Tuesday, April 1, 2025

Latest Posts

ರಾಹುಲ್, ಅಖಿಲೇಶ್, ಕೇಜ್ರಿವಾಲ್ ಅವರನ್ನು ತ್ರೀ ಈಡಿಯಟ್ಸ್ ಅಂದ್ರೆ ಮುಸ್ಲಿಮರಿಗೇಕೆ ಸಿಟ್ಟು: ಪ್ರತಾಪ್ ಸಿಂಹ

- Advertisement -

Political News: ಮೈಸೂರಿನ ಉದಯಗಿರಿಯಲ್ಲಿ ನಿನ್ನೆ ನಡೆದ ಕಲ್ಲು ತೂರಾಟ, ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಮಾಧ್ಯಮದ ಜೊತೆಗೆ ಮಾತನಾಡಿದ ಪ್ರತಾಾಪ್ ಸಿಂಹ, ವಾಟ್ಸಪ್ನಲ್ಲಿ ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್, ಅಖಿಲೇಶ್ ಯಾದವ್ ಫೋಟೋ ಜೋಡಿಸಿ, 3 ಈಡಿಯಟ್ಸ್ ಎಂದು ಹಾಕಿದ್ದಕ್ಕೆ, ರೊಚ್ಚಿಗೆದ್ದ ಮುಸ್ಲಿಂರು ಕಲ್ಲು ತೂರಾಟ ನಡೆಸಿದ್ದಾರೆ. ಈ ಮೂವರನ್ನು ಈಡಿಯಟ್ಸ್ ಅಂದ್ರೆ ಮುಸ್ಲಿಂರಿಗೇಕೆ ಕೋಪವೆಂದು ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.

ಈ ಪೋಸ್ಟ್ ಹಾಕಿದ್ದವರನ್ನು ಅರೆಸ್ಟ್ ಮಾಡಿರುವುದಾಗಿ ಪೊಲೀಸರು ಹೇಳಿದರು ಕೂಡ, ಪುಂಡರು ಕಲ್ಲು ತೂರಾಟ ನಿಲ್ಲಿಸಲಿಲ್ಲ. ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಮತ್ತು ಪೊಲೀಸರ ಮೇಲೆ ಹಲ್ಲೆ ಮಾಡುವ ಕೆಲಸ 15 ವರ್ಷಗಳಿಂದ ನಡೆಯುತ್ತಿದೆ ಎಂದು ಪ್ರತಾಪ್ ಸಿಂಹ ಆಕ್ರೋಶ ಹೊರಹಾಕಿದ್ದಾರೆ.

- Advertisement -

Latest Posts

Don't Miss