Friday, November 22, 2024

Latest Posts

ಗೌಪ್ಯವಾಗಿ ಪತಿಯ ಅಂತ್ಯಸಂಸ್ಕಾರ ಮಾಡಿದ ಪತ್ನಿ: ಕಾರಣವೇನು ಗೊತ್ತಾ..?

- Advertisement -

ಕರ್ನೂಲ್ : ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ವಿಚಿತ್ರ ಘಟನೆ ನಡೆದಿದೆ. ಮಹಿಳೆಯೊಬ್ಬರು ಗೌಪ್ಯವಾಗಿ ತಮ್ಮ ಪತಿಯ ಅಂತ್ಯಸಂಸ್ಕಾರ ಮಾಡಿದ್ದಾರೆ. ಆದರೆ ಮನೆಯಿಂದ ಹೊಗೆಯಾಡುವ ದೃಶ್ಯ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಸ್ಥಳಕ್ಕೆ ಬಂದ ಪೊಲೀಸರು ಈ ಬಗ್ಗೆ ವಿಚಾರಿಸಿದಾಗ, ಅನಾರೋಗ್ಯದಿಂದ ಮೃತಪಟ್ಟ ಪತಿಯ ದೇಹವನ್ನ ಪತ್ನಿ ಮನೆಯಲ್ಲೇ ಅಂತ್ಯಸಂಸ್ಕಾರ ಮಾಡಿದ್ದಾರೆಂದು ತಿಳಿದು ಬಂದಿದೆ.

ರಟ್ಟಿನ ಪೆಟ್ಟಿಗೆ ಉಪಯೋಗಿಸಿ, ಪತಿಯ ಅಂತ್ಯಸಂಸ್ಕಾರ ಮಾಡಿರುವುದು ತಿಳಿದು ಬಂದಿದೆ. ಯಾಕೆ ನೀವು ಪತಿಯ ಅಂತ್ಯಸಂಸ್ಕಾರವನ್ನನು ಹೀಗೆ ಮನೆಯಲ್ಲೇ ಮಾಡಿದ್ದೀರಿ ಎಂದು ಪೊಲೀಸರು ಕೇಳಿದ್ದಕ್ಕೆ, ಆಕೆ ಕೊಟ್ಟ ಉತ್ತರ ಎಲ್ಲರೂ ದಂಗಾಗುವಂತೆ ಮಾಡಿದೆ.

ಹರಿಕೃಷ್ಣ ಪ್ರಸಾದ್ ಮತ್ತು ಲಲಿತಾ ದಂಪತಿ ಹಲವು ವರ್ಷಗಳಿಂದ ಕರ್ನೂಲ್ ಜಿಲ್ಲೆಯಲ್ಲಿ ವಾಸಿಸುತ್ತಿದ್ದರು. ಇವರದ್ದು ಮೆಡಿಕಲ್ ಶಾಪ್ ಇದ್ದು, ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಓರ್ವ ಮಗ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರೆ, ಇನ್ನೋರ್ವ ಮಗ ಕೆನಡಾದಲ್ಲಿ ನೆಲೆಸಿದ್ದಾನೆ. ಇಷ್ಟು ಒಳ್ಳೆಯ ಸಂಸಾರವಿದ್ದು, ಈಕೆ ಯಾಕೆ ಹರಿಕೃಷ್ಣ ಅವರ ಮೃತದೇಹವನ್ನು ಹೀಗೆ ಮನೆಯಲ್ಲೇ ಸುಟ್ಟಿದ್ದಾರೆಂದರೆ, ಮಕ್ಕಳಿಗೆ ತಮ್ಮ ಅಪ್ಪ ಸತ್ತಿದ್ದಾರೆಂದು ಗೊತ್ತಾಗಬಾರದೆಂದು.

ಹೌದು, ಇವರ ಇಬ್ಬರು ಮಕ್ಕಳೂ ಅಪ್ಪನ ಆಸ್ತಿಗಾಗಿ ಮನೆಗೆಬರುತ್ತಿದ್ದರಂತೆ. ಅಪ್ಪ ಮೃತರಾಗಿದ್ದಾರೆಂದು ತಿಳಿದರೆ, ಆಸ್ತಿಯನ್ನು ಲಪಟಾಯಿಸಿಕೊಂಡು ಹೋಗುತ್ತಾರೆಂಬ ಹೆದರಿಕೆಯಿಂದ, ಅಪ್ಪ ಸತ್ತಿದ್ದು, ಮಕ್ಕಳಿಗೆ ಗೊತ್ತಾಗಬಾರದೆಂಬ ಕಾರಣಕ್ಕೆ, ಆ ಮಹಿಳೆ, ಪತಿಯ ಅಂತ್ಯಸಂಸ್ಕಾರವನ್ನು ಮನೆಯಲ್ಲೇ ಮಾಡಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸರು ವಿಚಾರಣೆ ಮುಂದುವರಸಿದ್ದಾರೆ.

ಹಿಂದೂ ಹಸಿರು ಪಡೆಯಿಂದ ಸಾವರ್ಕರ್ ಜನ್ಮ ದಿನಾಚರಣೆ

ಕೆಟ್ಟ ಕನಸು ಬೀಳದಿರಲು, ಮಲಗುವ ಮುನ್ನ ಈ ನಿಯಮ ಅನುಸರಿಸಿ..

ಮೋದಿಜಿ ಅತ್ಯುತ್ತಮ ಆಡಳಿತದಿಂದ ವೇಗದ ಅಭಿವೃದ್ಧಿ: ಮೀನಾಕ್ಷಿ ಲೇಖಿ

- Advertisement -

Latest Posts

Don't Miss