Saturday, July 27, 2024

Latest Posts

ಈಕೆಗೆ ಶೀತ ಬಂದಿದ್ದಷ್ಟೇ, 20 ವರ್ಷ ಹಿಂದೆ ಹೋಗಿಬಿಟ್ಲು..! ಬರೀ ನೆಗಡಿಯಿಂದ ಹಿಂಗೆಲ್ಲಾ ಆಗತ್ತಾ..?

- Advertisement -

ನಮಗೆ ನಿಮಗೆಲ್ಲ ಶೀತ ಬಂದ್ರೆ ಏನಾಗತ್ತೆ..? ಹೆಚ್ಚಂದ್ರೆ ಮೂಗು ಸೋರತ್ತೆ, ತಲೆ ನೋವತ್ತೆ. ಮೈ ಕೈ ನೋವತ್ತೆ. ಆದ್ರೆ ಮರೆವು ಶುರುವಾಗೋದರ ಬಗ್ಗೆ ಕೇಳಿದ್ದೀರಾ. ಓರ್ವ ಯುವತಿಗೆ ಹೀಗೇ ಆಗಿತ್ತು. ಆಕೆಗೆ ಶೀತ ಬಂದ ನಂತರ 20 ವರ್ಷದ ಜೀವನವನ್ನೇ ಆಕೆ ಮರೆತಿದ್ದಳು. ಆದ್ರೀಗ ಆಕೆಗೆ ಎಲ್ಲವೂ ನೆನಪಿಗೆ ಬಂದಿದೆ. ಆಕೆ ಚೇತರಿಸಿಕೊಂಡಿದ್ದಾರೆ. ತನ್ನ ಕರಾಳ ಅನುಭವವನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾಳೆ.

ಈ ಯುವತಿಯ ಹೆಸರು ಕ್ಲೇರ್ ಮೆಫೆಟ್ ರೀಸ್. ಯುಕೆ ನಿವಾಸಿಯಾಗಿರುವ ಈಕೆಯ ಪತಿಯ ಹೆಸರು ಸ್ಕಾಟ್. ಈಕೆಗೆ ಇಬ್ಬರು ಪುತ್ರರಿದ್ದಾರೆ. ಈಕೆಗೆ 2021ರಲ್ಲಿ ಒಂದು ದಿನ ನೆಗಡಿ ಬಂದಿತ್ತು. ಆಕೆ ರೆಸ್ಟ್ ತೆಗೆದುಕೊಳ್ಳೋಕ್ಕೆ, ಮಲಗಿದ್ದಳಷ್ಟೇ, ಹಾಗೆ ಮಲಗಿದ್ದವಳು 16 ದಿನ ಕೋಮಾಗೆ ಹೋಗಿದ್ದಳು. ಆಕೆಗೆ ಕಳೆದ 20 ವರ್ಷ ತನ್ನ ಜೀವನದಲ್ಲಿ ಏನೇನಾಗಿತ್ತು ಅನ್ನೋದೇ ಮರೆತು ಹೋಗಿತ್ತು.

ರಾಯಲ್ ಲಂಡನ್ ಆಸ್ಪತ್ರೆಯಲ್ಲಿ ಆಕೆಗೆ ಚಿಕಿತ್ಸೆ ಕೊಡಿಸಲಾಯಿತು. ಆಕೆಗೆ ಚೇತರಿಸಿಕೊಳ್ಳಲು ಒಂದು ವರ್ಷವೇ ಬೇಕಾಯ್ತು. ಮದುವೆಯಾಗಿದ್ದು, ಮಕ್ಕಳನ್ನು ಹೆತ್ತಿದ್ದು, ಅವರನ್ನ ಶಾಲೆಗೆ ಸೇರಿಸಿದ್ದು, ಅವರ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ್ದು. ಇದ್ಯಾವುದೂ ನನಗೆ ನೆನಪಿಲ್ಲ. ನಾನೇನಾದ್ರೂ ನನ್ನ ಪತಿಯನ್ನ ಕಂಡುಹಿಡಿಯದೇ, ಆತನನ್ನು ಅನಾಮಿಕ ಅಂತಾ ಹೇಳಿದ್ದಿದ್ದರೆ, ಸ್ಕಾಟ್ ಅದ್ಯಾವ ರೀತಿ ನನ್ನನ್ನು ಹ್ಯಾಂಡಲ್ ಮಾಡ್ತಿದ್ರೋ ನನಗೆ ಗೊತ್ತಿಲ್ಲ. ಸಧ್ಯಕ್ಕೆ ನನಗೆ ಪತಿ- ಮಕ್ಕಳ ಬಗ್ಗೆ ನೆನಪಿಗೆ ಬಂದಿದೆ ಎಂದಿದ್ದಾರೆ ಕ್ಲೇರ್. ಈಗಲೂ ಆಕೆಗೆ ಎಲ್ಲವೂ ನೆನಪು ಬಂದಿಲ್ಲ. ಸಧ್ಯಕ್ಕೆ ತನ್ನ ಪತಿ ಮತ್ತು ಮಕ್ಕಳ ಬಗ್ಗೆ, ತಂದೆ ತಾಯಿಯ ಬಗ್ಗೆ ನೆನಪು ಬಂದಿದೆ.

- Advertisement -

Latest Posts

Don't Miss