Thursday, November 21, 2024

Latest Posts

ಹೌದು.. ನಾವು ದೂರವಾಗಿದ್ದೇವೆ: ಬ್ರೇಕಪ್ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಜಯಶ್ರೀ

- Advertisement -

Sandalwood News: ಬಿಗ್‌ಬಾಸ್ ಸ್ಪರ್ಧಿ, ನಟಿ ಮಾರಿಮುತ್ತು ಮೊಮ್ಮಗಳು ಜಯಶ್ರೀ ತಮ್ಮ ಬ್ರೇಕಪ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಜಯಶ್ರೀ ಮತ್ತು ಆಕೆಯ ಬಾಯ್‌ಫ್ರೆಂಡ್ ಸ್ಟೀವನ್ ಲಿವ್ ಇನ್ ರಿಲೆಶನ್‌ಶಿಪ್‌ನಲ್ಲಿ ಇದ್ದರು. ಆದರೆ ಇದೀಗ ಇಬ್ಬರೂ ಬ್ರೇಕಪ್ ಮಾಡಿಕೊಂಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಸ್ಟೀವನ್ ಮತ್ತು ಜಯಶ್ರೀ ಹಲವು ವರ್ಷಗಳಿಂದ ಲಿವ್ ಇನ್ ರಿಲೆಶನ್‌ಶಿಪ್‌ನಲ್ಲಿ ಇದ್ದರು. ಜಯಶ್ರೀ ಬಿಗ್‌ಬಾಸ್‌ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದು, ಸ್ಟೀವನ್ ಬಗ್ಗೆಯೂ ಮಾತನಾಡಿದ್ದರು. ಬಳಿಕ, ರಾಜಾ ರಾಣಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಅದಾದ ಬಳಿಕ ಜಯಶ್ರೀ ಬೆಂಗಳೂರಿನಲ್ಲಿ ಹೊಸ ಬ್ಯೂಟಿ ಸ್ಪಾ ಓಪನ್ ಮಾಡಿದರು.

ಇಬ್ಬರೂ ಸೇರಿ ಪಾರ್‌ಟ್ನರ್ಶಿಪ್‌ನಲ್ಲಿ ಈ ಉದ್ಯಮ ನಡೆಸುತ್ತಿದ್ದರು. ಈ ಉದ್ಯಮದಿಂದ ಇವರಿಬ್ಬರಿಗೂ ಪ್ರತೀ ತಿಂಗಳೂ ಲಕ್ಷ ಲಕ್ಷ ಆದಾಯ ಬರುತ್ತಿತ್ತು. ಆದರೆ ಇದೀಗ ಸ್ಟೀವನ್ ಜೊತೆ ಜಯಶ್ರೀ ಬ್ರೇಕಪ್ ಮಾಡಿಕೊಂಡಿದ್ದು, ನಾನು ನನ್ನ ಉದ್ಯಮವನ್ನು ಸಿಂಗಲ್ ಆಗಿ ನಡೆಸುತ್ತಿದ್ದೇನೆ. ಪಾರ್ಟರ್‌ಶಿಪ್ ಬಿಟ್ಟಿದ್ದೇನೆ. ಅವರವರ ಶೇರ್ ಅವರಿಗೆ ನೀಡಿದ್ದೇನೆ. ಸದ್ಯ ಉದ್ಯಮ ನನ್ನ ಹೆಸರಿನಲ್ಲಿ ಮಾತ್ರ ಇದೆ. ನೀವು ಕೇಳಿದ್ದು ನಿಜ, ನಾವು ದೂರವಾಗಿದ್ದೇವೆ ಎಂದಿದ್ದಾರೆ.

ಕೆಲ ದಿನಗಳಿಂದ ಜಯಶ್ರೀ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸ್ವತಂತ್ರವಾಗಿರುವ ಬಗ್ಗೆ, ಧೈರ್ಯದಿಂದ ಒಬ್ಬರೇ ಜೀವನ ನಡೆಸುತ್ತಿರುವ ಬಗ್ಗೆ ರೀಲ್ಸ್ ಹಾಕುತ್ತಿದ್ದರು. ಹೀಗಾಗಿ ಅವರ ಅಭಿಮಾನಿಗಳು, ಅವರ ಬ್ರೇಕಪ್ ಆಗಿದೆ ಎಂಬುದನ್ನು ಅಂದಾಜಿಸಿದ್ದರು. ಜಯಶ್ರೀ ತಮ್ಮ ತಂದೆ ತಾಯಿಯಿಂದ ದೂರವಿದ್ದು ಸ್ಟೀವನ್ ಜೊತೆ ಜೀವಿಸುತ್ತಿದ್ದರು. ಇದೀಗ ಒಬ್ಬಂಟಿಯಾಗಿ ಜೀವಿಸುತ್ತಿದ್ದಾರೆ. ಆದರೆ ಬ್ರೇಕಪ್‌ಗೆ ಕಾರಣವೇನು ಎಂಬುದು ತಿಳಿದು ಬಂದಿಲ್ಲ.

- Advertisement -

Latest Posts

Don't Miss