5ನೇ ವಿಶ್ವಯೋಗ ದಿನಾಚರಣೆ ಸಂಭ್ರಮ ಇಂದು ದೇಶದೆಲ್ಲೆಡೆ ಕಳೆಗಟ್ಟಿದೆ. ಭಾರತೀಯ ಪರಂಪರೆ ಮತ್ತು ಆರೋಗ್ಯಕರ ಸಂಪ್ರದಾಯದ ಭಾಗವೆಂದೇ ಕರೆಸಿಕೊಳ್ಳುತ್ತಿರೋ ಯೋಗ ಇದೀಗ ನಟ ನಟಿಯರ ಪಾಲಿನ ಫೇವರಿಟ್ ಆಗಿದೆ. ಇನ್ನು ಬಾಲಿವುಡ್ ಬ್ಯೂಟೀಸ್ ಕೂಡ ಯೋಗಕ್ಕೆ ಮನಸೋತಿದ್ದು, ಪ್ರತಿನಿತ್ಯ ಯೋಗಾಭ್ಯಾಸ ಮಾಡೋ ಮೂಲಕ ತಮ್ಮ ಆರೋಗ್ಯ ಮತ್ತು ಸೌಂದರ್ಯವನ್ನೂ ಕಾಪಾಡಿಕೊಳ್ತಿದ್ದಾರೆ.
ಇಂದು ಎಲ್ಲೆಡೆ ಯೋಗಾಭ್ಯಾಸದ ಮಹತ್ವ ಸಾರಲಾಗುತ್ತಿದೆ. ಅಂತಯೇ ಇಂದು ಬೆಳ್ಳಂಬೆಳಗ್ಗೆ ಮುಂಬೈನ ಗೇಟ್ ವೇ ಆಫ್ ಇಂಡಿಯಾದಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಬೃಹತ್ ಸಂಖ್ಯೆಯ ಯೋಗ ಪ್ರಿಯರೊಂದಿಗೆ ಶಿಲ್ಪಾ ಶೆಟ್ಟಿ ಯೋಗದ ನಾನಾ ಭಂಗಿ ಅಭ್ಯಸಿಸಿದ್ರು.
ಅಲ್ಲದೆ ತಮ್ಮ ಸಹೋದರಿ ಶಮಿತಾ ಶೆಟ್ಟಿ ಜೊತೆ ಯೋಗಾಭ್ಯಾಸ ಮಾಡುವ ವಿಡಿಯೋ ಮಾಡಿ ಟ್ವೀಟ್ ಮಾಡಿರೋ ಸಿಂಹಕಟಿ ಸುಂದರಿ ಶಿಲ್ಪಾಶೆಟ್ಟಿ ಯೋಗಾಭ್ಯಾಸದ ಮೇಲಿನ ತಮ್ಮ ಒಲವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ತಮ್ಮ ಸೆಕ್ಸಿ ಮೈಕಟ್ಟಿನಿಂದಲೇ ಸಿಕ್ಕಾಪಟ್ಟೆ ಫೇಮಸ್ ಆಗಿರೋ ಬಿಟೌನ್ ತಾರೆ ಬಿಪಾಷ ಬಸು ಕೂಡ ದಿನಂಪ್ರತಿ ಯೋಗಾಭ್ಯಾಸ ಮಾಡ್ತಾರೆ. ವಿಶ್ವ ಯೋಗ ದಿನಾಚರಣೆ ಅಂಗವಾಗಿ ಇಂದು ತಮ್ಮ ಯೋಗ ಶಿಕ್ಷಕಿ ವಂದನಾರೊಂದಿಗೆ ಫೋಸ್ ನೀಡಿರೋ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
ಬಾಲಿವುಡ್ ನ ಕ್ಯೂಟಿ ಆಲಿಯಾ ಭಟ್ ಕೂಡ ಯೋಗ ಪ್ರಿಯೆಯಾಗಿದ್ದು ಇತ್ತೀಚಿಗೆ ಚಾಲ್ತಿಯಲ್ಲಿರೋ ಆಂಟಿ-ಗ್ರಾವಿಟಿ ಯೋಗ ಇವರ ಫೆವರಿಟ್ ಆಸನವಾಗಿದೆ.
ವಯಸ್ಸಿಗೆ ಸೆಡ್ಡು ಹೊಡೆದು ಹದಿಹರೆಯದವರನ್ನೇ ನಾಚಿಸುವಂತಹ ಮೈಮಾಟ ಹೊಂದಿರೋ ಬಾಲಿವುಡ್ ನಟಿ ಮಲೈಕಾ ಅರೋರಾ ಕೂಡ ಯೋಗವನ್ನು ಅಭ್ಯಸಿಸುತ್ತಾರೆ. ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಇಂದು
ತಮ್ಮ ಯೋಗ ಪಾರ್ಟನರ್ ಗಳೊಂದಿಗೆ ಈ ಬ್ಯೂಟಿಫುಲ್ ನಟಿ ಯೋಗಾಭ್ಯಾಸ ವಿಡಿಯೋವನ್ನು ಶೇರ್ ಮಾಡಿದ್ದಾರೆ.
ನಟಿ ಅಮಲಾ ಪೌಲ್ ಹೀಗೆ ಆದದ್ದೇಕೆ..? ಮಿಸ್ ಮಾಡದೇ ಈ ವಿಡಿಯೋ ನೋಡಿ