Sunday, April 13, 2025

Latest Posts

ಕೆಜಿಎಫ್-2ನಲ್ಲಿ ಯಶ್ ತಂದೆಯ ಪಾತ್ರದಲ್ಲಿರೋರು ಕನ್ನಡದ ಖ್ಯಾತ ನಟಿಯ ಅಪ್ಪ..!

- Advertisement -

ಕೆಜಿಎಫ್ ಸಿನಿಮಾ ಬರೀ ಸಿನಿಮಾ ಅಷ್ಟೇ ಅಲ್ಲ, ನೂರಾರು ಕಲಾವಿದರ, ತಂತ್ರಜ್ನರ ಜೀವನವೇ ಈ ಸಿನಿಮಾದಲ್ಲಡಗಿದೆ. ಇದೀಗ ಕೆಜಿಎಫ್ ಸಿನಿಮಾಗಾಗಿ ಹಗಲು ರಾತ್ರಿ ಶ್ರಮಿಸಿದ್ದ ಅಷ್ಟೂ ಜನರಿಗೂ ಮನಸ್ಸು ನಿರಾಳವಾಗಿದೆ, ಕನಸು ನನಸಾಗಿದೆ. ಈ ಸಿನಿಮಾದಲ್ಲಿ ಚಿಕ್ಕ ಪಾತ್ರ ನಿರ್ವಹಿಸಿರುವವರೂ ಅದೃಷ್ಟವಂತರೇ ಸರಿ. ಯಾಕಂದ್ರೆ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್-೨ ನಲ್ಲಿ ಚಿಕ್ಕ ಚಿಕ್ಕ ಪಾತ್ರಗಳಿಂದ ಹಿಡಿದೂ ದೊಡ್ಡ ಪಾತ್ರಗಳವರೆಗೂ ಅದರದ್ದೇ ಆದ ನ್ಯಾಯ, ಪ್ರಾಮುಖ್ಯತೆಯನ್ನ ನೀಡಿದ್ದಾರೆ. ಅದರಂತೆ ನಟ ಜಿಜಿ ಅಲಿಯಾಸ್ ಗೋವಿಂದೇಗೌಡ ಹಾಗೂ ಅವರ ಪತ್ನಿ ದಿವ್ಯಾ ಇಬ್ಬರೂ ಈ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದರೂ, ಇಬ್ಬರ ಪಾತ್ರ ಎಲ್ಲರ ಮನಸ್ಸಲ್ಲಿ ಉಳಿಯುತ್ತೆ. ಇನ್ನೂ ನಟ ಯಶ್ ತಂದೆಯ ಪಾತ್ರದಲ್ಲಿ ನಟಿಸಿರೋದು ಕನ್ನಡ ಚಿತ್ರರಂಗದ ಖ್ಯಾತ ನಟಿ ಶೃತಿ ಅವರ ತಂದೆ ಜೆ.ವಿ ಕೃಷ್ಣ. ವಿಶೇಷ ಅಂದ್ರೆ ಈ ಚಿತ್ರದಲ್ಲಿ ಅಭಿನಯಿಸಿರೋ ನಟಿ ಈಶ್ವರಿ ಅವರ ಪಾತ್ರಕ್ಕೆ ನಟಿ ಶೃತಿಯೇ ವಾಯ್ಸ್ ಡಬ್ ಮಾಡಿರೋದು.. ಈ ವಿಷಯವನ್ನ ಸ್ವತಃ ಶೃತಿಯವರೇ ತಮ್ಮ ಇನ್ಸಾ÷್ಟ ಗ್ರಾಂ ಪೇಜ್‌ನಲ್ಲಿ ಹಂಚಿಕೊAಡಿದ್ದು, ೭೭ನೇ ವಯಸ್ಸಿನಲ್ಲಿ ನನ್ನ ತಂದೆ ನಟನೆ ಮಾಡಿರೋದು ನನ್ನ ಹೆಮ್ಮೆಯ ವಿಚಾರ ಅಂತ ಕುಟುಂಬದ ಜೊತೆ ಕೆಜಿಎಫ್-೨ ಸಿನಿಮಾ ನೋಡಿರೋ ಫೋಟೋವನ್ನ ಪೋಸ್ಟ್ ಮಾಡಿ ಈ ಖುಷಿಯನ್ನ ಅಭಿಮಾನಿಗಳ ಜೊತೆ ಹಂಚಿಕೊAಡಿದ್ದಾರೆ.

ಕರ್ನಾಟಕ ಟಿವಿ, ನಳಿನಾಕ್ಷಿ

- Advertisement -

Latest Posts

Don't Miss