Friday, November 28, 2025

Latest Posts

ಮಾರ್ಚ್ 2023ರಲ್ಲಿ ಮಹಿಳಾ ಐಪಿಎಲ್ ಲೀಗ್

- Advertisement -

ಹೊಸದಿಲ್ಲಿ:  ಬಹುನಿರೀಕ್ಷಿತಾ ಮಹಿಳಾ ಐಪಿಎಲ್ ಮುಂದಿನ ವರ್ಷ ಮಾರ್ಚ್ ತಿಂಗಳಿನಿಂದ ಆರಂಭವಾಗಲಿದೆ ಎಂದು ಬಿಸಿಸಿಐ ಅಧಿಕೃತವಾಗಿ ಖಚಿತಪಡಿಸಿದೆ.

ಬಹುಬೇಡಿಕೆಯಲ್ಲಿರುವ ಮಹಿಳಾ ಐಪಿಎಲ್ ಕುರಿತು ಬಿಸಿಸಿಐ ಆಡಳಿತ ಮಂಡಳಿ ಚರ್ಚೆ ನಡೆಸಿದ್ದು ದಕ್ಷಿಣ ಆಫ್ರಿಕಾದಲ್ಲಿನಡೆಯಲಿರುವ ಮಹಿಳಾ ಟಿ20 ವಿಶ್ವಕಪ್ ನಂತರ ಆಯೋಜಸಿಲು ತೀರ್ಮಾನಿಸಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಐದು ತಂಡಗಳನ್ನೊಳಗೊಂಡ ಟೂರ್ನಿಯೂ ಮಾರ್ಚ್ ಮೊದಲ ವಾರದಲ್ಲಿ ಆರಂಭವಾಗಲಿದೆ. ಒಟ್ಟು ನಾಲ್ಕು ವಾರಗಳ ಟೂರ್ನಿ ಇದಾಗಿದೆ. ಫೆ.9ರಿಂದಫೆ.26ರವರೆಗೆ ದ.ಅಫ್ರಿಕಾದಲ್ಲಿ ಟಿ20 ವಿಶ್ವಕಪ್ ಮುಗಿದ ಬಳಿಕ ಮಹಿಳಾ ಐಪಿಎಲ್ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಹಿಂದೆ ಮಹಿಳಾ ಐಪಿಎಲ್ 2023ರಲ್ಲಿ ನಡೆಸುವುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಮಂಡಳಿಯ ಕಾರ್ಯದರ್ಶಿ ಜಯ್ ಶಾ ಹೇಳಿದ್ದರು.

- Advertisement -

Latest Posts

Don't Miss