ಸ್ಯಾಂಡಲ್‌ವುಡ್ ಹೆಮ್ಮೆ ಕೆಜಿಎಫ್-2 ಕಲೆಕ್ಷನ್‌ನಲ್ಲಿ ಆರ್‌ಆರ್‌ಆರ್ ಮೀರಿಸಿದೆ. ಹಿಂದಿಯಲ್ಲಿ ಕೆಜಿಎಫ್ ಬಾಹುಬಲಿ ನಂತರ ಕೆಜಿಎಫ್-2 ಬಂದು ನಿಂತಿದೆ. ಭಾರತದಲ್ಲಿ ಕೆಜಿಎಫ್ ಗಳಿಕೆ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಸಿನಿಮಾವನ್ನೂ ಮೀರಿಸಿದೆ. ದಂಗಲ್ ಜಗತ್ತಿನಾದ್ಯಂತ ಗಳಿಸಿದ್ದು ಹೆಚ್ಚಿದ್ದರೂ ಚೀನಾದಲ್ಲಿ ಆಮೀರ್ ಖಾನ್ ಚಿತ್ರ ಭಾರತಕ್ಕಿಂತ ಹೆಚ್ಚು ಗಳಿಕೆ ಮಾಡಿತ್ತು.
ಆದರೆ ಕೆಜಿಎಫ್-2 ಭಾರತದಲ್ಲಿ ಬಾಹುಬಲಿ ನಂತರ ಅತ್ಯಂತ ಹೆಚ್ಚು ಕಲೆಕ್ಷನ್ ಮಾಡಿದೆ. ೨೦೦೦ ಕೋಟಿಗಿಂತ ಹೆಚ್ಚು ಗಳಿಸಿ ಬಾಕ್ಸಾಫೀಸ್ ಧೂಳೆಬ್ಬಿಸಿದ ದಂಗಲ್ ಇಡೀ ಭಾರತದಲ್ಲಿ ಗಳಿಸಿದ್ದು ಕೇವಲ ೫೩೮ ಕೋಟಿ, ಆದರೆ ಕೆಜಿಎಫ್ ಕೇವಲ ಹಿಂದಿಯಲ್ಲೇ ಅದನ್ನು ಮೀರುವತ್ತ ಗಳಿಕೆ ಮಾಡ್ತಿದೆ. ಸದ್ಯ ೫೦೦ ಕೋಟಿ ಹಿಂದಿ ಒಂದರಲ್ಲೇ ಗಳಿಸಿದೆ ಕೆಜಿಎಫ್-2. ದೇಶಾದ್ಯಂತ ಕೆಜಿಎಫ್ ಗಳಿಗೆ ೧೨೫೦ ಕೋಟಿ..
ಈಗ ಬಾಹುಬಲಿ ೨ ಗಳಿಸಿದ ೧೮೧೦ ಕೋಟಿಯ ಗಡಿಯನ್ನು ಕೆಜಿಎಫ್-2 ಮೀರುತ್ತಾ..? ಬಾಹುಬಲಿ ದಾಖಲೆ ತಲುಪೋಕೆ ಕೆಜಿಎಫ್-2ಗೆ ಇನ್ನೂ ೬೦೦ ಕೋಟಿ ಅವಶ್ಯಕಥೆ ಇದೆ. ಕೆಜಿಎಫ್ ಈಗಾಗ್ಲೆ ಒಟಿಟಿಗೂ ಲಗ್ಗೆ ಇಟ್ಟಿದೆ. ಅಲ್ಲೂ ಕೂಡ ಹಣ ಕಟ್ಟಿ ಕೆಜಿಎಫ್ ನೋಡಬೇಕು. ಚಿತ್ರಮಂದಿರದಲ್ಲೂ ಮುನ್ನುಗ್ತಿರೋ ರಾಕಿಭಾಯ್ ತೂಫಾನ್ ೨೦೦೦ ಕೋಟಿ ಮುಟ್ಟುತ್ತಾ..? ಪ್ರಶಾಂತ್ ನೀಲ್ ರಾಜಮೌಳಿ ಕಲೆಕ್ಷನ್ ಮೀರಿಸ್ತಾರಾ ಅನ್ನೋ ಕುತೂಹಲ ಹೆಚ್ಚೋಕೆ ಇನ್ನೊಂದು ಕಾರಣ ಅಂದ್ರೆ ಕೆಜಿಎಫ್ ಇನ್ನೂ ಚಿತ್ರಮಂದಿರಗಳಲ್ಲಿ ಯಶಸ್ವೀ ಪ್ರದರ್ಶನ ಕಾಣ್ತಿರೋ ಮಾಹಿತಿ ಇದೆ
ಕಲೆಕ್ಷನ್‌ನಲ್ಲಿ ಕಿಂಗ್ ಯಾರು : ಬಾಹುಬಲಿ-೨..? ಕೆಜಿಎಫ್-೨..?
- Advertisement -
- Advertisement -