ಯುನೈಟೆಡ್ ಕಿಂಗ್ಡಮ್: ಏನಾದ್ರೂ ತಪ್ಪು ಮಾಡಿದ್ರೆ ಪೊಲೀಸರು ಎಳೆದುಕೊಂಡು ಹೋಗಿ ಲಾಕಪ್ ಗೆ ಹಾಕೋದು ಸಹಜ. ಆದ್ರೆ ಈ ವೃದ್ಧೆ ಮಾತ್ರ ತಾನು ಏನೂ ತಪ್ಪು ಮಾಡದಿದ್ರೂ ನನ್ನನ್ನು ಅರೆಸ್ಟ್ ಮಾಡಿ ಅಂತ ಪೊಲೀಸರಿಗೇ ಮನವಿ ಮಾಡಿ ಕೊನೆಗೂ ಅರೆಸ್ಟ್ ಆಗುವಲ್ಲಿ ಯಶಸ್ವಿಯಾಗಿದ್ದಾಳೆ..!!
ಆಶ್ಚರ್ಯವಾದ್ರೂ ಇದು ಸತ್ಯ, ಇಲ್ಲಿನ ಗ್ರೇಟರ್ ಮ್ಯಾನ್ಚಸ್ಟರ್ ನಲ್ಲಿ ಈ ಘಟನೆ ನಡೆದಿದ್ದು, 93 ವರ್ಷದ ವೃದ್ಧೆ ಜೋಸೀ ಬರ್ಡ್ಸ್ ತನ್ನ ಕೋರಿಕೆ ಮೇರೆಗೆ ಅರೆಸ್ಟ್ ಆದ ವೃದ್ಧೆಯಾಗಿದ್ದಾಳೆ. ಅಂದಹಾಗೆ ಜೋಸೀ ತನ್ನ ಜೀವನದುದ್ದಕ್ಕೂ ಒಳ್ಳೆಯವಳಾಗಿದ್ದು ನನಗೆ ಸಾಕಾಗಿದೆ. ಹೀಗಾಗಿ ಜೀವನದಲ್ಲಿ ಒಮ್ಮೆಯಾದ್ರೂ ಅರೆಸ್ಟ್ ಆಗಬೇಕು, ಇದೇ ನನ್ನ ಕೊನೆಯ ಆಸೆ ಅಂತ ತನ್ನ ಕುಟುಂಬದ ಬಳಿ ಹೇಳಿಕೊಂಡಿದ್ದಳಂತೆ. ದಿನೇ ದಿನೇ ವೃದ್ಧೆಯ ಆರೋಗ್ಯ ಹದಗೆಡುತ್ತಿದ್ದ ಹಿನ್ನೆಲೆಯಲ್ಲಿ ಹೇಗಾದ್ರೂ ಮಾಡಿ ಆಕೆಯ ಕೊನೆಯಾಸೆ ಈಡೇರಿಸಲೇಬೇಕೆಂದುಕೊಂಡ ಕುಟುಂಬವರ್ಗ ಕೊನೆಗೂ ಗ್ರೇಟರ್ ಮ್ಯಾನ್ಚಸ್ಟರ್ ಪೊಲೀಸರಿಗೆ ಈ ಕುರಿತು ಮನವಿ ಮಾಡಿತ್ತು. ಈ ಮನವಿಗೆ ಒಪ್ಪಿದ ಪೊಲೀಸರು, ವೃದ್ಧೆಯನ್ನು ಒಂದು ಬಾರಿ ಅರೆಸ್ಟ್ ಮಾಡಿ, ಪೊಲೀಸ್ ‘ಟ್ರೀಟ್ಮೆಂಟ್’ ಹೇಗಿರುತ್ತೆ ಅಂತ ವೃದ್ಧೆ ಜೋಸೀಗೆ ತೋರಿದ್ದಾರೆ. ತನ್ನ ಕೊನೆಯಾಸೆ ಈಡೇರಿದ್ದರಿಂದ ವೃದ್ಧೆ ಸಂತೋಷಗೊಂಡಿದ್ದು, ಪೊಲೀಸರಿಗೂ ಹಾಗೂ ತನ್ನ ಕುಟುಂಬಕ್ಕೆ ಥ್ಯಾಂಕ್ಸ್ ಹೇಳಿದ್ದಾಳೆ.
ವಾಟ್ಸಾಪ್ ನಿಂದ ಶೀಘ್ರದಲ್ಲೇ ಶುರುವಾಗುತ್ತೆ ಈ ಸೇವೆ..! ಮಿಸ್ ಮಾಡದೇ ಈ ವಿಡಿಯೋ ನೋಡಿ