Health Tips: ನಾವು ಈಗಾಗಲೇ ನಿಮಗೆ ಕೂದಲು ಉದುರುವಿಕೆಗೆ ಏನು ಕಾರಣ, ಅದಕ್ಕೆ ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಅಂತಾ ಹೇಳಿದ್ದೇವೆ. ಅದೇ ರೀತಿ, ವೈದ್ಯೆಯಾದ ಡಾ.ದೀಪಿಕಾ ಇಂದು ಕೂದಲು ಉದುರಲು ಮುಖ್ಯವಾದ ಕಾರಣವೇನು ಅಂತಾ ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ದೇಹದಲ್ಲಿ ಐರನ್ ಪ್ರಮಾಣ ಕಡಿಮೆಯಾದರೆ, ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತದೆ. ಇದಕ್ಕೆ ನಾವು ಜೀವಿಸುವ ಜೀವನ ಶೈಲಿಯೂ ಕಾರಣವಾಗುತ್ತದೆ. ನಮ್ಮ ಜೀವನ ಶೈಲಿ ಆರೋಗ್ಯಕರವಾಗಿ ಇರದಿದ್ದಲ್ಲಿ, ನಮ್ಮ ದೇಹಕ್ಕೆ ಬೇಕಾದ ಆರೋಗ್ಯಕರ ಪೋಷಕಾಂಶ ಸಿಗುವುದಿಲ್ಲ. ಲೇಟಾಗಿ ಏಳುವುದು, ಹೊತ್ತಲ್ಲದ ಹೊತ್ತಿಗೆ ಆಹಾರ ಸೇವಿಸುವುದು, ಆರೋಗ್ಯಕರ ಆಹಾರದ ಬದಲು ಜಂಕ್ ಫುಡ್, ಫಾಸ್ಟ್ ಫುಡ್ ಸೇವನೆ ಮಾಡುವುದು. ದೇಹಕ್ಕೆ ಅವಶ್ಯಕವಿದ್ದಷ್ಟು ನೀರು ಕುಡಿಯದೇ ಇರುವುದು. ಇತ್ಯಾದಿ ಅಭ್ಯಾಸಗಳು ನಮ್ಮ ಆರೋಗ್ಯ ಹಾಳು ಮಾಡುವುದರ ಜೊತೆಗೆ, ನಮ್ಮ ಸೌಂದರ್ಯಕ್ಕೂ ಧಕ್ಕೆ ತರುತ್ತದೆ.
ಅಲ್ಲದೇ, ದೇಹದಲ್ಲಿ ವಿಟಾಮಿನ್ ಬಿ ಕಡಿಮೆಯಾದರೂ ಕೂಡ, ಕೂದಲು ಉದುರುವ ಸಮಸ್ಯೆ ಉಂಟಾಗುತ್ತದೆ. ಕೆಲಸದ ಒತ್ತಡ, ಬೇರೆ ಬೇರೆ ರೀತಿ ಟೆನ್ಶನ್, ದೇಹದಲ್ಲಿ ಹಾರ್ಮೋನು ಬದಲಾವಣೆಯಿಂದ ಕೂಡ ಕೂದಲು ಉದುರುವ ಸಾಧ್ಯತೆ ಇದೆ.
ಇನ್ನು ಈ ಬಗ್ಗೆ ನೀವು ಚಿಕಿತ್ಸೆ ತೆಗೆದುಕೊಳ್ಳಲು ಹೋದರೆ, ಈ ಬಗ್ಗೆ ಕೌನ್ಸೆಲಿಂಗ್ ನಡೆಸಲಾಗುತ್ತದೆ. ಯಾವ ಕಾರಣಕ್ಕೆ ಕೂದಲು ಉದುರುತ್ತಿದೆ. ಯಾವ ರೀತಿಯ ಚಿಕಿತ್ಸೆ ಕೊಡಿಸಬಹುದು ಇತ್ಯಾದಿ, ವಿಷಯಗಳ ಬಗ್ಗೆ ಗಮನಹರಿಸಿ, ಬಳಿಕ ಚಿಕಿತ್ಸೆ ಕೊಡಲಾಗುತ್ತದೆ. ಏಕೆಂದರೆ, ಕೆಲವರಿಗೆ ಜ್ವರ ಬಂದಾಗ ಕೂದಲು ಉದುರುವ ಸಾಧ್ಯತೆ ಇರುತ್ತದೆ. ಇನ್ನು ಕೆಲವರಿಗೆ ಆಹಾರ ಕೊರತೆಯಿಂದ ಕೂದಲು ಉದುರುತ್ತದೆ. ಮತ್ತೆ ಕೆಲವರು ಡಯಟ್ ಮಾಡಿದಾಗಲೂ ಕೂದಲು ಉದುರುತ್ತದೆ. ಹಾಗಾಗಿ ಕೂದಲು ಉದುರುವ ಸಮಸ್ಯೆ ಇರುವವರ ದೇಹದಲ್ಲಿ ಯಾವ ಸಮಸ್ಯೆ ಇದೆ ಎಂದು ತಿಳಿದು, ಬಳಿಕ ಚಿಕಿತ್ಸೆ ನೀಡಲಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..