Sunday, September 8, 2024

Latest Posts

Yelahanka : ಶ್ರೀ ಮಡಿವಾಳ ಮಾಚಿದೇವರ ಜಯಂತ್ಯೋತ್ಸವ ಆಚರಣೆ..!

- Advertisement -

ಯಲಹಂಕ : ಯಲಹಂಕ (Yelahanka) ವಿಧಾನಸಭಾ ಕ್ಷೇತ್ರದ (Assembly constituency) ಸಿಂಗನಾಯಕನಹಳ್ಳಿಯಲ್ಲಿ ಮಡಿವಾಳ ಮಾಚಿದೇವರ (Madiwala Machidevara) ಜಯಂತ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು  ಶಾಸಕರು ಹಾಗೂ ಬಿಡಿಎ ಅಧ್ಯಕ್ಷರಾದ ಎಸ್ ಆರ್ ವಿಶ್ವನಾಥ್ (S R Vishwanath) ಅವರು ಜ್ಯೋತಿ  ಬೆಳಗುವ  ಉದ್ಘಾಟಿಸಿ ಮಾತನಾಡಿ ಶರಣರ ಸಾಲಿಗೆ ಸೇರಿದ  ಆದರ್ಶಮಯ ಮಹಾನ್ ಚೇತನ  ಶ್ರೀ ಮಡಿವಾಳ ಮಾಚಿದೇವರಾಗಿದ್ದಾರೆ. ಸಹಸ್ರಾರು ವರ್ಷಗಳ ಇತಿಹಾಸವಿರುವ ಮಡಿವಾಳ ಸಮುದಾಯ  ರಾಜಕೀಯವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ತುಂಬಾ ಹಿಂದುಳಿದ ಸಮಾಜವಾಗಿದ್ದು ಮುಂದಿನ ದಿನಗಳಲ್ಲಿ ಇಂತಹ ಶೋಷಿತ ಸಮಾಜದ ಜೊತೆ ನಾನು ನಮ್ಮ ಸರ್ಕಾರ ಸದಾ ನಿಮ್ಮ ಪರ ನಿಲ್ಲಲಿದೆ ಎಂದರು. ಹಾಗೂ ಸಿಂಗನಾಯಕನಹಳ್ಳಿ ಗ್ರಾಮದಲ್ಲಿ ಮಡಿವಾಳ ಸಮಾಜಕ್ಕೆ ಸುಮಾರು 50ಲಕ್ಷಗಳ ವೆಚ್ಚದಲ್ಲಿ ಮಾಚಿದೇವರ ಭವನ ನಿರ್ಮಿಸಿ ಕೊಡಲಾಗುವುದು ಎಂದರು. ಈಗಾಗಲೇ ಯಡಿಯೂರಪ್ಪ ನವರು ಮುಖ್ಯಮಂತ್ರಿಯಾಗಿದ್ದಾಗ  ಪ್ರೊಫೆಸರ್ ಅನ್ನಪೂರ್ಣಮ್ಮನವರು (Professor Annapurnamma) ನಡೆಸಿದ ಕುಲಶಾಸ್ತ್ರ ಅಧ್ಯಯನದ (genealogical studies) ಪ್ರಕಾರ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ (Scheduled Caste or Tribe) ಸೇರ್ಪಡೆ ಮಾಡಬಹುದು ಎಂದು ವರದಿ ನೀಡಲಾಗಿದೆ.  ಈಗಾಗಲೇ ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಶೇಕಡಾ 50ರಷ್ಟು ಮೀರಬಾರದು ಎಂಬ ಆದೇಶ ಇದೆ, ಆದ್ದರಿಂದ ಇದರ ಸಾಧಕ ಬಾಧಕಗಳ ಪರಿಶೀಲನೆ ನಡೆಸಿ ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ (Central government) ಕ್ಕೆ ಪ್ರಸ್ತಾವನೆ ಸಲ್ಲಿಸಲು  ನಮ್ಮ ಬಿಜೆಪಿ ಸರ್ಕಾರ ಸದಾ ಬದ್ಧವಾಗಿದೆ ಎಂದರು.

                                                                                        ಅಭಿಜಿತ್, ಕರ್ನಾಟಕ ಟಿವಿ, ದೊಡ್ಡಬಳ್ಳಾಪುರ.

- Advertisement -

Latest Posts

Don't Miss