Sunday, April 20, 2025

Latest Posts

ಸಿಂಧಿ ಜನರು ವ್ಯಾಪಾರದಲ್ಲಿ ಬುದ್ಧಿವಂತರಾಗಿರಲು ಕಾರಣವೇನು..?

- Advertisement -

Business Tips: ಹಲವರು ಮಾರ್ವಾಡಿಗಳು ವ್ಯಾಪಾರದಲ್ಲಿ ನಿಸ್ಸೀಮರು ಎಂದು ಹೇಳುತ್ತಾರೆ. ಆದರೆ ಬರೀ ಮಾರ್ವಾಡಿಗಳಷ್ಟೇ ಅಲ್ಲ, ಉತ್ತರ ಭಾರತದ ಕಡೆ ಹೋದರೆ, ಅಲ್ಲಿ ನಿಮಗೆ ಸಿಂಧಿ ವ್ಯಾಪಾರಿಗಳು ಕೂಡ ಸಿಗುತ್ತಾರೆ. ಇವರು ಇನ್ನೂ ಬುದ್ಧಿವಂತರಾಗಿರುತ್ತಾರೆ. ಹಾಗಾದರೆ ಸಿಂಧಿ ಜನ ವ್ಯಾಪಾರದಲ್ಲಿ ಬುದ್ಧಿವಂತರಾಗಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..

ಸಿಂಧಿ ಜನರು ವ್ಯಾಪಾರದಲ್ಲಿ ಸಾಕಷ್ಟು ಲಾಭ ಗಳಿಸಲು ಕಾರಣವೇನೆಂದರೆ, ಅವರಲ್ಲಿರುವ ಕೆಲವು ಗುಣಗಳೇ ಅವರ ಯಶಸ್ಸಿಗೆ ಕಾರಣವಾಗಿದೆ. ಸಿಂಧಿಗಳು ವ್ಯಾಪಾರ ಮಾಡುವಾಗ ಎಂದಿಗೂ ಅಹಂ ತೋರಿಸುವುದಿಲ್ಲ. ಬಂದ ಗ್ರಾಹಕರಿಗೆ ಗೌರವ ಕೊಟ್ಟು, ಅವರಿಗೆ ಬೇಕಾದ ವಸ್ತುವನ್ನು ತೋರಿಸಿ, ಅದರ ಬಗ್ಗೆ ವಿವರಿಸುತ್ತಾರೆ. ಗ್ರಾಹಕರು ಆ ವಸ್ತುವನ್ನು ಖರೀದಿಸಿದರೂ, ಖರೀದಿಸದೇ ಇದ್ದರೂ ಅವರ ಗೌರವ ಕಡಿಮೆಯಾಗುವುದಿಲ್ಲ. ಎಲ್ಲ ಗ್ರಾಹಕರಿಗೂ ಸಮಾನವಾದ ಗೌರವ ಕೊಡುತ್ತಾರೆ. ಇದೇ ಅಹಂ ಇಲ್ಲದ ವ್ಯಾಪಾರದಿಂದಲೇ, ಸಿಂಧಿಗಳು ಯಶಸ್ಸು ಸಾಧಿಸೋದು.

ವ್ಯಾಪಾರ ಮಾಡುವಾಗ, ಆ ವ್ಯಾಪಾರದ ಬಗ್ಗೆ ಹಲವು ಸಿಕ್ರೇಟ್ ಗಳಿರುತ್ತದೆ. ನಿಜ ಹೇಳಬೇಕು ಅಂದ್ರೆ ವ್ಯಾಪಾರದಲ್ಲಿ ಉದ್ಧಾರವಾಗಬೇಕು ಅಂದ್ರೆ, ಆ ಸಿಕ್ರೇಟನ್ನು ನಾವು ಯಾರಿಗೂ ಹೇಳಬಾರದು. ಕುಟುಂಬಸ್ಥರಿಗೂ ಹೇಳಬಾರದು. ಸಿಂಧಿಗಳು ತಮ್ಮ ವ್ಯಾಪಾರದ ಸಿಕ್ರೇಟನ್ನು ಯಾರಿಗೂ ಹೇಳುವುದಿಲ್ಲ. ಹಾಗಾಗಿ ಅವರು ಯಶಸ್ವಿ ವ್ಯಾಪಾರಿಯಾಗುತ್ತಾರೆ.

ಸಿಂಧಿಗಳು ಶ್ರೀಮಂತರಾದರೂ, ಒಳ್ಳೆ ವ್ಯಾಪಾರಸ್ಥರಾದರೂ, ಜೀವನಕ್ಕೆ ಎಷ್ಟು ಅವಶ್ಯಕತೆ ಇರುತ್ತದೆಯೋ, ಅಷ್ಟೇ ಖರ್ಚು ಮಾಡುತ್ತಾರೆ. ಹಾಗಂತ, ಅವರು ಜೀವನವನ್ನು ಎಂಜಾಯ್ ಮಾಡುವುದಿಲ್ಲ ಅಂತಲ್ಲ. ಬದಲಾಗಿ ಅವಶ್ಯಕತೆ ಇದ್ದಷ್ಚು ಮಾತ್ರ ಖರ್ಚು ಮಾಡಿ, ಸಂತೋಷದ ಜೀವನಕ್ಕೆ ಒಂದಿಷ್ಟು ವ್ಯಯಿಸಿ. ಭವಿಷ್ಯಕ್ಕಾಗಿ, ಕಷ್ಟಕಾಲಕ್ಕಾಗಿ ಚೆನ್ನಾಗಿ ಉಳಿತಾಯ ಮಾಡುತ್ತಾರೆ. ಈ ಜಾಣತನವೇ, ಅವರ ಅತ್ಯುತ್ತಮ ಜೀವನದ ಸಿಕ್ರೇಟ್ ಆಗಿದೆ.

ಇನ್ನು ಸಿಂಧಿಗಳು ವ್ಯಾಪಾರ ಮಾಡುವಾಗ, ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭ ಮಾಡುವುದು ಹೇಗೆ ಎನ್ನುವ ಲೆಕ್ಕಾಚಾರವನ್ನು ಸದಾ ಮಾಡುತ್ತಿರುತ್ತಾರೆ. ಒಳ್ಳೆಯ ಕ್ವಾಲಿಟಿ ವಸ್ತುಗಳನ್ನು ಮಾರಾಟ ಮಾಡಿ, ಒಳ್ಳೆಯ ಲಾಭ ಮಾಡುವ ರೀತಿಯನ್ನು ಅವರು ಅರಿತಿರುತ್ತಾರೆ.

ತಮ್ಮ ಬಳಿ ಕೆಲಸ ಮಾಡುವ ಕೆಲಸಗಾರರನ್ನು ತಮ್ಮ ಮನೆಯವರಂತೆ ನೋಡುತ್ತಾರೆ. ಸಂಬಳ ಏರಿಸುವ ವೇಳೆ ಸಂಬಳ ಹೆಚ್ಚು ಮಾಡುತ್ತಾರೆ. ಒಟ್ಟಾರೆ ತಮ್ಮ ಬಳಿ ಕೆಲಸ ಮಾಡುವವರು, ಕೆಲಸ ಬಿಟ್ಟು ಹೋಗದಂತೆ ನೋಡಿಕೊಳ್ಳುತ್ತಾರೆ.

ಇನ್ನು ಕೊನೆಯದಾಗಿ, ಸಿಂಧಿಗಳು ಗ್ರಾಹಕರೊಂದಿಗೆ ಎಷ್ಟೇ ಚೆಂದವಾಗಿದ್ದರೂ, ವ್ಯಾಪಾರಸ್ಥರಾಗಿಯೇ ಇರುತ್ತಾರೆ. ಯಾವುದೇ ಕಾರಣಕ್ಕೂ ವ್ಯಾಪಾರದಲ್ಲಿ ಕಾಂಪ್ರಮೈಸ್ ಆಗುವುದಿಲ್ಲ. ಸಾಲ ನೀಡುವ ಮಾತೇ ಇಲ್ಲ. ಯಾವ ವಸ್ತುವಿಗೆ ಎಷ್ಟು ಹಣ ನೀಡಬೇಕೋ, ಅಷ್ಟು ಕೊಡಲೇಬೇಕು ಎಂದಿರುತ್ತಾರೆ. ಹಾಗಾಗಿ ಸಿಂಧಿಗಳು ವ್ಯಾಪಾರದಲ್ಲಿ ಮುಂದಿರುತ್ತಾರೆ.

ಶ್ರೀಮಂತಿಕೆಗಾಗಿ ಚಾಣಕ್ಯನ 3 ರೂಲ್ಸ್ ತಿಳಿದುಕೊಳ್ಳಿ..

ತನ್ನ 29ನೇ ವಯಸ್ಸಿನಲ್ಲೇ ಕೋಟಿ ಕೋಟಿ ರೂಪಾಯಿ ಗಳಿಸಿದ ಹುಡುಗಿ.. ಹೇಗೆ..?

ಆಫರ್, ಡಿಸ್ಕೌಂಟ್ ಇಲ್ಲದೇ ಗ್ರಾಹಕರು ನಿಮ್ಮ ಬಳಿ ಬರಬೇಕೇ..? ಹೀಗೆ ಮಾಡಿ..

- Advertisement -

Latest Posts

Don't Miss