ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕು ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ಆಯುಷ್ಮಾನ್ ಭವ ಕಾರ್ಯಕ್ರಮದ ಅಡಿಯಲ್ಲಿ ಆಯುರ್ವೇದ ಆಯುಷ್ ವತಿಯಿಂದ ಮಹಿಳೆಯರಿಗೆ ಮತ್ತು ಗ್ರಾಮಸ್ಥರಿಗೆ ಯೋಗಾಸನ ತರಬೇತಿ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಮತ್ತು ಗ್ರಾಮಸ್ಥರಿಗೆ ಆರೋಗ್ಯಕರ ಜೀವನ ಶೈಲಿ, ಆಹಾರ ಪದ್ಧತಿ, ಆಯುರ್ವೇದ ಔಷಧಿಗಳ ಬಗ್ಗೆ ತಿಳಿಸಿ ಉಚಿತ ಔಷಧಿ ವಿತರಣೆ ಮಾಡಲಾಯಿತು. ಇದರ ಜೊತೆಗೆ ಡಾ. ಭುವನೇಶ್ವರಿ GAD ಹುಚ್ಚವ್ವನಹಳ್ಳಿ ಇವರು ಆರೋಗ್ಯ ಸಲಹೆಯನ್ನು ಗ್ರಾಮಸ್ಥರಿಗೆ ತಿಳಿಸಿದರು.
ಕಾರ್ಯಕ್ರಮಗಳ ಈ ಉಪಯೋಗವನ್ನು ಗ್ರಾಮಸ್ಥರಿಗೆ ಪರಿಚಯ ಮಾಡಿಕೊಟ್ಟರು ಆಯುಷ್ಮಾನ್ ಭವ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು ಈ ಕಾರ್ಯಕ್ರಮದಲ್ಲಿ ರೇವಣ್ಣ ಸ್ವಾಮಿ, ರಂಗನಾಥ್, ರೇಖಾ, ನೂರ್ ಜಾನ್, ಮಂಜಮ್ಮ, ಚಮನ್, ಬಿ ಜ್ಯೋತಿ, ಸುಲೋಚನಮ್ಮ ನಗೀನ ದುರ್ಗಮ್ಮ ಓಬಳೇಶ್ ಕೃಷ್ಣಪ್ಪ ನಯಾಜ್ ಮುಂತಾದವರು ಭಾಗಿಯಾಗಿದ್ದರು.
Cauvery Water : ಬೆಂಗಳೂರು ಬಂದ್ : ಟೌನ್ ಹಾಲ್ ಬಳಿ ಎಂದಿನಂತೆ ಜನ ಸಂಚಾರ