Tuesday, November 11, 2025

Latest Posts

ಪ್ರಧಾನಿ ಮೋದಿಗೆ ಪತ್ರ ಬರೆದ ಯತ್ನಾಳ್ – ಪತ್ರ ಬರೆದಿದ್ದು ಯಾಕೆ? ಪತ್ರದಲ್ಲಿ ಏನಿದೆ?

- Advertisement -

ಉತ್ತರ ಕರ್ನಾಟಕದಲ್ಲಿ ಭೀಮಾ ನದಿಯ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರವಾಹದಿಂದ ಉಂಟಾದ ಭೀಕರ ಪರಿಸ್ಥಿತಿಗೆ ಸಂಬಂಧಿಸಿ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ತಕ್ಷಣವೇ ಕೇಂದ್ರ ಸರ್ಕಾರದಿಂದ ತುರ್ತು ಪರಿಹಾರ ಮತ್ತು ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದ್ದಾರೆ.

ಪತ್ರದಲ್ಲಿ ತಿಳಿಸಿದಂತೆ, ಭೀಮಾ ನದಿಯ ತೀರದ 117 ಗ್ರಾಮಗಳು ಜಲಾವೃತಗೊಂಡಿದೆ. 10 ಲಕ್ಷ ಹೆಕ್ಟೇರ್‌ಕ್ಕಿಂತ ಹೆಚ್ಚು ಕೃಷಿ ಭೂಮಿಗೆ ಪ್ರವಾಹದಿಂದ ಹಾನಿ ಸಂಭವಿಸಿದೆ. ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. 547 ಮನೆಗಳು ಸಂಪೂರ್ಣ ನಾಶಗೊಂಡು ಸಾವಿರಾರು ಕುಟುಂಬಗಳು ಆಶ್ರಯ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.

ಮಹಾರಾಷ್ಟ್ರದ ಮೇಲ್ಭಾಗದ ಜಲಾಶಯಗಳು ಮತ್ತು ಬ್ಯಾರೇಜ್‌ಗಳಿಂದ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆ ಮಾಡುತ್ತಿರುವುದರಿಂದ ಕಲಬುರಗಿ, ಯಾದಗಿರಿ, ವಿಜಯಪುರ ಮತ್ತು ಬೀದರ್ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಮತ್ತಷ್ಟು ತೀವ್ರಗೊಂಡಿದೆ. ಭೀಮಾ ಹಾಗೂ ಮಾಂಜ್ರಾ ನದಿಗಳ ಉಬ್ಬರದಿಂದ ಜನಸಂಪರ್ಕ ಮುರಿದು ಕಡೆದು, ರಾಷ್ಟ್ರೀಯ ಹೆದ್ದಾರಿ 50 ರ ಬಳಿ ಸೇತುವೆ ನೀರಿನಲ್ಲಿ ಮುಳುಗಿರುವುದರಿಂದ ವಾಹನ ಸಂಚಾರವೂ ವಿಘ್ನಗೊಂಡಿದೆ.

NDRF ಮತ್ತು SDRF ತಂಡಗಳು ಸಿಲುಕಿದ ಜನರನ್ನು ರಕ್ಷಿಸಲು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹಾನಿಯ ಪ್ರಮಾಣದ ತೀವ್ರತೆ ಗಮನದಲ್ಲಿಟ್ಟು ಕೇಂದ್ರದಿಂದ ತಕ್ಷಣದ ತುರ್ತು ಸಹಾಯ ಅಗತ್ಯವಿದೆ ಎಂದು ಯತ್ನಾಳ್ ಹೇಳಿದ್ದಾರೆ.

ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು, ಪರಿಹಾರ ಕ್ರಮ ಕೈಗೊಳ್ಳುವುದಕ್ಕಿಂತಲೂ ಹೆಚ್ಚು ರಾಜಕೀಯ ಚಟುವಟಿಕೆಯಲ್ಲಿ ತೊಡಗಿಕೊಂಡಿದೆ ಎಂದು ಪತ್ರದಲ್ಲಿ ಯತ್ನಾಳ್ ಆರೋಪಿಸಿದ್ದಾರೆ. ತುರ್ತು ಪರಿಹಾರ ಕ್ರಮ ಕೈಗೊಳ್ಳಲು ಮತ್ತು ಕೇಂದ್ರದ ವಿಶೇಷ ತಂಡವನ್ನು ಉತ್ತರ ಕರ್ನಾಟಕಕ್ಕೆ ಕಳುಹಿಸಲು ಯತ್ನಾಳ ಪ್ರಧಾನಿಗೆ ಯತ್ನಾಳ್ ಮನವಿ ಮಾಡಿದ್ದಾರೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss