Friday, December 27, 2024

Latest Posts

ಮಣ್ಣಿನ ಪಾತ್ರೆಯಲ್ಲಿ ಅಡಿಗೆ ಮಾಡಿ, ಊಟ ಮಾಡಿದ್ರೇನು ಲಾಭ..?

- Advertisement -

ಹೆಚ್ಚಿನವರು ಸ್ಟೀಲ್ ಪಾತ್ರೆಯಲ್ಲಿ ಅಡಿಗೆ ಮಾಡಿ, ಊಟ ಮಾಡ್ತಾರೆ. ಕೆಲವರು ಅಡಿಗೆಯನ್ನ ಸ್ಟೀಲ್ ಪಾತ್ರೆಯಲ್ಲಿ ಮಾಡಿದ್ರೂ, ಊಟ ಮಾತ್ರಾ, ಬೆಳ್ಳಿ ತಟ್ಟೆ ಅಥವಾ ತಾಮ್ರದ ತಟ್ಟೆ ಅಥವಾ ಬಾಳೆ ಎಲೆಯಲ್ಲಿ ಊಟ ಮಾಡ್ತಾರೆ. ಇದರಿಂದ ಆರೋಗ್ಯಕ್ಕೇನು ಹಾನಿಯಿಲ್ಲ. ಆದ್ರೆ ಮಣ್ಣಿನ ಪಾತ್ರೆಯಲ್ಲಿ ಅಡುಗೆ ತಯಾರಿಸಿ, ಊಟ ಮಾಡಿದ್ರೆ, ಆರೋಗ್‌ಯದಲ್ಲಿ ಹೆಚ್ಚಿನ ಅಭಿವೃದ್ಧಿಯನ್ನ ಕಾಣಬಹುದು. ಹಾಗಾದ್ರೆ ಇದರಿಂದಾಗುವ ಇನ್ನೂ ಸಾಕಷ್ಟು ಆರೋಗ್ಯ ಲಾಭದ ಬಗ್ಗೆ ತಿಳಿಯೋಣ ಬನ್ನಿ..

ಹಲವು ವರ್ಷಗಳ ಹಿಂದೆ, ಅಂದ್ರೆ ತಾತ ಮುತ್ತಾತನ ಕಾಲದಲ್ಲಿ ಮಣ್ಣಿನ ಪಾತ್ರೆಯಲ್ಲಿಯೇ ಅಡುಗೆಯನ್ನ ಮಾಡಲಾಗುತ್ತಿತ್ತು. ಆದ್ರೀಗ ಸ್ಟೀಲ್‌ ಬಳಸಲು ಶುರು ಮಾಡಿದ್ದು, ಮಣ್ಣಿನ ಪಾತ್ರೆಯನ್ನ ಜನ ಮರೆತೇ ಬಿಟ್ಟಿದ್ದಾರೆ. ಆದ್ರೂ ಕೆಲವೆಡೆ ಮಣ್ಣಿನ ಪಾತ್ರೆಯಲ್ಲಿ ಅಡಿಗೆ ಮಾಡಿ, ಉಣ್ಣಲಾಗುತ್ತದೆ. ಸಾತ್ವಿಕ ಊಟ ಮಾಡುವವರು ಇಂಥ ಪಾತ್ರೆಯಲ್ಲಿಯೇ ಅಡುಗೆ ತಯಾರಿಸುವುದು. ಅಂಥ ಆಹಾರ ರುಚಿಕರವೂ, ಆರೋಗ್ಯಕರವೂ ಆಗಿರುತ್ತದೆ.

ಇನ್ನು ಮೆಟಲ್ ಮತ್ತು ಮಣ್ಣಿನ ಪಾತ್ರೆಗೆ ಏನು ವ್ಯತ್ಯಾಸ..? ಎರಡರಲ್ಲೂ ಅಡುಗೆ ರುಚಿಯೇ ಇರುತ್ತದಲ್ಲಾ ಅನ್ನೋದು ನಿಮ್ಮ ಪ್ರಶ್ನೆಯಾಗಿರಬಹುದು. ಆದ್ರೆ ಮೆಟಲ್ ಪಾತ್ರೆಯಲ್ಲಿ ಅಡಿಗೆ ಮಾಡಿದ ಮೇಲೆ ಪಾತ್ರೆಗೆ ಟಚ್ ಮಾಡಿದಾಗ ನಿಮ್ಮ ಕೈ ಸುಡುತ್ತದೆ. ಅದೇ ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡಿದ ಮೇಲೆ ನೀವು ಮಣ್ಣಿನ ಪಾತ್ರೆ ಮುಟ್ಟಿ ನೋಡಿದ್ರೆ, ಅದು ಸುಡೋದಿಲ್ಲಾ. ಅದೇ ರೀತಿ, ಮಣ್ಣಿನ ಪಾತ್ರೆಯಲ್ಲಿ ಅಡುಗೆ ತಯಾರಿಸಿದ್ರೆ, ಆಹಾರದ ಪೋಶಕಾಂಶಗಳು ಉತ್ತಮವಾಗಿರುತ್ತದೆ. ಮೆಟಲ್ ಪಾತ್ರೆಯಲ್ಲಿ ಅಡುಗೆ ತಯಾರಿಸಿದ್ರೆ, ಪಾತ್ರೆ ಸುಟ್ಟ ಹಾಗೆ, ಆಹಾರದ ಪೋಶಕಾಂಶಗಳು ಸುಟ್ಟು ಹೋಗಿರುತ್ತದೆ.

