Marriage: ಬೇರೆ ದೇಶಗಳಿಗೆ ಹೋಲಿಸಿದರೆ, ನಮ್ಮ ದೇಶದಲ್ಲಿ ಮದುವೆ ಗ್ರ್ಯಾಂಡ್ ಆಗಿ, ಶಾಸ್ತ್ರೋಕ್ತವಾಗಿ ನಡೆಯುತ್ತದೆ. ಹೂವು ಮಾರಾಟಗಾರರಿಗೆ, ಕೇಟರಿಂಗ್‌ನವರಿಗೆ, ಮೇಕಪ್ ಮಾಡುವವರಿಗೆ, ಡೆಕೋರೇಟರ್‌ಗಳಿಗೆ ಹೀಗೆ ಹಲವರಿಗೆ ಅತ್ಯುತ್ತಮ ರೀತಿಯಲ್ಲಿ ಮಾರಾಟವಾಗುವಂತೆ ನಮ್ಮ ದೇಶದಲ್ಲಿ ಮದುವೆಯಾಗುತ್ತದೆ. ಆದರೆ 2050ರಲ್ಲಿ ಮದುವೆ ಅನ್ನೋದು ಒಂದು ಅಪರೂಪದ ಫಂಕ್ಷನ್ ಆಗಬಹುದು ಅಂತಿದೆ ಕೆಲವು ವರದಿ.
ಮಾರ್ಗನ್ ಸ್ಟ್ಯಾನ್ಲಿ ಎನ್ನುವವರು ರಿಸರ್ಚ್ ಮಾಡಿರುವ ಪ್ರಕಾರ, 2030ರ ವೇಳೆಗೆ ಪ್ರಪಂಚದ ಅರ್ಧಕ್ಕರ್ಧ ಮಹಿಳೆಯರು ಸಿಂಗಲ್ ಆಗಿ ಉಳಿಯುತ್ತಾರೆ. ಅಲ್ಲದೇ, ಇದರಲ್ಲಿ ಕೆಲವರು ಮದುವೆಯಾದರೂ ಕೂಡ, ತಾಯಿಯಾಗಲು ಬಯಸುವುದಿಲ್ಲ. ಇದಕ್ಕೆ ಕಾರಣವೂ ಇದೆ. ಮದುವೆಯಾದರೆ ಎಲ್ಲಿ ತಮ್ಮ ಕರಿಯರ್‌ಗೆ ಪೆಟ್ಟು ಬೀಳುತ್ತದೋ, ಎಲ್ಲಿ ತಾವು ಅಂದುಕೊಂಡ ಯಶಸ್ಸು ಪಡೆಯಲು ಸಾಧ್ಯವಿಲ್ಲವೋ ಎಂಬ ಹೆದರಿಕೆ ಹೆಣ್ಣು ಮಕ್ಕಳಲ್ಲಿ ಬರಲಿದೆ.
ಇದಕ್ಕೆ ಕಾರಣವೂ ಇದೆ. ಅದೇನೆಂದರೆ, ಇಂದಿನ ಕಾಲದಲ್ಲಿ ಹಲವು ಹೆಣ್ಣು ಮಕ್ಕಳು ವಿವಾಹದ ಬಳಿಕ, ತಾವಂದುಕೊಂಡದ್ದು ಸಾಧಿಸಲು ಸಾಧ್ಯವಾಗಿಲ್ಲ ಅಂತಾ ಕೊರಗುತ್ತಿದ್ದಾರೆ. ಕೆಲವರು ಓದು ಮುಂದುವರಿಸಬೇಕು ಎಂದು ಆಸೆ ಪಟ್ಟಿರುತ್ತಾರೆ. ಮತ್ತೆ ಕೆಲವರು ಕೆಲಸಕ್ಕೆ ಹೋಗಬೇಕು ಅಂತಾ ಆಸೆ ಪಟ್ಟಿರುತ್ತಾರೆ. ಇನ್ನು ಕೆಲವರು ತಮ್ಮದೇ ಉದ್ಯೋಗ ಪ್ರಾರಂಭಿಸಬೇಕು ಅಂದುಕೊಂಡಿರುತ್ತಾರೆ. ಆದರೆ ವಿವಾಹದ ಬಳಿಕ, ಪತಿಯ ಸೇವೆ, ಮಕ್ಕಳ ಆರೈಕೆಯಲ್ಲೇ ಜೀವನ ಕಳೆದು ಬಿಡುತ್ತಾರೆ. ವೈವಾಹಿಕ ಜೀವನ, ತಾಯಿಯ ಪಾತ್ರ, ಸೊಸೆಯ ಪಾತ್ರ ನಿಭಾಯಿಸುವ ಹೆಣ್ಣು ಆಕೆಯಾಗಿದ್ದರೆ, ಮಾನಸಿಕ ಸ್ಥಿತಿ ಹದಗೆಡುವುದಂತೂ ಗ್ಯಾರಂಟಿ.
