Saturday, July 12, 2025

Latest Posts

ಮಹಿಳೆಯರ ಸೌಕರ್ಯಕ್ಕಾಗಿ ಉಮೇನ್ ವೆಲ್ಫೇರ್ ನೋಡಲ್ ಆಫೀಸ್‌ರನ್ನು ನೇಮಕ ಮಾಡಿದ್ದೇವೆ: ಡಿಸಿ ದಿವ್ಯಪ್ರಭು

- Advertisement -

Dharwad News: ಧಾರವಾಡ: ನಾಳೆ ಲೋಕಸಭಾ ಎಲೆಕ್ಷನ್ ಹಿನ್ನೆಲೆ, ಧಾರವಾಡ ಬಾಸೆಲ್ ಮಿಷನ್ ಶಾಲೆಯಲ್ಲಿ ಮಸ್ಟರಿಂಗ್ ಕಾರ್ಯ ನಡೀತಿದ್ದು, ಚುನಾವಣಾ ಅಧಿಕಾರಿ ಡಿಸಿ ದಿವ್ಯ ಪ್ರಭು, ಮಸ್ಟರಿಂಗ್ ಸೆಂಟರ್‌ಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿ ದಿವ್ಯ ಪ್ರಭು, ಇವತ್ತು ಮಸ್ಟರಿಂಗ್ ಕೆಲಸ ಬಾಸೆಲ್ ಮಿಷನ್ ಶಾಲೆಯಲ್ಲಿ ನಡಿತಾ ಇದೆ. ವೀಕ್ಷಣೆ ಮಾಡಲು ಬಂದಿದ್ದೇನೆ. ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಟ್ಟಾರೆ 234 ಪೋಲಿಂಗ್ ಸ್ಟೇಷನ್ ಗಳಿವೆ. 234 ಪೋಲಿಂಗ್ ಪಾರ್ಟಿಸ್ 20% ಮೀಸಲು ಸ್ಟಾಫ್ ಕೊಟ್ಟಿದ್ದೇವೆ.  ಕೆಲವೊಂದು ಕಡೆ ಮೈಕ್ರೋ ಅಬ್ಸರ್ವರ್ಸ್ ಕೂಡ ನಾವು ನೀಡಿದ್ದೇವೆ. ಅವರಿಗೆ ಬೇಕಾದ ಬಸ್ ಸೇರಿ ಹಲವು ಸೌಕರ್ಯಗಳನ್ನು ನೀಡಿದ್ದೇವೆ. ಎಲ್ಲಾ ಕೊಠಡಿ ವೀಕ್ಷಣೆ ಮಾಡಿದ್ದೇನೆ, ಮಸ್ಟರಿಂಗ್ ಕಾರ್ಯ ಚನ್ನಾಗಿ ನಡೀತಿದೆ. ಪೋಲಿಂಗ್ ಪಾರ್ಟಿಸ್ ಗಳಿಗೆ ನೀಡಲಾದ ಸಾಮಗ್ರಿಗಳು, ಇವಿಎಂ ಮಿಷನ್, ಫಾರ್ಮ್ ಗಳನ್ನು ಪರಿಶೀಲನೆ ಮಾಡ್ತಾ ಇದ್ದಾರೆ ಎಂದು ಹೇಳಿದ್ದಾರೆ.

