ಯಶಸ್ವಿನಿ ಯೋಜನೆ ಮರು ಜಾರಿ : ರಾಜ್ಯದ ರೈತ ಸಮುದಾಯಕ್ಕೆ ಮೂತ್ತೊಂದು ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ.

ಬೆಂಗಳೂರು: ರಾಜ್ಯದ ರೈತ ಸಮುದಾಯಕ್ಕೆ ರಾಜ್ಯ ಸರ್ಕಾರ ಸಿಹಿಸುದ್ದಿಯೊಂದನ್ನು ನೀಡಿದ್ದು, ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಜಾರಿ ಮಾಡಿದ್ದ ಯಶಸ್ವಿನಿ ಯೋಜನೆಯನ್ನು ಆಗಿನ ರಾಜ್ಯ ಸರ್ಕಾರ ರದ್ದುಗೊಳಿಸಿತ್ತು. ಮತ್ತೇ ಆ ಯೊಜನೆಯನ್ನು  ಮರು ಜಾರಿಗೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ.

ರೈತರಿಗೆ ಅನಾರೋಗ್ಯ ಉಂಟಾದರೆ ಸುಲಭವಾಗಿ, ಉಚಿತವಾಗಿ ಚಿಕಿತ್ಸಾ ಸೌಲಭ್ಯಗಳು ನೀಡುವ ಉದ್ದೇಶದಿಂದ ಯಶಸ್ವಿ ಯೊಜನೆಯನ್ನು ಎಸ್.ಎಂ.ಕೃಷ್ಣ ಅವರ ಅವಧಿಯಲ್ಲಿ ಜಾರಿಗೆ ತರಲಾಯಿತ್ತು. ಇದೀಗ ಈ ಯೋಜನೆಯನ್ನು ಮರು ಜಾರಿಗೆ ತರುವ ಚಿಂತನೆ ನಡೆಸಲಾಗಿದ್ದು, 2022 ರ ಮಾರ್ಚ್ ನಲ್ಲಿ ಮರುಜಾರಿಯಾಗುವ ಸಾಧ್ಯತೆ ಇದೆ. ಯಶಸ್ವಿಯೋಜನೆಯು ಗ್ರಾಮೀಣಾ ಸಹಕಾರಗಳ ಆರೋಗ್ಯ ಸುರಕ್ಷತಾ ಯೋಜನೆಯಾಗಿದ್ದು, ಯಾವುದೇ ಸಂಘದ ಸದಸ್ಯರು ಕನಿಷ್ಟ ಮೊತ್ತದ ಪ್ರೀಮಿಯಂ ಪಾವತಿಸಿ ತಮ್ಮ ಕುಟುಂಬದವರ ಹೆಸರು ನೋಂದಣಿ ಮಾಡಿಸಿಕೊಂಡರೆ ಹಲವು ವಿಧದ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಮಾಡಿಸಿಕೊಳ್ಳಬಹುದು.

About The Author