Health Tips: ಸ್ಟ್ರೋಕ್ ಪಾರ್ಶ್ವವಾಯು ಎನ್ನುವ ರೋಗ ಸಡನ್ನಾಗಿ ಬರುವುದನ್ನು ನಾವು ನೋಡಿರುತ್ತೇವೆ. ಆದರೆ ಅದ್ಯಾಕೆ ಬರತ್ತೆ ಅಂತಾ ಗೊತ್ತಿರುವುದಿಲ್ಲ. ಆರೋಗ್ಯವಾಗಿದ್ದವರು, ಇದ್ದಕ್ಕಿಂತೆ ಪಾರ್ಶ್ವವಾಯುವಿಗೆ ಒಳಗಾಗುತ್ತಾರೆ. ಯಂಗ್ ಆಗಿ ಇರುವವರಿಂದ ಹಿಡಿದು 50 ವರ್ಷ ದಾಟಿದ ಬಳಿಕವೂ ಸಡನ್ ಆಗಿ ಸ್ಟ್ರೋಕ್ ಬರುತ್ತದೆ. ಅಲ್ಲದೇ, ಕೆಲವೊಮ್ಮೆ ಗರ್ಭಿಣಿಯರು ಸರಿಯಾಗಿ ಕಾಳಜಿ ವಹಿಸದೇ, ಹೆಚ್ಚು ಟೆನ್ಶನ್ ತೆಗೆದುಕೊಂಡಲ್ಲಿ ಪಾರ್ಶ್ವವಾಯು ಬರುತ್ತದೆ. ಡಾ.ಪವನ್ ಅವರು ಯಾಕೆ ಸ್ಟ್ರೋಕ್ ಬರುತ್ತದೆ ಅಂತಾ ವಿವರಿಸಿದ್ದಾರೆ.
ಬಿಪಿ ಕಂಟ್ರೋಲ್ ತಪ್ಪಿದಾಗ ಸ್ಟ್ರೋಕ್ ಬರುತ್ತದೆ. ತೂಕ ಹೆಚ್ಚಾದಾಗ, ಕೊಲೆಸ್ಟ್ರಾಲ್ ಹೆಚ್ಚಾದಾಗ, ಶುಗರ್ ಮೀರಿ ಹೋದಾಗ ಸ್ಟ್ರೋಕ್ ಆಗತ್ತೆ. ರಕ್ತನಾಳಗಳಲ್ಲಿ ಪ್ಲಾಟ್ ಆದಾಗ ಸ್ಟ್ರೋಕ್ ಆಗತ್ತೆ. ದೇಹದಲ್ಲಿ ಬ್ಲೀಡಿಂಗ್ ಆಗಿಯೂ ಸ್ಟ್ರೋಕ್ ಆಗುತ್ತದೆ. ನಮ್ಮ ಎಡಭಾಗದ ಮೆದುಳು ಬಲಭಾಗವನ್ನು ಕಂಟ್ರೋಲ್ ಮಾಡುತ್ತದೆ. ನಮ್ಮ ಬಲಭಾಗದ ಮೆದುಳು ಎಡಭಾಗವನ್ನು ಕಂಟ್ರೋಲ್ ಮಾಡುತ್ತದೆ.
ಹಾಗಾಗಿ ನಮ್ಮ ಮೆದುಳಿನಲ್ಲಿ ಕ್ಲಾಟ್ ಅಥವಾ ಬ್ಲೀಡಿಂಗ್ ಆದಾಗ, ಬಿಪಿ ಹೆಚ್ಚಾದಾಗ ಸ್ಟ್ರೋಕ್ ಆಗುತ್ತದೆ. ತಕ್ಷಣವೇ ಚಿಕಿತ್ಸೆ ಪಡೆದರೆ, ಸ್ಟ್ರೋಕ್ ಸಂಪೂರ್ಣವಾಗಿ ಗುಣಮುಖ ಮಾಡಬಹುದು. ಆದರೆ, ನಿರ್ಲಕ್ಷಿಸಿದರೆ, ಜೀವಕ್ಕೇ ಹಾನಿಯಾಗುತ್ತದೆ. ಹಾಗಾಗಿ ಯಾವುದೇ ಆರೋಗ್ಯ ಸಮಸ್ಯೆಯನ್ನು ಎಂದಿಗೂ ನಿರ್ಲಕ್ಷಿಸಬೇಡಿ ಅಂತಾರೆ ವೈದ್ಯರು. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.