ವಿಶ್ವಕಪ್ ಮಹಾಸಮರ, ನಿರ್ಣಾಯಕ ಹಂತಕ್ಕೆ ಬಂದು ತಲುಪಿದೆ. ಈ ನಡುವೆ ಅಂತಿಮ ನಾಲ್ಕರ ಘಟ್ಟ ತಲುಪುವ 4 ತಂಡಗಳು ಯಾವುವು ಅನ್ನೋ ಬಗ್ಗೆ ಚರ್ಚೆ ಶುರುವಾಗಿದೆ. ಈಗಾಗಲೇ ಆಸ್ಟ್ರೇಲಿಯಾ, ಭಾರತ ಮತ್ತು ಇಂಗ್ಲೆಂಡ್ ಸೆಮಿಫೈನಲ್ ತಲುಪಿದ್ದು, ಬಾಕಿ ಇರುವ ಒಂದು ಸ್ಥಾನಕ್ಕಾಗಿ, 2 ತಂಡಗಳು ಪೈಪೋಟಿ ನಡೆಸುತ್ತಿವೆ. ಹಾಗಾದ್ರೆ ಅಂತಿಮ ನಾಲ್ಕರಘಟ್ಟ ತಲುಪುವ ಆ ಲಕ್ಕಿ ಟೀಮ್ ಯಾವುದು ಅನ್ನೋ ಪ್ರಶ್ನೆ ಗೆ ಉತ್ತರ ನಾಳೆ ಸಿಗಲಿದೆ.
ಹೌದು..ಸೆಮಿಫೈನಲ್ ಹಂತದಲ್ಲಿ ಬಾಕಿ ಇರುವ ಒಂದು ಸ್ಥಾನದ ಮೇಲೆ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಕಣ್ಣಿಟ್ಟಿವೆ. ನಾಳೆ ಪಾಕಿಸ್ತಾನ ಮತ್ತು ಬಾಂಗ್ಲಾ ತಮ್ಮ ಅಂತಿಮ ಲೀಗ್ ಪಂದ್ಯದಲ್ಲಿ ಎದುರಾಗುತ್ತಿವೆ. ಸದ್ಯ ಟೂರ್ನಿಯಲ್ಲಿ ಎರಡೂ ತಂಡಗಳು ತಲಾ 8 ಪಂದ್ಯಗಳನ್ನಾಡಿದ್ದು, ಕ್ರಮಬದ್ಧವಾಗಿ 9 ಮತ್ತು 7 ಪಾಯಿಂಟ್ ಗಳಿಸಿವೆ. ಇನ್ನೂ ನಿನ್ನೆ ಇಂಗ್ಲೆಂಡ್ ವಿರುದ್ಧ ಅಂತಿಮ ಲೀಗ್ ಪಂದ್ಯದಲ್ಲಿ ನ್ಯೂಜಿಲೆಂಡ್ ದೊಡ್ಡ ಅಂತರದ ಸೋಲು ಅನುಭವಿಸಿತು.
ಹೀಗಾಗಿ ನ್ಯೂಜಿಲೆಂಡ್ ನ ಒಟ್ಟು ಪಾಯಿಂಟ್ 11 ಗಳಿಸಿದೆ. ನಾಳೆ ಬಾಂಗ್ಲಾ ಎದುರು ಪಾಕ್ ಗೆದ್ದಲ್ಲಿ, ಪಾಕಿಸ್ತಾನ ಒಟ್ಟು 11 ಗಳಿಸಿದಂತಾಗಲಿದೆ. ಈ ವೇಳೆ ಪಾಕ್ ಮತ್ತು ನ್ಯೂಜಿಲೆಂಡ್ ತಂಡಗಳ ಪಾಯಿಂಟ್ ಸಮವಾಗಲಿದ್ದು, ರನ್ ರೈಟ್ ನಿರ್ಣಾಯಕ ಪಾತ್ರ ವಹಿಸಲಿದೆ. ಇನ್ನೂ ನಾಳೆ ಪಾಕ್ ಸೋಲನುಭವಿಸಿದ್ರೆ ಅಥವಾ ಒಂದುವೇಳೆ ಮಳೆಯಿಂದ ಪಂದ್ಯ ರದ್ದಾದ್ರೆ, ಟೂರ್ನಿಯಿಂದ ಪಾಕ್ ಹೊರಬೀಳಲಿದೆ. ಅದೇನೇ ಇರಲಿ ನಾಳೆ ನಡೆಯುವ ಪಾಕ್-ಬಾಂಗ್ಲಾ ಹಣಾಹಣಿ, ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ಭವಿಷ್ಯವನ್ನಷ್ಟೇ ಅಲ್ಲದೆ, ನ್ಯೂಜಿಲೆಂಡ್ ಭವಿಷ್ಯ ವನ್ನು ನಿರ್ಧರಿಸಲಿದೆ.
ಕ್ರಿಕೆಟ್ ಕಮೆಂಟೇಟರ್ ಗೆ ಜಾಡಿಸಿದ ಜಡೇಜಾ.!ಮಿಸ್ ಮಾಡದೇ ಈ ವಿಡಿಯೋ ನೋಡಿ