Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿರುವ ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್, ಬ್ಯಾಂಕಾಕ್ ನಲ್ಲಿ ಭೂಕಂಪ ನೈಸರ್ಗಿಕ ವಿಕೋಪ ದಿಂದ ಆಗಿದೆ. ಕನ್ನಡಿಗರು ಸುರಕ್ಷಿತವಾಗಿ ಬರುತ್ತಾರೆ. ಒಂದು ಗ್ಯಾರಂಟಿ ಫ್ರಿ ಅಂತಾರೆ ಮತ್ತೊಂದು ಕಡೆ ಜನರಿಗೆ ಬರೆ ಹಾಕೋ ಕೆಲಸ ನಿತ್ಯ ನಡೆಯುತ್ತಿದೆ. ರಾಜ್ಯ ಸರ್ಕಾರ ಆರ್ಥಿಕ ದಿವಾಳಿ ಆಗಿದೆ ಆಡಳಿತ ನಿಯಂತ್ರಣ ಸಿದ್ದರಾಮಯ್ಯ ಕಳೆದುಕೊಂಡಿದ್ದಾರೆ. ಹಾಲಿನ ದರಕ್ಕಾಗಿ ಜನ ಸಾಮಾನ್ಯರಿಗೆ ಬರೆಹಾಕೋ ಬದಲು ನಿಮ್ಮ ಖಜಾನೆಯಿಂದಲೇ ನೇರವಾಗಿ ಸಂದಾಯ ಮಾಡಲಿ. ಜನಸಾಮಾನ್ಯರಿಗೆ ತೊಂದರೆ ನೀಡುವ ಕೆಲಸ ಸರ್ಕಾರ ಮಾಡುತ್ತಿದೆ ಎಂದಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿಚಾರದಲ್ಲಿ ಏನು ನಡೆಯುತ್ತಿದೆ ನಡೆಯಲಿ. ಹೈಕಮಾಂಡ್ ವಾಪಸಾತಿ ಮಾಡೋಹಾಗಿದ್ರೆ ಮಾಡಲಿ. ಎಲ್ಲರೂ ಒಗ್ಗಟ್ಟಾಗಿ ಹೋಗಬೇಕು ಎನ್ನುವುದು ನನ್ನ ಆಶಯ. ಎಸ್ ಟಿ ಸೋಮಶೇಖರ್, ಶಿವರಾಂ ಹೆಬ್ಬಾರಗೆ ನೋಟಿಸ್ ಕೊಟ್ಟಿದ್ದಾರೆ.. ಆದಷ್ಟು ಬೇಗ ಕ್ರಮ ಆಗುತ್ತದೆ. ಹೈಕಮಾಂಡ್ ಜಾಣ್ಮೆ ಕ್ರಮಗಳನ್ನು ಸೂಕ್ತ ಸಮಯದಲ್ಲಿ ತೆಗೆದುಕೊಳ್ಳುತ್ತದೆ. ಬಿಹಾರ, ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಉತ್ತಮ ಆಡಳಿತವನ್ನು ಬಿಜೆಪಿ ನೀಡುತ್ತಿದೆ. ಹೀಗಾಗಿ ಇಂತಹ ಸಮಯದಲ್ಲಿ ಎಲ್ಲರೂ ಒಗ್ಗಟ್ಟಿನಲ್ಲಿರಬೇಕು ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು, ರಾಜ್ಯ ಸಚಿವ ಸತೀಶ್ ಜಾರಕಿಹೊಳಿ ಸಹಜ ಭೇಟಿ. ದೇವೆಗೌಡರು ಹಿರಿಯ ರಾಜಕಾರಣಿ ಅವರ ಭೇಟಿಯಲ್ಲಿ ಏನು ವಿಶೇಷವಿದೆ. ಹನಿಟ್ರ್ಯಾಪ್ ಇನ್ ಸೈಡ್ ವಾರ್. ಇದು ಪ್ರಾಕ್ಸಿ ವಾರ್.. ನಾಯಕರು ತಮ್ಮ ಹಿಂದೆ ಇರುವ ಶಾಸಕರು, ಸಚಿವರನ್ನು ಬಿಟ್ಟು ಮಾತನಾಡಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಏನು ಮಾತನಾಡುತ್ತಿಲ್ಲ. ಡಿಸಿಎಂ ಡಿಕೆ ಶಿವಕುಮಾರ್ ಸಹ ಸುಮ್ಮನೆ ಇದ್ದಾರೆ. ರಾಜಣ್ಣ ಸದನದಲ್ಲಿ ಓಪನ್ ಆಗಿ ಮಾತನಾಡಿ ಈಗ ದೂರು ನೀಡುತ್ತಿಲ್ಲ. ದೂರು ನೀಡಲು ತಡ ಮಾಡುತ್ತಿರುವುದು ನೋಡಿದ್ರೆ ರಾಜಣ್ಣ ಅವರದ್ದು ಏನೋ ಇರಬೇಕು. ಅವರ ಒಳಗೆ ಏನೋ ನಡೆಯುತ್ತಿದೆ ಅದನ್ನು ಮುಚ್ಚಿ ಹಾಕಲು ಪ್ರಯತ್ನ ನಡೆಯುತ್ತಿದೆ. ಹನಿಟ್ರ್ಯಾಪ್ ಸತ್ಯ ಹೊರ ಬಿದ್ರೆ ರಾಜ್ಯ ಸರ್ಕಾರಕ್ಕೆ ತೊಂದರೆಯಿದೆ ಹೀಗಾಗಿ ಏನೂ ಹೊರ ಬರಲ್ಲ. ಡಿಕೆ ಶಿವಕುಮಾರ್ , ಸಿದ್ದರಾಮಯ್ಯ ನಡುವೆ ವಾರ್ ನಡೆಯುತ್ತಿದೆ. ಇದರಲ್ಲಿ ಯಾರು ವಿಕ್ ಆಗಿತ್ತಾರೋ, ಯಾರು ಸ್ಟ್ರಾಂಗ್ ಆಗುತ್ತಾರೋ ಗೊತ್ತಿಲ್ಲ. ರಾಜ್ಯದಲ್ಲಿ ಸರ್ಕಾರ ಬದುಕಿಲ್ಲ. ರಾಜ್ಯ ಸರ್ಕಾರ ಸತ್ತು ಹೋಗಿದೆ ಪೋಸ್ಟ್ ಮಾರ್ಟಂ ಮಾಡೋದು ಮಾತ್ರ ಉಳಿದಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.