ಗೋರಖ್‌ಪುರದ ದೇವಸ್ಥಾನದಲ್ಲಿ ನಡೆದ ಸಂದರ್ಶನದಲ್ಲಿ, ಯೋಗಿ ಆದಿತ್ಯನಾಥ್ (Yogi Adityanath) ಅವರು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ (Asaduddin Owaisi) ಅವರ ವಾಹನದ ಮೇಲಿನ ದಾಳಿಯನ್ನು ಖಂಡಿಸಿದರು. ಉತ್ತರ ಪ್ರದೇಶದಲ್ಲಿ ಯಾವುದೇ ಮುಸ್ಲಿಂ ಅಭ್ಯರ್ಥಿಗಳನ್ನು(Muslim candidates) ಕಣಕ್ಕೆ ಇಳಿಸದಿರುವ ಕುರಿತು ಪ್ರತಿಕ್ರಿಯಿಸಿದ ಅವರು ನಾವು ಯಾವುದೇ ಮುಸ್ಲಿಂ ವಿರೋಧಿಗಳಲ್ಲ. ದೇಶ ವಿರೋಧಿಗಳ ವಿರುದ್ಧ ಇದ್ದೇವೆ. ಉತ್ತರ ಪ್ರದೇಶ ಸರ್ಕಾರದಲ್ಲಿ ಒಬ್ಬ ಮುಸ್ಲಿಂ ಮಂತ್ರಿ ಇದ್ದಾರೆ. ನಖ್ವಿ ಜಿ ಕೇಂದ್ರ ಸರ್ಕಾರದ ಮಂತ್ರಿ ಆಗಿದ್ದಾರೆ. ಆರಿಫ್ ಮೊಹಮ್ಮದ್ ಖಾನ್ (Arif Mohammed Khan) ಕೇರಳದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಾವು ಯಾವುದೇ ಧರ್ಮ ಅಥವಾ ಜಾತಿಯನ್ನು ವಿರೋಧಿಸುವುದಿಲ್ಲ. ಆದರೆ ಭಾರತ ಮತ್ತು ಭಾರತೀಯತೆಯನ್ನು ವಿರೋಧಿಸುವವರನ್ನು ನಾವು ವಿರೋಧಿಸುತ್ತೇವೆ ಎಂದು ಸ್ಪಷ್ಟಪಡಿಸಿದರು ಸಂಸತ್ನಲ್ಲಿ ರಾಹುಲ್ ಗಾಂಧಿ (Rahul Gandhi) ಭಾಷಣ ಖಂಡಿಸಿದ ಅವರು, ಮತ ಬ್ಯಾಂಕ್ ರಾಜಕಾರಣಕ್ಕಾಗಿ ರಾಷ್ಟ್ರದ ಭದ್ರತೆಯೊಂದಿಗೆ ಆಟವಾಡುತ್ತಿದ್ದಾರೆ, ಅವರಿಗೆ ಮತ ಬ್ಯಾಂಕ್ (vote bank) ಮಾತ್ರ ಮುಖ್ಯವಾಗಿದೆ ಎಂದು ಇದೇ ವೇಳೆ ಟೀಕಿಸಿದರು. ಇನ್ನು ಇದೇ ವೇಳೆ ತಮ್ಮ ಮೊದಲ ವಿಧಾನಸಭಾ ಚುನಾವಣೆಗೆ ಗೋರಖ್ಪುರ ಕ್ಷೇತ್ರ ಆಯ್ಕೆ ಮಾಡಿದ್ದಕ್ಕೆ ಪಕ್ಷ ಮತ್ತು ಪ್ರಧಾನಿಗೆ ಧನ್ಯವಾದ ತಿಳಿಸಿದರು. ಕಳೆದ ಆರು ತಿಂಗಳಿಂದ ನಡೆಯುತ್ತಿರುವ ಸತತ ಸಮೀಕ್ಷೆಗಳಲ್ಲಿ ಸಮಾಜವಾದಿ ಪಕ್ಷ ಕ್ಷೀಣಿಸುತ್ತಿದೆ ಎಂಬುದನ್ನು ತೋರಿಸಿದೆ. ಮೊದಲ ಎರಡು ಹಂತದ ಚುನಾವಣೆಗೆ ಪ್ರಚಾರ ಆರಂಭಿಸಿದಾಗ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂಬುದು ಸ್ಪಷ್ಟವಾಯಿತು. ಈ ಚುನಾವಣೆಯು ಅಂತಿಮವಾಗಿ 80% ಮತ್ತು 20%ರ ಗೆಲುವು