ಅವರೆಲ್ಲರೂ ಟೀಮ್ ಆಗಿ ಕೆಲಸ ಮಾಡ್ತಾ ಇದ್ದಾರೆ. ಸಂಜೆ ಒಳಗಡೆ ಇಲ್ಲಿಂದ ತೆರಳುತ್ತಾರೆ. ಸಂಜೆ 4-5 ಗಂಟೆ ಒಳಗೆ ಪೋಲಿಂಗ್ ಸ್ಟೇಷನ್ ಗೆ ರೀಚ್ ಆಗ್ತಾರೆ. ಇವತ್ತು ಪೋಲಿಂಗ್ ಪಾರ್ಟಿಸ್ ಗಳು ಅಲ್ಲೇ ಇರ್ತಾರೆ. ಅವರಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದೇವೆ. ಫಾಗಿಂಗ್, ಸ್ವಚ್ಛತೆ, ಶೌಚಾಲಯ, ಕುಡಿಯುವ ನೀರಿನ ಎಲ್ಲಾ ಸೌಕರ್ಯಗಳನ್ನು ಮಾಡಿದ್ದೇವೆ. ಮಹಿಳೆಯರ ಸೌಕರ್ಯಕ್ಕಾಗಿ ಉಮೇನ್ ವೆಲ್ಫೇರ್ ನೋಡಲ್ ಆಫೀಸ್ ರನ್ನು ನೇಮಕ ಮಾಡಿದ್ದೇವೆ ಎಂದು ಡಿಸಿ ದಿವ್ಯಪ್ರಭು ಹೇಳಿದ್ದಾರೆ.

ಉಷ್ಣಾಂಶ ಹೆಚ್ಚಾಗಿರೋದಕ್ಕೂ ಸಹ ಪೂರ್ವಭಾವಿ ಸಿದ್ಧತೆ ಮಾಡಿಕೊಂಡಿದ್ದೇವೆ. ಮಸ್ಟರಿಂಗ್ ಕಾರ್ಯದಲ್ಲೇ ಅವರ ಕೈಯಲ್ಲಿ ಮೆಡಿಕಲ್ ಕಿಟ್ ಕೊಟ್ಟಿದ್ದೇವೆ. ಹೀಟ್ ವೇವ್ ಗೆ ಬೇಕಾದ ಔಷಧಿಗಳನ್ನು ನೀಡಿದ್ದೇವೆ. ಮತದಾರರಿಗೂ ಹೀಟ್ ವೇವ್ ತಡೆಗಟ್ಟಲು ಸಿದ್ಧತೆ ಮಾಡಿಕೊಂಡಿದ್ದೇವೆ. ಆಯಾ ಪೋಲಿಂಗ್ ಸ್ಟೇಷನ್ ನಲ್ಲಿ ಮತದಾರರಿಗೆ ಮೆಡಿಕಲ್ ಕಿಟ್ ಕೊಟ್ಟಿದ್ದೇವೆ. ಎಲ್ಲಾ ಪೋಲಿಂಗ್ ಸ್ಟೇಷನ್ ನಲ್ಲಿ ಆಶಾ ಮತ್ತು ಹೆಲ್ತ್ ವರ್ಕರ್ಸ್ ಇರ್ತಾರೆ. ಆಂಬುಲೆನ್ಸ್ ಹಾಗೂ ಹತ್ತಿರದ ಆಸ್ಪತ್ರೆಗಳನ್ನು ಗುರುತಿಸಿದ್ದೇವೆ. ಹೀಟ್ ವೇವ್ ಇಂದ ತೊಂದರೆ ಆಗದಂತೆ ಎಲ್ಲಾ ಸಿದ್ಧತೆಗಳನ್ನು ನಾವು ಮಾಡಿಕೊಂಡಿದ್ದೇವೆ ಎಂದು ದಿವ್ಯಪ್ರಭು ಹೇಳಿದ್ದಾರೆ.

ಕಾಂಗ್ರೆಸ್ಸಿನವರು ಚುನಾವಣಾ ಸಮಯದಲ್ಲಿ ಕಾಣಿಸಿಕೊಳ್ಳುತ್ತಾರೆ. ಮತ್ತೆ ನಾಪತ್ತೆಯಾಗುತ್ತಾರೆ: ಬಿ.ವೈ.ವಿಜಯೇಂದ್ರ

ಧಾರವಾಡದಲ್ಲಿ ಪಾದಯಾತ್ರೆ ನಡೆಸಿ, ಮತಯಾಚಿಸಿದ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ

ಶಿಕ್ಷಕಿ ಶಾಲೆಗೆ ಲೇಟಾಗಿ ಬಂದರೆಂದು ಹಲ್ಲೆ ಮಾಡಿ ಬಟ್ಟೆ ಹರಿದ ಪ್ರಾಂಶುಪಾಲರು

- Advertisement -

Latest Posts

Don't Miss