ಹಿಂದೂಗಳಲ್ಲಿ ಹಲವು ರೀತಿಯ ಪದ್ಧತಿಗಳಿವೆ. ಅಂಥ ಪದ್ಧತಿಗಳಲ್ಲಿ ಕೆಲ ಪದ್ಧತಿಗಳು ಬರೀ ಹೆಂಗಸರಿಗಷ್ಟೇ ಮತ್ತು ಕೆಲ ಪದ್ಧತಿಗಳು ಬರೀ ಗಂಡಸರಿಗಷ್ಟೇ ಸೀಮಿತವಾಗಿರುತ್ತದೆ. ಅಂಥ ಪದ್ಧತಿಯನ್ನ ಅವರವರೇ ಅನುಸರಿಸಬೇಕು. ಅಂಥ ಪದ್ಧತಿಯಲ್ಲಿ ಅಂತ್ಯಸಂಸ್ಕಾರದ ಪದ್ಧತಿ ಕೂಡ ಒಂದು. ಅಂತ್ಯಸಂಸ್ಕಾರದ ವೇಳೆ ಗಂಡಸರಷ್ಟೇ ಸ್ಮಶಾನಕ್ಕೆ ಹೋಗಬೇಕು ಎಂಬ ಪದ್ಧತಿ ಇದೆ. ಹೆಣ್ಣು ಮಕ್ಕಳಿಗೆ ಈ ವೇಳೆ ಪ್ರವೇಶವಿರುವುದಿಲ್ಲ. ಹಾಗಾದ್ರೆ ಯಾಕೆ ಗಂಡಸರಷ್ಟೇ ಸ್ಮಶಾನಕ್ಕೆ ಹೋಗಬೇಕು..? ಹೆಣ್ಣು ಮಕ್ಕಳ್ಯಾಕೆ ಹೋಗಬಾರದು ಅನ್ನೋ ಬಗ್ಗೆ ವಿಷಯ ತಿಳಿಯೋಣ ಬನ್ನಿ..
ಈ ಪ್ರಶ್ನೆಗೆ ಹಲವು ಉತ್ತರಗಳಿವೆ. ಅಂತ್ಯಸಂಸ್ಕಾರ ನಡೆಯುವ ವೇಳೆ, ಜೋರಾಗಿ ಅತ್ತರೆ, ಸತ್ತ ಆತ್ಮಕ್ಕೆ ಶಾಂತಿ ಸಿಗದೇ, ಅದು ಅಸಮಾಧಾನದಿಂದ ಇರತ್ತೆ ಅನ್ನೋ ಕಾರಣಕ್ಕೆ, ಹೆಣ್ಣು ಮಕ್ಕಳನ್ನ ಸ್ಮಶಾನಕ್ಕೆ ಕರೆದೊಯ್ಯಲ್ಲ. ಪುರುಷರಿಗಿಂತ ಮಹಿಳೆಯರ ಮನಸ್ಸು ಕೋಮಲವಾಗಿರತ್ತೆ. ಅವರಿಗೆ ಬೇಗ ಕಣ್ಣೀರು ಬರತ್ತೆ. ಈ ಕಾರಣಕ್ಕೆ ಅವರು ಅಂತ್ಯ ಸಂಸ್ಕಾರದ ವೇಳೆ ಅಳುತ್ತಾರೆಂಬ ಕಾರಣಕ್ಕೆ, ಸ್ಮಶಾನಕ್ಕೆ ಬರುವಂತಿಲ್ಲ.
ಇನ್ನು ಎರಡನೇ ಕಾರಣ, ಶವ ಸಂಸ್ಕಾರದ ದೃಶ್ಯ ನೋಡಿಡ ಮಹಿಳೆಯರು ಮತ್ತು ಮಕ್ಕಳು ಹೆಚ್ಚಾಗಿ ಹೆದರಿಕೊಳ್ಳುತ್ತಾರೆಂಬ ಕಾರಣಕ್ಕೆ ಮಕ್ಕಳಿಗೆ ಮತ್ತು ಮಹಿಳೆಯರನ್ನ ಅಂತ್ಯ ಸಂಸ್ಕಾರದಿಂದ ದೂರವಿರಿಸಲಾಗತ್ತೆ. ಶವ ಸಂಸ್ಕಾರದ ವೇಳೆ ತಲೆ ಬುರುಡೆ, ಮೂಳೆಗಳು ಒಡೆಯುವ ಶಬ್ಧ ಕೇಳಿಸುತ್ತದೆ. ಮತ್ತು ತಮ್ಮವರು ಬೆಂಕಿಯಲ್ಲಿ ಬೇಯುವ ದೃಶ್ಯ ನೋಡುವುದು ಅಸಾಧ್ಯವಾದ ಕಾರಣ, ಹೀಗೆ ಮಾಡಲಾಗತ್ತೆ.
ಮೂರನೇಯದಾಗಿ ನಕಾರಾತ್ಮಕ ಶಕ್ತಿಯ ಪ್ರವೇಶ. ಮಹಿಳೆಯರು ಮತ್ತು ಮಕ್ಕಳು ನಾಜೂಕಾಗಿರುವ ಕಾರಣ, ಅವರ ಮೇಲೆ ನಕಾರಾತ್ಮಕ ಶಕ್ತಿಯ ಪ್ರಭಾವ ಬೇಗ ಬೀರತ್ತೆ ಅನ್ನೋ ಕಾರಣಕ್ಕೆ, ಸ್ಮಶಾನಕ್ಕೆ ಮಕ್ಕಳು ಮತ್ತು ಮಹಿಳೆಯರಿಗೆ ಪ್ರವೇಶವಿರುವುದಿಲ್ಲ. ಅಲ್ಲದೇ, ಅಂತ್ಯಸಂಸ್ಕಾರ ಮುಗಿಸಿ ಬಂದ ಮನೆಯ ಪುರುಷರಿಗೆ ಕೇಶ ಮುಂಡನ ಮಾಡಲಾಗತ್ತೆ. ಆದರೆ ಹೆಣ್ಣು ಮಕ್ಕಳಿಗೆ ಹಾಗೆ ಕೇಶ ಮುಂಡನ ಮಾಡಲಾಗುವುದಿಲ್ಲ. ಆದ್ದರಿಂದ ಹೆಣ್ಣು ಮಕ್ಕಳನ್ನ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಬಿಡುವುದಿಲ್ಲ.