ಪಡೆಯಲಿದೆ ಬಿಜೆಪಿ 80%, ಇತರೆ ಪಕ್ಷಗಳು 20% ಇರುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ತಮ್ಮ ವೋಟ್ ಬ್ಯಾಂಕ್ ರಕ್ಷಿಸಿಕೊಳ್ಳಲು ಹೀಗೆ ಮಾಡುತ್ತಾರೆ. ಮತ ಬ್ಯಾಂಕ್‌ಗಾಗಿ ಅವರು ರಾಷ್ಟ್ರೀಯ ಭದ್ರತೆಯಲ್ಲೂ ರಾಜಿ ಮಾಡಿಕೊಳ್ಳಬಹುದು. ಸಂಸತ್ತಿನಲ್ಲಿ ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಮಾಜಿ ಕಾಂಗ್ರೆಸ್ ಅಧ್ಯಕ್ಷರ ಬೇಜವಾಬ್ದಾರಿ ಹೇಳಿಕೆಯನ್ನು ನೀವು ನೋಡಿಲ್ಲವೇ? ಕಾಶ್ಮೀರ ಕುರಿತ ಭಾರತದ ನೀತಿಗಳನ್ನು ಪಾಕಿಸ್ತಾನ ಹೊರತುಪಡಿಸಿ ಯಾವುದೇ ದೇಶ ವಿರೋಧಿಸಿಲ್ಲ. ರಾಹುಲ್ ಗಾಂಧಿ ತಮ್ಮನ್ನು ಕಾಂಗ್ರೆಸ್‌ನ ಜವಾಬ್ದಾರಿಯುತ ನಾಯಕ ಎಂದು ಪರಿಗಣಿಸುತ್ತಾರೆಯೇ? ಕಾಶ್ಮೀರದಲ್ಲಿ ಅವರು ಪಾಕಿಸ್ತಾನದ ಭಾಷೆಯಲ್ಲಿ ಮಾತನಾಡುತ್ತಾರೆ. ಇಂತಹ ಬೇಜವಾಬ್ದಾರಿ ಹೇಳಿಕೆಯನ್ನು ಪ್ರಜಾಸತ್ತಾತ್ಮಕವಾಗಿ ಚುನಾಯಿತ ಯಾವುದೇ ಸರ್ಕಾರ ಸಹಿಸುವುದಿಲ್ಲ. ಇಲ್ಲಿ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಉಲ್ಲೇಖಿಸುವುದು ಮುಖ್ಯವಾಗಿದೆ. ನಾನು ಕೇವಲ ರಾಹುಲ್ ಅವರನ್ನು ಮಾತ್ರ ಹೆಸರಿಸಿಲ್ಲ. ನಾನು ಎಸ್‌ಪಿ, ಬಿಎಸ್‌ಪಿ ಮತ್ತು ಕಾಂಗ್ರೆಸ್ ಪಟ್ಟಿಯಲ್ಲಿರುವ ಅಭ್ಯರ್ಥಿಗಳನ್ನು ಹೆಸರಿಸಿದ್ದೇನೆ. ಈ ಹೆಸರುಗಳು ಯುಪಿಯ ವಿವಿಧ ಭಾಗಗಳಲ್ಲಿ ಬೆದರಿಕೆಗಳನ್ನು ಒಡ್ಡುತ್ತಿವೆ. ಅವರು 4.5 ವರ್ಷಗಳ ಕಾಲ ಮೌನವಾಗಿದ್ದರು. ಆದರೆ ಟಿಕೆಟ್ ಘೋಷಣೆಯಾದಾಗ ಮತ್ತೆ ತಲೆ ಎತ್ತಲು ಪ್ರಾರಂಭಿಸಿದರು. ಅವರಿಗೆ ತಕ್ಕ ಉತ್ತರ ನೀಡುವುದು ಮುಖ್ಯವಾಗಿದೆ. ಪ್ರಜಾಪ್ರಭುತ್ವದಲ್ಲಿ ನಾವು ಬ್ಯಾಲೆಟ್ ಪೇಪರ್ ಅನ್ನು ಹೆಚ್ಚು ನಂಬುತ್ತೇವೆ, ಬುಲೆಟ್ ಅನ್ನು ಅಲ್ಲ. ಇಂತಹ ದಾಳಿಯ ಘಟನೆಗಳು ಒಪ್ಪುವುದಿಲ್ಲ. ನಮ್ಮನಡುವೆ ಯಾವುದೇ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಕೂಡ ಯಾರೂ ಕಾನೂನನ್ನು ಕೈಯಲ್ಲಿ ತೆಗೆದುಕೊಳ್ಳಲು ಅನುಮತಿಸುವುದಿಲ್ಲ.