿಮ್ಮ ಹೊಟ್ಟೆಯಲ್ಲಿ ಉಳಿದ ಮಲ ಹಾಗೇ ಇರುತ್ತದೆ. ಆಗ ಹೊಟ್ಟೆಯಲ್ಲಿ ಡ್ರೈನೇಜ್ ರೀತಿ, ಮಲ ಕೂಡಿಕೊಳ್ಳುತ್ತದೆ. ಇಂಥ ಸಮಸ್ಯೆಯೇ ಮಾರಕ ರೋಗಕ್ಕೆ ಆಹ್ವಾನ ನೀಡುವುದು. ಹಾಗಾಗಿ ಮಲಬದ್ಧತೆ ಸಮಸ್ಯೆ ಬಾರದ ಹಾಗೆ ನೋಡಿಕೊಳ್ಳಿ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss