‘ನಾರಾಯಣಮೂರ್ತಿ ಡ್ಯಾಶಿಂಗ್ ಹೀರೋ ಥರ ಇರ್ತಾರೆ ಅಂದ್ಕೊಂಡಿದ್ದೆ.. ಆದ್ರೆ..’

ಇತ್ತೀಚಿನ ದಿನಗಳಲ್ಲಿ ಕನ್ನಡದ ಖ್ಯಾತನಾಮರನ್ನ ಬಾಲಿವುಡ್ ಜನ ಕೂಡ ಗುರುತಿಸುತ್ತಿದ್ದಾರೆ. ಅದರಲ್ಲೂ ಕಪಿಲ್ ಶರ್ಮಾ ಶೋನಲ್ಲಿ ಹಲವು ಕನ್ನಡಿಗರು ಬಂದು ಹೋಗಿದ್ದಾರೆ. ಕಿಚ್ಚ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್ ಸೇರಿ, ಹಲವು ಸೆಲೆಬ್ರಿಟಿಗಳು ಈ ರಿಯಾಲಿಟಿ ಶೋನಲ್ಲಿ ಬಂದಿದ್ದಾರೆ. ಇದೀಗ ಸಮಾಜ ಸೇವಕಿ ಸುಧಾ ಮೂರ್ತಿಯನವರನ್ನ ಕೂಡ, ಕಪಿಲ್ ಶರ್ಮಾ ಶೋಗೆ ಬರಮಾಡಿಕೊಂಡಿದ್ದಾರೆ.

ಈ ಕಾರ್ಯಕ್ರಮದ ಪ್ರೋಮೋ ರಿಲೀಸ್ ಆಗಿದ್ದು, ಇದರಲ್ಲಿ ಸುಧಾಮ್ಮ ಮಾತನಾಡುವ ಕೆಲ ಮಾತುಗಳು ಎಲ್ಲರ ಮುಖದಲ್ಲೂ ನಗು ತರಿಸಿದೆ. ಶೋ ನಡೆಸಿಕೊಡುವ ಕಪಿಲ್ ಶರ್ಮಾ, ನಾರಾಯಣ ಮೂರ್ತಿಯವರ ಪರಿಚಯ ನಿಮಗೆ ಹೇಗಾಯಿತು ಎಂದು ಕೇಳಿದಾಗ, ಈ ಬಗ್ಗೆ ವಿವರಿಸಿದ ಸುಧಾಮ್ಮ, ಪ್ರಸನ್ನ ಅಂತ ಓರ್ವ ಸ್ನೇಹಿತನಿದ್ದ. ಅವನು ಪ್ರತಿದಿನ ನನಗೆ ಪುಸ್ತಕ ತಂದು ಕೊಡುತ್ತಿದ್ದ. ಅದರಲ್ಲಿ ನಾರಾಯಣಮೂರ್ತಿ ಹೆಸರಿನ ಜೊತೆಗೆ ಕೆಲವು ಸ್ಥಳಗಳ ಹೆಸರಿರುತ್ತಿತ್ತು. ಹಾಗಾಗಿ ನಾನು ಈ ನಾರಾಯಣ ಮೂರ್ತಿ ಇಂಟರ್‌ನ್ಯಾಷನಲ್ ಬಸ್ ಕಂಡಕ್ಟರಾ ಅಂತಾ ಯೋಚಿಸುತ್ತಿದ್ದೆ.

ಒಮ್ಮೆ ಅವರನ್ನು ಕಾಣಲು, ಕಾತುರಳಾಗಿದ್ದೆ. ಹೀರೋ ಥರಾ, ಡ್ಯಾಶಿಂಗ್, ಹ್ಯಾಂಡ್ಸಮ್ ಹುಡುಗ ಅಂದುಕೊಂಡಿದ್ದೆ. ಆದ್ರೆ ಬಾಗಿಲು ತೆಗೆದು ನೋಡಿದಾಗ, ಇದ್ಯಾವುದು ಸಣ್ಣ ಮಗುವಿನ ಥರ ಇದ್ದಾರಲ್ಲಾ ಅೞತಾ ಅನ್ನಿಸಿತ್ತು ಎಂದು ಸುಧಾ ಮೂರ್ತಿ, ನಾರಾಯಣ ಮೂರ್ತಿಯವರ ಬಗ್ಗೆ ಹೇಳಿದ್ದಾರೆ. ಇನ್ನೂ ಹಲವು ವಿಷಯಗಳ ಬಗ್ಗೆ ಸುಧಾ ಮೂರ್ತಿ ಮಾತನಾಡಿದ್ದಾರೆ.

ಈ ವಾರದ ಸಂಚಿಕೆಯಲ್ಲಿ ನಟಿ ರವೀನಾ ಟಂಡನ್, ಆಸ್ಕರ್ ಪ್ರಶಸ್ತಿ ವಿಜೇತ ನಿರ್ದೇಶಕಿ ಗುನೀತ್ ಮೋಂಗಾ ಮತ್ತು ಸಮಾಜ ಸೇವಕಿ ಸುಧಾಮೂರ್ತಿಯವರನ್ನ ಕರೆಯಲಾಗಿತ್ತು.

ಉತ್ತರಪ್ರದೇಶದಲ್ಲಿ ‘ದಿ ಕೇರಳ ಸ್ಟೋರಿ’ ನೋಡಲು ಕೊಡಬೇಕಾಗಿಲ್ಲ ತೆರಿಗೆ: ಯೋಗಿ ಆದೇಶ

‘ಮಲ್ಲಿಕಾರ್ಜುನ ಖರ್ಗೆಗೆ ನನ್ನ ಹೆಸರಲ್ಲಿ ನಕಲಿ ಪತ್ರ: ಇದು RSSನಂಥ ಕುತಂತ್ರಿಗಳ ಕೆಲಸ’

ಹೊಟೇಲ್ಗಳಲ್ಲಿ ಉಚಿತ ಊಟ, ತಿಂಡಿ ಕೊಡುವುದಕ್ಕೆ ಬಿಬಿಎಂಪಿ ಬ್ರೇಕ್..

About The Author