ನಮಸ್ಕಾರ ಸ್ನೇಹಿತರೆ ಉದ್ಯೋಗ ಪ್ರತಿಯೊಬ್ಬ ವ್ಯಕ್ತಿಗೂ ಅಗತ್ಯವಾಗಿ ಇರುವಂತದ್ದು, ಅದರಲ್ಲಿ ಕೂಡ ಪುರುಷರಿಗೆ ಉದ್ಯೋಗ ಎನ್ನುವುದು ಬಹಳ ಮುಖ್ಯ ಪ್ರತಿಯೊಂದು ಕುಟುಂಬವೂ ಒಂದು ಪುರುಷನ ಮೇಲೆ ಅವಲಂಬಿತವಾಗಿರುವುದರಿಂದ ಉದ್ಯೋಗವು ಪುರುಷರ ಲಕ್ಷಣ ಎಂದು ಹೇಳುತ್ತಾರೆ. ಆದರೆ ಕಾಲ ಬದಲಾಗುತ್ತಿದ್ದ ಹಾಕಿ ಉದ್ಯೋಗ ಕೇವಲ ಪುರುಷರಿಗೆ ಮಾತ್ರವಲ್ಲ ಸ್ತ್ರೀಯರಿಗೂ ಕೂಡ ಸಮಾನವಾಗಿ ಬೇಕು ಎನ್ನುವಷ್ಟು ಇದೆ, ಮನೆಯ ಜವಾಬ್ದಾರಿ ಕೂಡ ಪುರುಷ ಮತ್ತು ಮಹಿಳೆಗೆ ಇಬ್ಬರಿಗೂ ಸೀಮಿತವಾಗಿರುವುದರಿಂದ ಇಬ್ಬರೂ ಕೂಡ ಉದ್ಯೋಗದ ನಿರೀಕ್ಷೆಯಲ್ಲಿ ಇರುತ್ತಾರೆ. ಆದರೆ ಉದ್ಯೋಗ ಸಿಗುವುದು ಅಷ್ಟು ಸುಲಭವಾದ ಮಾತಲ್ಲ, ಸಾಕಷ್ಟು ಪ್ರಯತ್ನ ಪಟ್ಟರೂ ಕೂಡ ಸರಿಯಾಗಿ ಉದ್ಯೋಗ ಸಿಗದೆ ಸಾಕಷ್ಟು ಜನರು ಕಷ್ಟವನ್ನು ಪಡುತ್ತಿದಿದ್ದಾರೆ, ಅಂಥವರು ಈ ಒಂದು ಸರಳ ಕೆಲಸಗಳನ್ನು ಮಾಡುತ್ತೂ ಬರುವುದರಿಂದ ಶೀಘ್ರವಾಗಿ ಉದ್ಯೋಗ ಪ್ರಾಪ್ತಿಯಾಗುತ್ತದೆ, ಹಾಗಾದರೆ ಯಾವ ಒಂದು ಕೆಲಸವನ್ನು ಮಾಡುವುದರಿಂದ ಉದ್ಯೋಗ ಪ್ರಾಪ್ತಿಯಾಗುತ್ತದೆ ಎಂದು ನೋಡೋಣ.
