Friday, December 13, 2024

Latest Posts

ಕಾಂಗ್ರೆಸ್‌ನವರು ಏನೇನೋ ಕುಡಿದು ಹೇಗಿದ್ದಾರೆಂದು ಆಶ್ಚರ್ಯವಾಗಿದೆ: ಬೆಲ್ಲದ್ ವ್ಯಂಗ್ಯ

- Advertisement -

Hubballi Political News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜನೆ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಶಾಸಕ ಅರವಿಂದ್ ಬೆಲ್ಲದ್ ಕೂಡ ಭಾಗವಹಿಸಿದ್ದರು.

ಜನವರಿ 27 ಮತ್ತು 28ರಂದು ಉತ್ಸವ ಆಯೋಜನೆ ಮಾಡಲಾಗಿದ್ದು, 15 ದೇಶದ 23 ಕ್ರಿಡಾಪಟುಗಳು ಭಾಗಿ, ಎರಡು ಲಕ್ಷ ಜನ ವೀಕ್ಷಿಸುವ ನಿರೀಕ್ಷೆ ಇದೆ. ಕುಸ್ತಿ, ಚಿತ್ರಕಲಾ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ದೇಸೀಯ ಕ್ರೀಡೆಗಳಿಗೆ ಆದ್ಯತೆ ನೀಡಲು ದೇಸೀ ಹಬ್ಬದ ಆಯೋಜನೆ ಮಾಡಲಾಗಿದೆ. ಹುಬ್ಬಳ್ಳಿಯ ಕುಸುಗಲ್ ರಸ್ತೆಯಲ್ಲಿ ಎರಡು ದಿನ ಗಾಳಿಪಟ ಉತ್ಸವ ನಡೆಯಲಿದೆ.

ಈ ವೇಳೆ ಮಾತನಾಡಿದ ಅರವಿಂದ್ ಬೆಲ್ಲದ್,  ಮೋದಿಯವರು ಎಳನೀರು ಕುಡಿದು ಹೇಗಿದ್ದಾರೆಂದು ಕಾಂಗ್ರೆಸ್‌ನವರು ಪ್ರಶ್ನಿಸಿದ್ದಾರೆ. ಕಾಂಗ್ರೆಸ್‌ನವರು ಏನೇನೋ ಕುಡಿದು ಹೇಗಿದ್ದಾರೆಂದು ಆಶ್ಚರ್ಯವಾಗಿದೆ. ಕಾಂಗ್ರೆಸ್‌ನಲ್ಲಿ ಇಟಲಿ ತಳಿಯಿದೆ. ಪೋಪ್, ಚರ್ಚ್ ಬಗ್ಗೆ ಮಾತಾಡಿದ್ರೆ ಅವರಿಗೆ ಖುಷಿ ಆಗುತ್ತಿತ್ತು. ರಾಹುಲ್ ತಾತ ನೆಹರು ಹೇಗೆ ಆಡಳಿತ ಆರಂಭಿಸಿದ್ರು? ಸೋಮನಾಥ ಟೆಂಪಲ್ ಉದ್ಘಾಟನೆಗೆ ಹೋಗಲಿಲ್ಲ, ರಾಷ್ಟ್ರಪತಿ ತಡೆಯಲು ಹೋಗಿ ಬೈಸಿಕೊಂಡರು. ನಮ್ಮ ಸಂಸ್ಕೃತಿ ಬಗ್ಗೆ ಕಾಂಗ್ರೆಸ್‌ಗೆ ಗೌರವವಿಲ್ಲ. ಕಾಂಗ್ರೆಸ್‌ನವರು ಎಷ್ಟು ಜನ ತಮ್ಮ ಪತ್ನಿಯರ ಜೊತೆ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ತಾರೆ? ಕಾಂಗ್ರೆಸ್ ಮುಖಂಡರು ಯಾರ್ಯಾರದೋ ಹೆಂಗಸರ ಜೊತೆ ಕಾಣಿಸಿಕೊಳ್ತಾರೆ ಎಂದು ಬೆಲ್ಲದ್ ಕಾಂಗ್ರೆಸ್ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಜಗದೀಶ್ ಶೆಟ್ಟರ್ ಬಿಜೆಪಿಗೆ ಬರೋದು ಗೊತ್ತಿಲ್ಲ. ತಳಬುಡ ಇಲ್ಲದ ಚರ್ಚೆ, ಊಹಾಪೋಹದ ಬಗ್ಗೆ ಮಾತಾಡಲ್ಲಾ. ಲೋಕಸಭೆ ಚುನಾವಣೆಗೆ ನನ್ನ ಹೆಸರು ಕೇಳಿ ಬರುತ್ತಿದೆ ಅಂತಾ ಕೆಲವರು ಹೇಳಿದ್ರು. ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲ್ಲ. ನಾವೆಲ್ಲ ಶಾಸಕರೂ ಲಿಂಗಾಯತರು ಇದ್ದೇವೆ, ಬೇರೆ ಸಮಾಜದವರಿಗೂ ಅವಕಾಶ ಸಿಗಬೇಕು ಎಂದು ಅರವಿಂದ್ ಬೆಲ್ಲದ್ ಹೇಳಿದ್ದಾರೆ.

‘ಈಗ ಜೈ ಶ್ರೀರಾಮ್ ಅಂದಿದ್ದಾರೆ. ಇನ್ನಷ್ಟು ದಿನ ಹೋದ್ರೆ ರಾಮನ ಗುಡಿಗೆ ಕಸ ಹೊಡಿಯೋಕು ಬರ್ತಾರೆ’

ಅಮೆರಿಕದ ಚಿಕಾಗೋದಲ್ಲಿ ಗುಂಡಿನ ದಾಳಿ: 8 ಮಂದಿ ಸಾವು

ರಾಮಮಂದಿರಕ್ಕಾಗಿ ಭಾರತೀಯರಿಗೆ ಶುಭಾಶಯ ತಿಳಿಸಿದ ಕ್ರಿಕೇಟಿಗ ಡೇವಿಡ್ ವಾರ್ನರ್

 

- Advertisement -

Latest Posts

Don't Miss