ಇನ್ನು ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡಿದ್ರೆ ಅದು ಸುಡೋದಿಲ್ವಾ..? ಅಂತಾ ನೀವು ಕೇಳಬಹುದು. ಮಣ್ಣಿನ ಪಾತ್ರೆ ಸುಟ್ಟಷ್ಟು ಗಟ್ಟಿಗೊಳ್ಳತ್ತೆ. ಹಾಗಾಗಿ ನೀವು ಮಣ್ಣಿನ ಪಾತ್ರೆಯನ್ನ ಬಳಸಬಹುದು. ಮಣ್ಣಿನ ಮಡಿಕೆ ಒಡೆಯುವುದು ನಾಲ್ಕು ಕಾರಣಕ್ಕೆ. ಮೊದಲನೇಯದಾಗಿ ನೀವು ಮಣ್ಣಿನ ಮಡಿಕೆ ಮನೆಗೆ ತಂದ ಬಳಿಕ ಬಳಸಲು ಶುರು ಮಾಡಬಾರದು. ಆ ಮಡಿಕೆಯನ್ನ 24 ತಾಸು ಅಂದ್ರೆ ಒಂದು ದಿನ ತಣ್ಣೀರಿನಲ್ಲಿ ನೆನೆಸಿಡಬೇಕು. ನಂತರ ಒಣಗಿಸಿ ಬಳಸಬೇಕು. ಇಲ್ಲವಾದಲ್ಲಿ ಮಡಿಕೆ ಒಡೆಯುತ್ತದೆ.

ಎರಡನೇಯ ಕಾರಣ, ಹೆಚ್ಚಿನ ಉರಿಯಲ್ಲಿ ಅಡಿಗೆ ಮಾಡುವುದು. ನೀವು ಮಣ್ಣಿನ ಮಡಿಕೆಯಲ್ಲಿ ಅಡಿಗೆ ಮಾಡುತ್ತಿದ್ದೀರಿ ಎಂದರೆ, ಮಂದ ಉರಿಯಲ್ಲಿ ಅಥವಾ ಮಧ್ಯಮ ಉರಿಯಲ್ಲಿ ಆಹಾರವನ್ನು ಬೇಯಿಸಬೇಕು. ದೊಡ್ಡ ಉರಿಯಲ್ಲಿಟ್ಟರೆ, ಪಾತ್ರೆ ಒಡೆಯುವ ಸಾಧ್ಯತೆ ಇರುತ್ತದೆ.

ಮೂರನೇಯದಾಗಿ ಮಣ್ಣಿನ ಪಾತ್ರೆಯಲ್ಲಿ ಅಡಿಗೆ ಮಾಡಿದ ಬಳಿಕ ತಂಪಿನ ವಸ್ತುವಿನ ಮೇಲೆ ಅಥವಾ ನೀರಿರುವ ಜಾಗದಲ್ಲಿ ಇಟ್ಟರೆ, ಮಡಿಕೆ ಒಡೆಯುತ್ತದೆ. ತಂಪಿನ ವಸ್ತು ಅಂದ್ರೆ, ಟೇಬಲ್. ಮಣ್ಣಿನ ಪಾತ್ರೆಯನ್ನು ಟೇಬಲ್ ಮೇಲೆ ಇಡುವ ಬದಲು, ಅದರ ಮೇಲೊಂದು ಬಟ್ಟೆ ಹಾಸಿ, ಅದರ ಮೇಲೆ ಪಾತ್ರೆ ಇರಿಸಿ.

ನಾಲ್ಕನೇಯದು  ಉತ್ತಮ ಕ್ವಾಲಿಟಿಯ ಮಣ್ಣಿನ ಪಾತ್ರೆ ಖರೀದಿಸುವುದು. ನೀವು ಮಣ್ಣಿನ ಪಾತ್ರೆಯೇನೋ ಖರಿದಿಸುತ್ತೀರಿ. ಆದ್ರೆ ಅದರ ಕ್ವಾಲಿಟಿ ಒಳ್ಳೆಯದುಂಟಾ, ಅದರಲ್ಲಿ ಅಡಿಗೆ ಮಾಡಿದ್ರೆ ಏನೂ ತೊಂದರೆ ಇಲ್ವಾ ಅನ್ನೋದರ ಬಗ್ಗೆ ಕೂಡಾ ತಿಳಿದುಕೊಂಡಿರಬೇಕಾಗುತ್ತದೆ. ಕುಂಬಾರರು ಮಾಡಿದ ಮಡಿಕೆ ಉತ್ತಮವಾಗಿರುತ್ತದೆ. ಆದ್ರೆ ಕೆಲವರು ಮಷಿನ್ ಮೂಲಕ ಮಡಿಕೆ ಮಾಡಿರುತ್ತಾರೆ. ಅದನ್ನ ಮಾತ್ರ ಖರೀದಿಸಬೇಡಿ.

- Advertisement -

Latest Posts

Don't Miss