ಈ ರೀತಿ ಎಲ್ಲ ಜವಾಬ್ದಾರಿ ನಿಭಾಯಿಸಿ, ಮುಂಂದೊಂದು ದಿನ ಬೆಲೆ ಕಳೆದುಕೊಂಡು ಬದುಕುವ ಬದಲು, ನಮಗೆ ಬೇಕಾದ ಹಾಗೆ ಜೀವನ ಮಾಡಬೇಕು ಅಂತಲೇ, ಭವಿಷ್ಯದ ಹೆಣ್ಣು ಮಕ್ಕಳು ಇಚ್ಛಿಸುತ್ತಾರೆ. ಪುರುಷರು ಕೂಡ, ಸಿಂಗಲ್ ಆಗುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ, ಈಗಿನ ಕಾಲದಲ್ಲಿ ಮದುವೆ ಮಾಡಿಕೊಳ್ಳುವುದೇ, ಡಿವೋರ್ಸ್ ಪಡೆದು, ಜೀವನಾಂಶ ಪಡೆಯಲು ಅನ್ನೋ ರೀತಿ ಕೆಲವು ಮಹಿಳೆಯರು ನಡೆದುಕೊಳ್ಳುತ್ತಿದ್ದಾರೆ. ತಮ್ಮ ಆಸ್ತಿಯನ್ನು ಇನ್ನೊಬ್ಬರಿಗೆ ಸುಖಾಸುಮ್ಮನೆ ಹಂಚಿ, ವೇಸ್ಟ್ ಮಾಡುವ ಬದಲು, ಗಳಿಸಿ, ಅದರಿಂದ ಜೀವನ ಎಂಜಾಯ್ ಮಾಡೋದೇ ಲೇಸು ಅಂತಾ ಹಲವು ಪುರುಷರು ಭಾವಿಸಿದ್ದಾರಂತೆ.
ಇನ್ನು ಇದರಿಂದಾಗುವ ತೊಂದರೆಗಳೇನು ಅಂತಾ ನೋಡೋದಾಾದ್ರೆ, ಭವಿಷ್ಯದಲ್ಲಿ ಇಂಥ ಸಿಂಗಲ್‌ಗಳು ರಿಟೈರ್ ಆದ ಬಳಿಕ, ಸ್ನೇಹಿತರು, ಬಂಧು ಬಳಗವಿಲ್ಲದೇ, ಮಾನಸಿಕ ಒತ್ತಡದಿಂದ ಇವರು ಕುಗ್ಗಿ ಹೋಗಬಹುದು. ಅಲ್ಲದೇ, ಹಲವು ಕಂಂಪನಿಗಳಿಗೆ ಯುವ ಕೆಲಸಗಾರರು ಸಿಗುವುದು ಕಡಿಮೆಯಾಗುತ್ತಾರೆ. ಮದುವೆ ಕಾರ್ಯಕ್ರಮವಿಲ್ಲದೇ, ಹಲವು ವ್ಯಾಪಾರಿಗಳ ವ್ಯಾಪಾರ ವಹಿವಾಟಿಗೆ ಪೆಟ್ಟು ಬೀಳುತ್ತದೆ.
ಇನ್ನು ಈ ವರದಿಯಲ್ಲಿ ಬಂದಿರುವ ಮಾತು ಸತ್ಯವಾಗುತ್ತದೆ ಅಂತಾ ಹಲವರಿಗೆ ಅನ್ನಿಸಿದೆ. ಇದಕ್ಕೆ ಕಾರಣಗಳೇನು ಅಂದ್ರೆ, ಇತ್ತೀಚಿನ ದಿನಗಳಲ್ಲಿ ಹಲವು ಕಾಲೇಜು ಮಕ್ಕಳು, ಈಗಿಂದಲೇ ಲಿವ್ ಇನ್ ರಿಲೆಶನ್‌ಶಿಪ್‌ನಲ್ಲಿ ಇದ್ದಾರೆ. ಬೇಕಾದಷ್ಟು ದಿವಸ, ಬೇಕಾದವರ ಜೊತೆ ಜೀವನ ಸಂಗಾತಿಯಂತೆ ಜೀವನ ನಡೆಸಿ, ಬೋರ್ ಬಂದ ಬಳಿಕ, ಮತ್ತೊಂದು ಸಂಗಾತಿಯ ಸಹವಾಸ ಮಾಡೋದು. ಇದರಿಂದ ಮದುವೆಯ ಹಣವೂ ಉಳಿಯುತ್ತದೆ. ಡಿವೋರ್ಸ್ ಹಣವೂ ಉಳಿಯುತ್ತದೆ. ಮತ್ತು ಬೇಕಾದಾಗ ಬಟ್ಟೆ ಚೇಂಜ್ ಮಾಡಿದ ಹಾಗೆ, ಸಂಗಾತಿಯನ್ನು ಬದಲಾಯಿಸಿಕೊಳ್ಳಬಹುದು ಅನ್ನೋ ಸಣ್ಣ ಯೋಚನೆ, ಇಂದಿನ ಕೆಲ ಯುವ ಪೀಳಿಗೆಯವರಲ್ಲಿ ಬರುತ್ತಿದೆ. ಇದೇ ಯೋಚನೆ ಮುಂದುವರೆದರೆ, ಖಂಡಿತವಾಗಿಯೂ ವರದಿ ನಿಜವಾಗುವ ಎಲ್ಲ ಸಾಧ್ಯತೆಗಳಿದೆ.