Dharwad News: ಧಾರವಾಡ: ಧಾರವಾಡದಲ್ಲಿ ಇಂದು ಮಾಧ್ಯಮದ ಜೊತೆ ಮಾತನಾಡಿದ ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಯತ್ನಾಳ್ ಉಚ್ಛಾಟನೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಕೇಂದ್ರದ ಬಿಜೆಪಿ ಮರು ಪರಿಶೀಲಿಸಬೇಕು. ಅದು ಪಕ್ಷದ ಆಂತರಿಕ ವಿಷಯ ಇರಬಹುದು. ಆದರೆ ಹಿಂದುತ್ವದ ಪಕ್ಷ ಬಿಜೆಪಿ. ಈ ಬೆಳವಣಿಗೆ ನಮಗೆ ಅಸಮಾಧಾನಕರವಾಗಿದೆ. ಹಿಂದುತ್ವದ ಪರವಾಗಿ ಮಾತನಾಡುವ ಗಟ್ಟಿ ದ್ವನಿ ಯತ್ನಾಳ್. ಇಡೀ ರಾಜ್ಯದಲ್ಲಿ ನೋವು, ಸಿಟ್ಟು, ವೇದನೆ ಎಲ್ಲರಿಗೂ ಇದೆ. ಕೇಂದ್ರದ ಬಿಜೆಪಿ ಪದಾಧಿಕಾರಿಗಳನ್ನು ನಾವು ಆಗ್ರಹಿಸುತ್ತೇವೆ. ಯತ್ನಾಳರನ್ನು ಪುನಃ ಮತ್ತೆ ತೆಗೆದುಕೊಳ್ಲಬೇಕು. ಹಿಂದುತ್ವದ ಬೆಳವಣಿಗೆಗೆ ಒತ್ತು ಕೊಡಬೇಕು ಅನ್ನೋದೇ ನಮ್ಮ ಆಗ್ರಹ ಎಂದು ಮುತಾಲಿಕ್ ಹೇಳಿದ್ದಾರೆ.
ಯುಗಾದಿ ಹಾಗೂ ರಾಮನವಮಿಯನ್ನು ಹಲಾಲ್ ಮುಕ್ತ ಮಾಡಬೇಕು. ಹಿಂದೂಗಳ ಮೇಲೆ ಹಲಾಲ್ ಹೇರುವುದು ತಪ್ಪು. ಅವರ ಧರ್ಮದಲ್ಲಿ ಅವರು ಹಲಾಲ್ ಮಾಡಲಿ. ಆದ್ರೆ ಹಿಂದೂಗಳ ಮೇಲೆ ಹೇರಬಾರದು. ಅವರಲ್ಲಿ ಹೂ ಹಣ್ಣು ಖರೀದಿ ಮಾಡಬಾರದು. ಶುದ್ಧ ವಾಗಿರುವುದನ್ನು ನಾವು ಖರೀದಿ ಮಾಡಬೇಕು. ಅದನ್ನು ಬಿಟ್ಟು ಗೋ ಭಕ್ಷಕರ ಜೊತೆಗೆ ವ್ಯಾಪಾರ ಮಾಡಿ, ಹಲಾಲ್ ಯುಗಾದಿ ಮಾಡಬೇಡಿ ಎಂದು ಮುತಾಲಿಕ್ ಕಿಡಿಕಾರಿದ್ದಾರೆ.
ಎಲ್ಲ ತಿನ್ನುವ ವಸ್ತುಗಳ ಮೇಲೆ ಉಗುಳುತ್ತಾರೆ, ಹೇಸಿಗೆ ಮಾಡುತ್ತಾರೆ. ಹೀಗಾಗಿ ಅವರ ಬಳಿ ವ್ಯಾಪಾರ ಮಾಡಬಾರದು. ಇದು ಶಾಸ್ತ್ರದ ವಿರುದ್ಧ ಇದೆ. ಹೀಗಾಗಿ ಹಲಾಲ್ ಮುಕ್ತ ಆಗಬೇಕು. ರಂಜಾನ್ ಗೆ ಈಗಾಗಲೇ ಗೋವುಗಳ ಸಾಗಾಣಿಕೆ ಆಗುತ್ತಿದೆ. ಯಮಕನಮರಡಿ ಯಲ್ಲಿ ಸಣ್ಣ ಟ್ರ್ಯಾಕ್ಸ್ ನಲ್ಲಿ ಗೋವುಗಳನ್ನ ಹಾಕಿದ್ದಾರೆ. ನಿರಂತರವಾಗಿ ಇಂತಹ ಘಟನೆ ನಡೆಯುತ್ತಿದೆ. ಗೋಹತ್ಯಾ ಕಾನೂನು ಜಾರಿಯಲ್ಲಿದೆ. ಅಂಥದರಲ್ಲಿ ಸರ್ಕಾರ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ. ಎಲ್ಲಾ ಶ್ರೀರಾಮ ಸೇನೆ ಕಾರ್ಯಕರ್ತರು ಎಲ್ಲ ಚೆಕ್ ಪೋಸ್ಟ್ ಗಳಲ್ಲಿ ನಾವು ಇದ್ದೇವೆ. ಇದನ್ನ ಹದ್ದುಬಸ್ತಿನಲ್ಲಿ ಇಡಬೇಕು. ಇಲ್ಲದಿದ್ರೆ ಸರ್ಕಾರವೇ ಮುಂದೆ ಹೊಣೆ ಆಗಲಿದೆ ಎಂದು ಪ್ರಮೋದ್ ಮುತಾಲಿಕ್ ಎಚ್ಚರಿಸಿದ್ದಾರೆ.