ಕೋಲ್ಕತ್ತಾ: ಪ್ರತಿದಿನ ಮದ್ಯಸೇವಿಸಿ ತನ್ನ ಪತ್ನಿಗೆ ಕಿರುಕುಳ ನೀಡುತ್ತಿದ್ದ ಮಗನ ಮೇಲೆ ತಾಯಿಯೇ ಗುಂಡುಹಾರಿಸಿದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.
ಕುಡಿತದ ದಾಸನಾಗಿದ್ದ ಮನೋಜ್ ಶರ್ಮಾ ತನ್ನ ಪತ್ನಿಗೆ ಪ್ರತಿದಿನ ಕಿರುಕುಳ ನೀಡಿ ಸಾಕಷ್ಟು ಬಾರಿ ಮನಸೋಯಿಚ್ಛೆ ಥಳಿಸುತ್ತಿದ್ದ. ಆದ್ರೆ ನಿನ್ನೆ ರಾತ್ರಿ ಮತ್ತೆ ಕುಡಿದು ಬಂದ ಮನೋಜ್ ಇದೇ ರೀತಿ ವರ್ತಿಸಿದ್ದ. ಮರುದಿನ ಪತ್ನಿ ಕುಡಿತದ ಚಟವನ್ನು ಬಿಟ್ಟಿಬಿಡುವಂತೆ ಒತ್ತಾಯಿಸಿದ್ದಕ್ಕೆ ಕುಪಿತಗೊಂಡ ಮನೋಜ್ ತನ್ನ ಬಳಿಯಿದ್ದ ಗನ್ ನಿಂದ ನಿನ್ನನ್ನು ಹೊಡೆದು ಕೊಲೆ ಮಾಡುತ್ತೇನೆಂದು ಬೆದರಿಕೆ ಹಾಕಿದ್ದ. ಇದರಿಂದ ಬೇಸತ್ತ ಮನೋಜ್ ತಾಯಿ ರೇಣು ಶರ್ಮಾ, ಸೊಸೆಯ ಪರವಹಿಸಿ ಆತನ ಬಳಿಯಿದ್ದ ಗನ್ ಕಿತ್ತುಕೊಂಡಿದ್ದಾರೆ. ಆದ್ರೆ ಗನ್ ಹಿಡಿದು ಮಾತನಾಡುವಾಗ ಆಕಸ್ಮಿಕವಾಗಿ ಗುಂಡು ಹಾರಿ ಮನೋಜ್ ಹೊಟ್ಟೆಯ ಭಾಗ ಹೊಕ್ಕಿದೆ.
ಸದ್ಯ ಗಂಭೀರವಾಗಿ ಗಾಯಗೊಂಡ ಮನೋಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನು ಗುಂಡು ಹಾರಿಸಿ ದಿಕ್ಕು ತೋಚದ ತಾಯಿ ರೇಣು ಶರ್ಮಾ ಸ್ಥಳದಿಂದ ಪರಾರಿಯಾಗಿದ್ರು. ಬಳಿಕ ಪೊಲೀಸ್ ಠಾಣೆಗೆ ತಾವೇ ಶರಣಾಗತರಾಗಿ ಆಕಸ್ಮಿಕವಾಗಿ ಗುಂಡು ಹಾರಿದ್ದರ ಬಗ್ಗೆ ಒಪ್ಪಿಕೊಂಡಿದ್ದಾರೆ. ಇನ್ನು ಕುಟುಂಬವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದ ಸೊಸೆಗೆ ತಮ್ಮ ಮಗ ಪ್ರತಿ ನಿತ್ಯ ಕಾಟ ಕೊಡುತ್ತಿರೋ ಬಗ್ಗೆಯೂ ರೇಣು ಶರ್ಮಾ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಅಭಿನಂದನ್ ಮೀಸೆಗೆ ವಿಶಿಷ್ಟ ಸ್ಥಾನ..!ಮಿಸ್ ಮಾಡದೇ ಈ ವಿಡಿಯೋ ನೋಡಿ