Sunday, September 8, 2024

Latest Posts

ಸ್ಯಾಂಡಲ್‌ವುಡ್‌ನ ಈ ವರ್ಷದ ಬಾಕ್ಸಾಫೀಸ್ ಕಿಂಗ್ ಯಾರು..?

- Advertisement -

ಈ ವರ್ಷ ಜನೆವರಿ ತಿಂಗಳಿನಿಂದ ಇದುವರೆಗೂ ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳು ತೆರೆಕಂಡಿವೆ. ಸದ್ಯ ಎಲ್ಲರಿಗೂ ಇರೋ ಕುತೂಹಲ ಈ ವರ್ಷದ ಬಾಕ್ಸಾಫೀಸ್ ಕಿಂಗ್ ಯಾರು ಎಂಬುದು. ಎಲ್ರಿಗೂ ಗೊತ್ತಿರೋ ಹಾಗೇ ಥಟ್ ಅಂತ ನಮ್ ಕಣ್ಮುಂದೆ ಬರೋ ಈ ವರ್ಷದಲ್ಲಿ ಹೈಯೆಸ್ಟ್ ಕಲೆಕ್ಷನ್ ಮಾಡಿರೊ ಸಿನಿಮಾ ಅಂದ್ರೆ ಅದು ಕೆಜಿಎಫ್-2. ಆದ್ರೆ ಅಧಿಕೃತವಾಗಿ ಈ ವಿಷಯ ನಿಜವಾಗಿಯೂ ಹೌದಾ, ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ.

ಅದಾಗ್ಯೂ ಈ ವರ್ಷ ಬಿಗ್ ಬಜೆಟ್‌ನಲ್ಲಿ ಕನ್ನಡದಲ್ಲಿ ರಿಲೀಸಾಗಿರೋ ಸಿನಿಮಾಗಳಂದ್ರೆ ಅದು ಕೆಜಿಎಫ್ ಸಿನಿಮಾನೇ. ಕೆಜಿಎಫ್-2 ರಿಲೀಸಾದ ಬಳಿಕ ಇಡೀ ವಿಶ್ವವೇ ಕನ್ನಡ ಸಿನಿಮಾರಂಗದತ್ತ ಹಿಂದಿರುಗಿ ನೋಡುವಂತೆ ಮಾಡಿತು. ಕೆಜಿಎಫ್ ಸಿನಿಮಾ ಬಳಿಕ ರಿಲೀಸಾದ ಬಿಗ್ ಬಜೆಟ್‌ನ ಸ್ಟಾರ್ ಸಿನಿಮಾಗಳಾದ ಚಾರ್ಲಿ, ವಿಕ್ರಾಂತ್ ರೋಣ ಸಿನಿಮಾಗಳೂ ಸಹ ಪ್ಯಾನ್ ಇಂಡಿಯಾ ರಿಲೀಸಾಗಿ ಎಲ್ಲೆಡೆ ಸದ್ದು ಮಾಡ್ತಿದೆ. ಇದೀಗ ಕೆಜಿಎಫ್ ವಿಷ್ಯಕ್ಕೆ ಬಂದ್ರೆ, ಈಗಾಗ್ಲೇ ಹಲವಾರು ದಾಖಲೆಗಳನ್ನ ಈ ಸಿನಿಮಾ ಬರೆದು, ಬಾಕ್ಸಾಫೀಸ್‌ನಲ್ಲೂ ದಾಖಲೆಯ ಕಲೆಕ್ಷನ್‌ನ ಮಾಡಿದೆ.

2022 ರಲ್ಲಿ ಬಾಕ್ಸಾಫೀಸ್‌ನಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಏಕೈಕ ಸಿನಿಮಾ ಕೆಜಿಎಫ್ ಅಗಿದೆ. ಬಾಹುಬಲಿ ಸಿನಿಮಾ ಮೂಲಕ ತೆಲುಗು ಚಿತ್ರರಂಗವನ್ನ ಹಿಂದಿರುಗಿ ನೋಡುವಂತೆ ಮಾಡಿದ್ದ ನಿರ್ದೇಶಕ ಎಸ್ ಎಸ್ ರಾಜಮೌಳಿಯ ಆರ್ ಆರ್ ಆರ್ ಚಿತ್ರ ಕೆಜಿಎಫ್ ಬಿಡುಗಡೆಯಾದ ಟೈಂನಲ್ಲೇ ತೆರೆಕಾಣ್ತು. ಆರ್ ಆರ್ ಆರ್ ಮೇಲೂ ಅಭಿಮಾನಿಗಳ ನಿರೀಕ್ಷೆ ಹೆಚ್ಚಿತ್ತು, ಅದರಂತೆಯೇ ಬಾಕ್ಸಾಫೀಸ್‌ನಲ್ಲೂ ಕಮಾಲ್ ಮಾಡ್ತು. ಆದ್ರೆ ಕೆಜಿಎಫ್-2 ಸಿನಿಮಾ ಆರ್ ಆರ್ ಆರ್ ನೂ ಹಿಂದಿಕ್ಕಿ ಬಾಕ್ಸಾಫೀಸ್‌ನಲ್ಲಿ ಸೋಲಿಸಿತು. ಸದ್ಯ ಕೆಜಿಎಫ್ ಸಿನಿಮಾದ ದಾಖಲೆಯನ್ನ ಬ್ರೇಕ್ ಮಾಡಲು ಅಂತಹ ದೊಡ್ಡ ಮಟ್ಟದ ಚಿತ್ರಗಳು ಈ ವರ್ಷ ಕನ್ನಡ ಚಿತ್ರರಂಗದಲ್ಲಿ ಬರ್ತಿಲ್ಲ, ಆದ್ರೆ ಸಲಾರ್, ಆದಿಪುರುಷ್ ಮೇಲೆ ಮಾತ್ರ ನಿರೀಕ್ಷೆ ಇದೆ.

ಆದ್ರೆ ಈ ವರ್ಷ ಈ ಸಿನಿಮಾಗಳು ತೆರೆಗೆ ಬರೋದು ಬಹುತೇಕ ಅನುಮಾನ. ಒಟ್ನಲ್ಲಿ ಕೆಜಿಎಫ್ ನ ದಾಖಲೆಯನ್ನ ಅಳಿಸೋಕೆ ಮತ್ತೊಂದು ಕೆಜಿಎಫ್ ತರಹದ ಸಿನಿಮಾನೇ ಬರಬೇಕು ಅಥವಾ ಮೌಳಿ ಕಲ್ಪನೆಯಲ್ಲಿ ಮತ್ತೊಂದು ಭರ್ಜರಿ ಚಿತ್ರ ರ‍್ಬೇಕು ಇಲ್ಲವಾದಲ್ಲಿ ಪ್ರಶಾಂತ್ ನೀಲ್ ರ ಸಲಾರ್ ಸಿನಿಮಾ ಕೆಜಿಎಫ್ ಚಿತ್ರದ ದಾಖಲೆಯನ್ನ ಮುರಿಯಬಹುದಾ ಕಾದು ನೋಡ್ಬೇಕಿದೆ. ಒಟ್ಟಿನಲ್ಲಿ ಈ ವರ್ಷದ ಬಾಕ್ಸಾಫೀಸ್‌ನ ನಂ.1 ಕಲೆಕ್ಷನ್ ಕಿಂಗ್ ರಾಕಿಂಗ್ ಸ್ಟಾರ್ ಯಶ್ ಹಾಗೂ ನಂ-1 ಸಿನಿಮಾ ಕೆಜಿಎಫ್-2.

- Advertisement -

Latest Posts

Don't Miss