ಇಂದೋರ್: ಪತಿ ಬ್ಯೂಟಿ ಪಾರ್ಲರ್‌ಗೆ ಹೋಗಬೇಡ ಎಂದಿದ್ದಕ್ಕೆ, ಪತ್ನಿ ಆತ್ಮಹತ್ಯೆಗೆ ಶರಣಾದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.
ರೀನಾ ಯಾದವ್(34) ಮೃತಳಾಗಿದ್ದು, ನೇಣಿಗೆ ಶರಣಾಗಿದ್ದಾಳೆ. ಈಕೆ ಬ್ಯೂಟಿ ಪಾರ್ಲರ್‌ಗೆ ಹೋಗಲು ರೆಡಿಯಾಗುತ್ತಿದ್ದಳು. ಆದರೆ ಈಕೆಯ ಪತಿ ಬಲರಾಮ್, ನೀನು ಬ್ಯೂಟಿಪಾರ್ಲರ್‌ಗೆ ಹೋಗುವುದು ಬೇಡ ಎಂದು ಹೇಳಿದ್ದಾನೆ. ಇದೇ ವಿಷಯಕ್ಕೆ ಇಬ್ಬರ ಮಧ್ಯೆ ಜಗಳವಾಗಿದೆ. ಇದೇ ಜಗಳ ಈಕೆಯ ಸಾವಿನೊಂದಿಗೆ ಅಂತ್ಯವಾಗಿದೆ. ಘಟನೆ ನಡೆದ ಬಳಿಕ ಪತಿ ಬಲರಾಮ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.
ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದಿದ್ದಾರೆ. ರೀನಾ ಸಂಬಂಧಿಕರು ಹೇಳುವ ಪ್ರಕಾರ, ಮದುವೆಯಾಗಿ 15 ವರ್ಷಗಳಾದರೂ, ರೀನಾ ಮತ್ತು ಬಲರಾಮ್ ಪದೇ ಪದೇ ಜಗಳವಾಡುತ್ತಿದ್ದರಂತೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ನಡೆಸುವುದಾಗಿ ಹೇಳಿದ್ದಾರೆ.
40 ಮಹಿಳೆಯರಿಗೆ ಒಬ್ಬನೇ ಗಂಡ..? : ಪರಿಶೀಲಿಸಿದಾಗ ತಿಳಿಯಿತು ಸತ್ಯಸಂಗತಿ..
ಯೋಗಿ ಆದಿತ್ಯನಾಥ್‌ಗೆ ಜೀವ ಬೆದರಿಕೆ ಪ್ರಕರಣಕ್ಕೆ ಟ್ವಿಸ್ಟ್: ಇದು ಪ್ರೀತಿಸಿದವಳಿಗಾಗಿ ಮಾಡಿದ ಕೃತ್ಯ..


