ಯಾರು ಇಂಡಿಯಾದ ಟಾಪ್ ಪಾಪ್ಯುಲರ್ ನಟ ಅನ್ನೋ ಕುತೂಹಲ ಎಲ್ಲರಲ್ಲೂ ಮೂಡ್ತಾ ಇರುತ್ತೆ. ಅಂತಹ ಒಂದು ಸಮೀಕ್ಷೆಯನ್ನು ಓರ್ಮ್ಯಾಕ್ಸ್ ಮೀಡಿಯಾ ಜನರ ಮುಂದಿಟ್ಟಿದೆ. ಸ್ಟರ‍್ಸ್ ಇಂಡಿಯಾ ಲವ್ಸ್ ಅನ್ನೋ ಹೆಸರಲ್ಲಿ ಟಾಪ್ ೧೦ ನಟರು ಮತ್ತು ನಟಿಯರ ಹೆಸರನ್ನು ಪಟ್ಟಿ ಮಾಡಿದೆ. ಹಾಗಾದ್ರೆ ಕೆಜಿಎಫ್ ಚಾಪ್ಟರ್೨ ಮೂಲಕ ದೇಶದ ಕ್ರೇಜಿಹೀರೋ ಆದ ರಾಕಿಂಗ್‌ಸ್ಟಾರ್ ಟಾಪ್ ಅಲ್ಲಿದ್ದಾರಾ..? ಬಾಲಿವುಡ್ ಸ್ಟಾರ್ಸ್ ಜಾಸ್ತೀನಾ..? ಸೌತ್ ಸ್ಟಾರ್ಸ್..? ನಿಮ್ಮ ಕುತೂಹಲಕ್ಕೆ ಮುಂದಿನ ಸಾಲುಗಳಲ್ಲಿ ಉತ್ತರ ಇದೆ.
ಹೌದು. ಇಲ್ಲಿ ಸೌತ್ ಇಂಡಿಯನ್ ಸ್ಟಾರ್‌ಗಳದ್ದೇ ಪ್ರಾಭಲ್ಯ. ಆದ್ರೆ ಮೊದಲ ಸ್ಥಾನದಲ್ಲಿ ರಾಕಿಭಾಯ್ ಇಲ್ಲ, ತಮಿಳು ಸ್ಟಾರ್ ನಟ ವಿಜಯ್ ಮೊದಲ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿರೋದು ಆರ್.ಆರ್.ಆರ್ ಸ್ಟಾರ್ ಜ್ಯೂನಿಯರ್ ಎನ್ಟಿಆರ್. ೩. ಪ್ರಭಾಸ್, ೪.ಅಲ್ಲು ಅರ್ಜುನ್, ೫. ಅಕ್ಷಯ್ ಕುಮಾರ್ ೬.ಅಜಿತ್ ಕುಮಾರ್ ಇದ್ರೆ ೭ನೇ ಸ್ಥಾನದಲ್ಲಿ ರಾಕಿಂಗ್‌ಸ್ಟಾರ್ ಯಶ್ ಇದ್ದಾರೆ. ಹಾಗೆ ನೋಡಿದ್ರೆ ರಾಕಿಭಾಯ್ ಕ್ರೇಜ್ ಹೆಚ್ಚೇ ರ‍್ಬೇಕಿತ್ತು ಅನ್ಕೊಂಡ್ರೂ ಇಲ್ಲಿ ಸಮೀಕ್ಷೆ ನಡೆದಿರೋದು ಏಪ್ರಿಲ್ ೨೦೨೨ರವರೆಗಿನ ಲೆಕ್ಕಾಚಾರದ ಮೇಲೆ ಮಾತ್ರ ಅನ್ನೋದು ಗಮನಿಸಬೇಕಾದ ಅಂಶ. ಮೇ ತಿಂಗಳಲ್ಲಿ ನಡೀತಿದ್ರೆ ಅನ್‌ಡೌಟೆಡ್ಲೀ ರಾಕಿಭಾಯ್ ಟಾಪಲ್ಲಿ ರ‍್ತಿದ್ರು.
ಯಶ್ ನಂತರ ರಾಮ್‌ಚರಣ್, ತಮಿಳು ನಟ ಸೂರ್ಯ, ನಂತರ ೧೦ನೇ ಸ್ಥಾನದಲ್ಲಿ ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು ಇದ್ದಾರೆ. ರಜಿನಿಕಾಂತ್, ಚಿರಂಜೀವಿ ಸೈಡಿಗೆ ಸರಿದ್ರು ಅನ್ನೋದ್ರ ಜೊತೆಗೆ ಮಲೆಯಾಳಂನ ಯಾವ ನಟರೂ ಪಟ್ಟಿಯಲ್ಲಿಲ್ಲ ದುಲ್ಕರ್ ಸಲ್ಮಾನ್ ಕೂಡ ಇಲ್ಲ ಅನ್ನೋದು ಒಂದು ಕಡೆಯಾದ್ರೆ ಖಾನ್‌ದಾನ್ ಬಾಲಿವುಡ್ಡನ್ನೇ ಆಳುತ್ತಿರೋದ್ರಲ್ಲೂ ಒಬ್ಬ ಖಾನ್ ಕೂಡ ಪಟ್ಟಿಯಲ್ಲಿಲ್ಲ ಅನ್ನೋದೂ ಅಚ್ಛರಿನೇ. ಹಾಗೆ ನೋಡಿದ್ರೆ ಆಮೀರ್ ಐದು ವರ್ಷಕ್ಕೊಂದು ಸಿನಿಮಾ ಮಾಡಿದ್ರೆ, ಸಲ್ಮಾನ್ ಶಾರುಖ್ ಮೊದಲಿನ ಹವಾ ಉಳಿಸಿಕೊಂಡಿಲ್ಲ, ಸದ್ಯಕ್ಕೆ ಪಟ್ಟಿಯಲ್ಲಿರೋದು ಒಬ್ಬರೇ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್.
ನಟಿಯರಲ್ಲಿ ಟಾಪ್‌ನಲ್ಲಿರೋದು ಉಂ ಅಂಟಾವಾ, ಊಹುಂ ಅಂಟಾವಾ ಖ್ಯಾತಿಯ ಸಮಂತಾ, ಅತ್ಯಂತ ಹೆಚ್ಚು ಸಂಭಾವನೆ ಪಡೆಯೋ ಪೂಜಾ ಹೆಗ್ಡೆ ೧೦ನೇ ಸ್ಥಾನದಲ್ಲಿದ್ರೆ ರಶ್ಮಿಕಾ ಮಂದಣ್ಣ ೬ನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯ ಟಾಪ್ ಟೆನ್‌ನಲ್ಲಿ ಕನ್ನಡತಿಯರದ್ದೇ ಸಿಂಹಪಾಲು ನಾಲ್ಕು ಕನ್ನಡತಿಯರಿದ್ದಾರೆ ಅನ್ನೋದು ಕನ್ನಡಿಗರು ಖುಷಿಪಡಬೇಕಾದ ವಿಷಯ.