Health Tips: ಹುಟ್ಟಿದ ಮಗುವಿನಿಂದ ಹಿಡಿದು ಮಗುವಿಗೆ 6 ತಿಂಗಳು ತುಂಬುವವರೆಗೂ ಮಗುವಿಗೆ ಎದೆ ಹಾಲು ಬಿಟ್ಟು ಬೇರೇನೂ ನೀಡಬಾರದು ಅಂತಾ ಈ ಮೊದಲೇ ನಾವು ನಿಮಗೆ ಹೇಳಿದ್ದೆವು. ಇಂದು ವೈದ್ಯರು ಶಿಶುವಿಗೆ ಎದೆ ಹಾಲು ಬಿಟ್ಟು, ಉಳಿದ ಆಹಾರವನ್ನು ಯಾವಾಗ ನೀಡಬೇಕು ಅಂತಾ ವಿವರಿಸಿದ್ದಾರೆ ನೋಡಿ..
ವೈದ್ಯರು ಹೇಳುವ ಪ್ರಕಾರ, ತಾಯಿ ಹಾಲು ಕೊಡುವವರು ಮಗುವಿಗೆ 6 ತಿಂಗಳು ತುಂಬುವವರೆಗೂ ನೀರು ಕುಡಿಸುವ ಅವಶ್ಯಕತೆ ಇಲ್ಲ ಎನ್ನುತ್ತಾರೆ. ಮಗುವಿಗೆ ಬಾಯಾರಿಕೆ, ಹಸಿವು ಏನೇ ಆದರೂ, ತಾಯಿ ಹಾಲನ್ನೇ ನೀಡಬೇಕು ಅಂತಾರೆ ವೈದ್ಯರು. 6 ತಿಂಗಳ ಬಳಿಕ ಮಗುವಿಗೆ ಬೇರೆ ಆಹಾರಗಳನ್ನ ತಿನ್ನಿಸಬಹುದು. ಬೇಯಿಸಿದ ತರಕಾರಿ, ರಾಗಿ ಮಣ್ಣಿ, ಹಸುವಿನ ಹಾಲು, ಈ ರೀತಿ ಮಗುವಿಗೆ ಜೀರ್ಣವಾಗುವಂಥ ಪದಾರ್ಥಗಳನ್ನು ಸೇವಿಸಲು ಕೊಡಬಹುದು.
ಆದರೆ ತಾಯಿ ಹಾಲು ಕೊಡುವುದನ್ನು ನಿಲ್ಲಿಸಬೇಕಂತಿಲ್ಲ. 2 ವರ್ಷದ ತನಕವೂ ಮಗುವಿಗೆ ತಾಯಿ ಹಾಲನ್ನು ಕುಡಿಸಬಹುದು. ಏಕೆಂದರೆ ತಾಯಿಯ ಹಾಲಿನಲ್ಲಿರುವ ಅಂಶಗಳು ಮಕ್ಕಳನ್ನು ಗಟ್ಟಿಮುಟ್ಟಾಗಿ ಮಾಡುತ್ತದೆ. ಉತ್ತಮ ಆರೋಗ್ಯಕರ ಭವಿಷ್ಯ ರೂಪಿಸಲು ತಾಯಿ ಹಾಲಿನ ಸೇವನೆ ಅತ್ಯಗತ್ಯ ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..