ಶಾಸ್ತ್ರಗಳಲ್ಲಿ ತಿಳಿಸಿರುವ ಹಾಗೆ ಪ್ರತಿನಿತ್ಯವೂ ಶಿವಲಿಂಗಕ್ಕೆ ನೀರನ್ನು ಅರ್ಪಿಸಿ ಅಕ್ಷತೆ ಕಾಳುಗಳನ್ನು ಹಾಕಿ ಪೂಜೆಯನ್ನು ಸಲ್ಲಿಸಬೇಕು, ಆದರೆ ಯಾವುದೇ ಕಾರಣಕ್ಕೂ ಅಕ್ಷತೆ ಕಾಳು ಕೆಳಗೆ ಬೀಳದ ಹಾಗೆ ನೋಡಿಕೊಳ್ಳಬೇಕು, ಈ ಕೆಲಸವನ್ನು ಪ್ರತಿನಿತ್ಯ ಸಾಧ್ಯವಾಗದೇ ಹೋದರೆ ಪ್ರತಿ ಸೋಮವಾರ ಮಾಡುವುದರಿಂದ ನಿಮಗೆ ಶೀಘ್ರವಾಗಿ ಉದ್ಯೋಗ ಸಿಗುತ್ತದೆ. ಇನ್ನು ಯಾವುದಾದರೂ ಉದ್ಯೋಗಕ್ಕೆ ಸಂಬಂಧಿಸಿದ ಹಾಗೆ ಸಂದರ್ಶನಕ್ಕೆ ಹೋಗಬೇಕಾದರೆ ಹೋಗುವ ಮೊದಲು ಗೋವಿಗೆ ಆಹಾರವನ್ನು ನೀಡಿ ನಮಸ್ಕಾರವನ್ನು ಮಾಡಿಕೊಂಡು ಹೋಗುವುದರಿಂದ ಸಂದರ್ಶನ ಯಶಸ್ವಿಯಾಗಿ ಉದ್ಯೋಗ ಸಿಗುತ್ತದೆ. ಇನ್ನು ಸಂದರ್ಶನಕ್ಕೆ ಹೋಗುವಾಗ ಮನೆಯಿಂದ ಹೊರಗೆ ಹೋಗುವ ಮುಂಚೆ ಆಂಜನೇಯಸ್ವಾಮಿಗೆ ನಮಸ್ಕರಿಸಿ ಸಾಧ್ಯವಾದರೆ ಹನುಮಂತ ಚಾಲೀಸ ಓದಿ ಹೋಗುವುದು ಕೂಡ ಒಳ್ಳೆಯದು. ಇನ್ನು ಜೀವನದಲ್ಲಿ ಎಲ್ಲಾ ರೀತಿಯಲ್ಲೂ ಸಫಲತೆಯನ್ನು ಕಾಣಲು ಎಲ್ಲಾ ರೀತಿಯ ಕೆಲಸಕಾರ್ಯಗಳಲ್ಲಿ ಯಶಸ್ಸನ್ನು ಪಡೆಯಬೇಕು ಎಂದರೆ, ಹಾರುತಿರುವ ಅಂತಹ ಆಂಜನೇಯಸ್ವಾಮಿಯ ಅಂದರೆ ಭಜರಂಗಬಲಿಯ ಫೋಟೋವನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ ಎಲ್ಲಾ ರೀತಿಯಿಂದಲೂ ಒಳ್ಳೆಯದಾಗುತ್ತದೆ. ಇಂದು ಪ್ರತಿ ತಿಂಗಳು ಗಣೇಶ ಚತುರ್ಥಿ ಬರುತ್ತಿದೆ ಆ ದಿನಗಳಲ್ಲಿ ಯಾವುದಾದರೂ ಒಂದು ದಿನ ಬಲಮುರಿ ಗಣೇಶನ ಫೋಟೋಗಳು ಮನೆಯಲ್ಲಿ ಪೂಜೆ ಮಾಡುವುದರಿಂದ ನಿಮ್ಮ ಉದ್ಯೋಗಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ವಿಘ್ನಗಳು ನಿವಾರಣೆಯಾಗುತ್ತದೆ.
ಇನ್ನು ಉದ್ಯೋಗಕ್ಕೆ ಸಂಬಂಧಿಸಿದ ಹಾಗೆ ಕೆಲಸಕಾರ್ಯಗಳಿಗೆ ಸಂಬಂಧಿಸಿದ ಹಾಗೆ ಒಳ್ಳೆಯ ಕೆಲಸಗಳಿಗೆ ಹೊರಗಡೆ ಹೋಗುವ ಮುಂಚೆ ಒಂದು ಲವಂಗ ಮತ್ತು ಅಡಿಕೆಯನ್ನು ಜೊತೆಯಲ್ಲಿಟ್ಟುಕೊಂಡು ಹೋಗುವುದರಿಂದ ಹೋಗುವ ಕೆಲಸಗಳು ಯಾವುದೇ ಅಡೆತಡೆಗಳು ಇಲ್ಲದೆ ಯಶಸ್ವಿಯಾಗುತ್ತದೆ. ಈ ರೀತಿಯಾಗಿ ಕೆಲಸಕಾರ್ಯಗಳಿಗೆ ಕಷ್ಟ ಪಡುತ್ತಿರುವವರು, ಉದ್ಯೋಗ ಸಿಗದೆ ಕಷ್ಟಪಡುತ್ತಿದ್ದರು. ಈ ಕೆಲಸಗಳನ್ನು ಜೀವನದಲ್ಲಿ ಮಾಡುತ್ತ ಬರುವುದರಿಂದ ಶೀಘ್ರವಾಗಿ ಇಷ್ಟಾರ್ಥಗಳು ಈಡೇರುತ್ತವೆ.




