- Advertisement -
Dharwad News: ಧಾರವಾಡ: ಧಾರವಾಡದಲ್ಲಿ ಐವರು ಮಹಿಳೆಯರು ಜನರಿಗೆ ಕ್ರೀಶ್ಚಿಯನ್ ಮತಕ್ಕೆ ಮತಾಂತರ ಆಗುವಂತೆ ಪ್ರೇರೇಪಿಸಿದ ಘಟನೆ ನಡೆದಿದೆ. ಮನೆ ಮನೆಗೆ ತೆರಳಿ ಜನರನ್ನು ಮತಾಂತರವಗುವಂತೆ ಹೇಳಿರುವ ಮಹಿಳೆಯರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ.
ಐವರು ಮಹಿಳೆಯರು ಕೈಯಲ್ಲಿ ಬೈಬಲ್ ಹಿಡಿದು, ಜನಾಮಾನ್ಯರಿಗೆ ಆಮಿಷ ಒಡ್ಡಿ ಮತಾಂತರ ಮಾಡಿಸಲು ಪ್ರಯತ್ನಿಸುತ್ತಿದ್ದು, ಲಕ್ಚ್ಮಿ ಸಿಂಗನಕೇರಿಯಲ್ಲಿ, ರಾಜು ಪೂಜಾರ ಎಂಬುವವರು ನೀಡಿದ ದೂರಿನ ಮೇರೆಗೆ ಐವರು ಮಹಿಳೆಯರನ್ನು ವಿದ್ಯಾಗಿರಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಇನ್ನೂ ಇದಕ್ಕೂ ಮುನ್ನ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು, ಮಹಿಳೆಯರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ.
- Advertisement -